ವಿಭಜನೆ ವಿಷಯಾಂತರದಲ್ಲಿ ಸಿದ್ದರಾಮಯ್ಯ, ನಿಸ್ಸಿಮರು: ಸಿ.ಟಿ.ರವಿ ವ್ಯಂಗ್ಯ
ಹುಬ್ಬಳ್ಳಿ, ಜುಲೈ 21 : ವಿಭಜನೆ ಮತ್ತು ವಿಷಯಾಂತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಮಾಜವನ್ನು ಜಾತಿಗಳ ಮೂಲಕ ಒಡೆದು ಆಳುತ್ತಿರುವ ಸಿದ್ದರಾಮಯ್ಯ, ಶಾಲಾ ಮಕ್ಕಳಿಂದ ಹಿಡಿದು ರೈತರವರೆಗೂ ವಿಭಜನೆ ಮಾಡಿದ್ದಾರೆ. ಅಲ್ಲದೆ ಪ್ರಾಮಾಣಿಕ ಅಧಿಕಾರಿಗಳನ್ನು ಅವರು ಕಾರ್ಯನಿರ್ವಹಿಸುವ ಜಾಗೆಯಿಂದ ವಿಭಜನೆ ಮಾಡುತ್ತಾರೆ" ಎಂದು ವ್ಯಂಗ್ಯವಾಡಿದರು.

ಹೀಗೆ ಇವರ ವಿಭಜನೆ ಕುತಂತ್ರವನ್ನು ಜನರು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಸಂದರ್ಭದಲ್ಲಿ ಧ್ವಜದ ನಾಟಕದ ಮೂಲಕ ವಿಷಯಾಂತರ ಮಾಡುವುದರಲ್ಲಿ ಇವರು ಪರಿಣಿತರು.
ರಾಜ್ಯದ ಜನರ ನಿರೀಕ್ಷೆಯನ್ನು ಹುಸಿ ಮಾಡಿರುವ ಮುಖ್ಯಮಂತ್ರಿ ಸಾಲಮಾಡುವುದರಲ್ಲಿ ಮುಂದಿದ್ದಾರೆ. ಈವರೆಗೆ 1.32 ಸಾವಿರ ಕೋಟಿ ಸಾಲ ಮಾಡಿರುವ ರಾಜ್ಯ ಸರ್ಕಾರ ಜನರಿಗೆ ಸಾಲದ ಭಾಗ್ಯ ಕರುಣಿಸಿದೆ.
ಅಲ್ಲದೆ ಸಾಲಮನ್ನಾ ಮಾಡಿರುವುದಾಗಿ ಜಂಭಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ ಅದರಲ್ಲಿ ಕ್ರಿಮಿನಲ್ ಬುದ್ದಿ ಉಪಯೋಗಿಸಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಕಿಡಿಕಾರಿದರು.












Click it and Unblock the Notifications