ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕ ಸಚಿವಾಕಾಂಕ್ಷಿಗಳಿಗೆ ಅನ್ಯಾಯ ಆಗಲ್ಲ: ದಿನೇಶ್ ಗುಂಡೂರಾವ್

|
Google Oneindia Kannada News

Recommended Video

Dinesh Gundu Rao : ಉತ್ತರ ಕರ್ನಾಟಕ ಸಚಿವಾಕಾಂಕ್ಷಿಗಳಿಗೆ ಅನ್ಯಾಯ ಆಗಲ್ಲ | Oneindia Kannada

ಹುಬ್ಬಳ್ಳಿ, ಡಿಸೆಂಬರ್ 19: ಉತ್ತರ ಕರ್ನಾಟಕ ಭಾಗದ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೆನ್ನೂ ತೃಪ್ತಿಪಡಿಸಬೇಕು ಎಂಬ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡುತ್ತಿಲ್ಲ, ರಾಜ್ಯದ ಅಭಿವೃದ್ಧಿ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಪಕ್ಕಾ, ಮುಂದೂಡುವ ಮಾತೇ ಇಲ್ಲ: ದಿನೇಶ್ ಗುಂಡೂರಾವ್ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಪಕ್ಕಾ, ಮುಂದೂಡುವ ಮಾತೇ ಇಲ್ಲ: ದಿನೇಶ್ ಗುಂಡೂರಾವ್

ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ಸಂಪುಟ ವಿಸ್ತರಣೆಯಲ್ಲಿ ನೀಡಲಾಗುತ್ತಿದೆ. ಸಂಪುಟ ವಿಸ್ತರಣೆಯೂ ಆಗಬಹುದು ಸರ್ಜರಿಯೂ ಆಗಬಹುದು ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು ದಿನೇಶ್ ಗುಂಡೂರಾವ್.

'ಎಲ್ಲರೂ ಮಂತ್ರಿ ಆಗಲಾರರು'

'ಎಲ್ಲರೂ ಮಂತ್ರಿ ಆಗಲಾರರು'

ಎಲ್ಲರಿಗೂ ಮಂತ್ರಿ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲರಿಗೂ ಅವಕಾಶ ದೊರಕುವುದಿಲ್ಲ. ಪ್ರಾಂತ, ಜಾತಿ ಆಧಾರವನ್ನೂ ಸಹ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ದಿನೇಶ್ ಹೇಳಿದರು.

'ಸಭೆಗೆ ಗೈರಾಗುವುದು ಸಾಮಾನ್ಯ'

'ಸಭೆಗೆ ಗೈರಾಗುವುದು ಸಾಮಾನ್ಯ'

ಶಾಸಕಾಂಗ ಸಭೆಗೆ ಸದಸ್ಯರು ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಶಾಸಕಾಂಗ ಸಭೆಗಳಿಗೆ ಶಾಸಕರು ಗೈರಾಗುವುದು ಹೊಸದೇನೂ ಅಲ್ಲ. ಕೆಲವು ಶಾಸಕರು ಕಾರಣ ಹೇಳಿಯೇ ಗೈರಾಗಿದ್ದರು, ಇದರಲ್ಲಿ ಹೊಸ ವಿಷಯವೇನೂ ಇಲ್ಲ ಎಂದು ಅವರು ಹೇಳಿದರು.

ಸದ್ದಿಲ್ಲದೆ ಸಿದ್ದರಾಮಯ್ಯ ವಿರುದ್ಧ ಗೆದ್ದ ಪರಮೇಶ್ವರ್, ದಿನೇಶ್‌ ಗುಂಡೂರಾವ್!ಸದ್ದಿಲ್ಲದೆ ಸಿದ್ದರಾಮಯ್ಯ ವಿರುದ್ಧ ಗೆದ್ದ ಪರಮೇಶ್ವರ್, ದಿನೇಶ್‌ ಗುಂಡೂರಾವ್!

ಉತ್ತರ ಕರ್ನಾಟಕ ಶಾಸಕರಿಗೆ ಸಂತಸ

ಉತ್ತರ ಕರ್ನಾಟಕ ಶಾಸಕರಿಗೆ ಸಂತಸ

ದಿನೇಶ್ ಗುಂಡೂರಾವ್ ಅವರ ಹೇಳಿಕೆ ಉತ್ತರ ಕರ್ನಾಟಕದ ಸಚಿವಾಕಾಂಕ್ಷಿಗಳಿಗಳಿಗೆ ಸಂತಸ ಮೂಡಿಸಿದೆ. ಎಂಬಿ.ಪಾಟೀಲ್, ಆನಂದ್ ಸಿಂಗ್, ಬಿಸಿ ಪಾಟೀಲ್, ಶಿವಳ್ಳಿ, ತುಕಾರಾಂ ಸೇರಿ ಇನ್ನೂ ಹಲವು ಜನ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ದಕ್ಷಿಣ ಕರ್ನಾಟಕದವರಿಗೆ ನಿರಾಸೆ

ದಕ್ಷಿಣ ಕರ್ನಾಟಕದವರಿಗೆ ನಿರಾಸೆ

ಎಂಟಿಬಿ ನಾಗರಾಜು, ಡಾ.ಸುಧಾಕರ್, ರಾಮಲಿಂಗಾರೆಡ್ಡಿ, ತನ್ವೀರ್ ಸೇಠ್ ಅವರುಗಳು ದಕ್ಷಿಣ ಕರ್ನಾಟಕದ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ. ನಾರಾಯಣಸ್ವಾಮಿ, ಶಾಮನೂರು ಶಿವಶಂಕರಪ್ಪ ಸಹ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಇವರಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕಾದು ನೊಡಬೇಕಿದೆ.

ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?

English summary
KPCC president Dinesh Gundu Rao says, North Karnataka minister post aspirants will get good news in cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X