ಹುಬ್ಬಳ್ಳಿ ಪೊಲೀಸರಿಂದ ಭರ್ಜರಿ ಬೇಟೆ, ಐವರು ದರೋಡೆಕೋರರ ಬಂಧನ
ಹುಬ್ಬಳ್ಳಿ, ಜುಲೈ 6: ಹುಬ್ಬಳ್ಳಿಯ ಕಸಬಾ ಪೇಟೆ ಹಾಗೂ ಹಳೇ ಹುಬ್ಬಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ 5 ಜನ ಹೆದ್ದಾರಿ ದರೋಡೆಕೋರರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಅಕ್ಬರ್ ಅಲಿ ಎಂಬುವರ ಕಾರನ್ನು ತಡೆದು ಜೂನ್ 30ರಂದು ನಗರದ ರಾಯನಾಳ ಬ್ರಿಡ್ಜ್ ಬಳಿ ದರೋಡೆ ಮಾಡಲಾಗಿತ್ತು. ಈ ಪ್ರಕರಣ ಬೆನ್ನತ್ತಿದ ಪೊಲೀಸರು ಇದೀಗ 5 ಜನ ಹೆದ್ದಾರಿ ದರೋಡೆಕೋರರನ್ನು ಬಂದಿಸಿದ್ದಾರೆ.

ತಮ್ಮ ಕಾರನ್ನು ತಡೆದು ದರೋಡೆ ನಡೆಸಿದ ಸಂಬಂಧ ಅಕ್ಬರ್ ಅಲಿ ಎಂಬುವರು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಡೇವಿಡ್ ಪೋಪಟ್, ಗೋವಿಂದ ಅಂಬಿಗೇರ್, ಶಂಕರ್ ಆಲೂರ್, ಮಂಜುನಾಥ ಕಣಕಿ ,ಸಾಧಿಕ್ ಹತ್ತಿವಾಲೆ ಐದು ಜನ ದರೋಡೆಕೋರರಾಗಿದ್ದಾರೆ.

ಇನ್ನು ಬಂಧಿತರಿಂದ 3 ಲಕ್ಷ ಮೌಲ್ಯದ 7 ಮೊಬೈಲ್, 7 ಬೈಕ್ ಗಳನ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದರೋಡೆಕೋರರ ತಂಡ ಮತ್ತೊಂದು ದರೋಡೆಗೆ ಸ್ಕೆಚ್ ಹಾಕಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications