ಹನುಮಂತನಿಗೂ ಕೊರೊನಾ ಭೀತಿ; ಪೂಜೆಗೆ ಸಾಮಾಜಿಕ ಅಂತರ
ಹುಬ್ಬಳ್ಳಿ, ಏಪ್ರಿಲ್ 08 : ಕೊರೊನಾ ಹರಡದಂತೆ ತಡೆಯಲು ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಕೊರೊನಾ ಭೀತಿಯ ನಡುವೆ ಜನರು ಯುಗಾದಿ, ರಾಮನವಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಬುಧವಾರ ಹನುಮ ಜಯಂತಿ ಬಂದಿದೆ.
Recommended Video
ಹನುಮ ಜಯಂತಿದಿನದಂದು ಬಹಳ ಜನರು ಹನುಮಂತ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಲಾಕ್ ಡೌನ್ ಪರಿಣಾಮ ದೇವಾಲಯದ ಬಾಗಿಲು ಮುಚ್ಚಿದೆ. ಜನರು ಮನೆಯಿಂದ ಹೊರ ಬರುವಂತಿಲ್ಲ. ದೇವಾಲಯಕ್ಕೆ ಹೋಗುವುದು ದೂರದ ಮಾತು.
ಕೊರೊನಾ ಹರಡದಂತೆ ತಡೆಯಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಜನರು ಅಗತ್ಯ ವಸ್ತುಗಳ ಖರೀದಿಗೆ ಹೋದಾಗ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹನುಮನ ಪೂಜೆಗೆ ಸಾಮಾಜಿಕ ಅಂತರ ಕಾಪಾಡಬೇಕಿದೆ.

ಹುಬ್ಬಳ್ಳಿಯಲ್ಲಿ ದೇವಾಲಯಗಳು ಬಾಗಿಲು ಹಾಕಿದೆ. ಆದ್ದರಿಂದ, ಹನುಮನ ಭಕ್ತರು ರಸ್ತೆಯ ಪಕ್ಕದಲ್ಲಿರುವ ಹನುಮನ ಚಿಕ್ಕ ಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಪೂಜೆ ಸಲ್ಲಿಸುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಫೋಟೋ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಟ್ವೀಟ್ ಮಾಡಿ ದೇಶದ ಜನರಿಗೆ ಹನುಮ ಜಯಂತಿ ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕೀಯ ನಾಯಕರು ಹನುಮ ಜಯಂತಿ ಶುಭಾಶಯಗಳನ್ನು ತಿಳಿಸಲು ಟ್ವೀಟ್ ಮಾಡಿದ್ದಾರೆ.












Click it and Unblock the Notifications