ರಣಜಿ: ಗುಜರಾತ್-ಮುಂಬಯಿ ನಡುವಿನ ಪಂದ್ಯ ಡ್ರಾ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 25 : ಇಲ್ಲಿನ ರಾಜನಗರದ ಕೆಎಸ್ ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ಗುಜರಾತ್ ಮತ್ತು ಮುಂಬಯಿ ತಂಡಗಳ ನಡುವಿನ ರಣಜಿ ಪಂದ್ಯ ಗುರುವಾರ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಗುಜರಾತ್ ತಂಡಕ್ಕೆ 3 ಮತ್ತು ಮುಂಬಯಿ ತಂಡಕ್ಕೆ 1 ಅಂಕ ನೀಡಲಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಗುಜರಾತ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 437ರನ್ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಮುಂಬಯಿ ಶ್ರೇಯಸ್ ಅಯ್ಯರ್ (194), ಧವಲ ಕುಲಕರ್ಣಿ (61) ಮತ್ತು ಶ್ರೇಯಸ್ ಅಯ್ಯರ್ (56) ಇವರ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 143 ಓವರ್ ಗಳಲ್ಲಿ 422 ರನ್ ಗಳಿಗೆ ಸರ್ವಪತನ ಕಂಡಿತು.[ರಣಜಿ ಟ್ರೋಫಿ: ಮುಂಬಯಿ-ಗುಜರಾತ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ]

Gujarat-Mumbai Ranaji Test ends in a draw

ಇದರಿಂದ ಗುಜರಾತ್ 15 ರನ್ ಗಳ ಅಲ್ಪ ಮೊತ್ತದಿಂದ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಗುಜರಾತ್ ಆರಂಭಿಕ ಅಟಗಾರ ಪ್ರಿಯಾಂಕ ಪಾಂಚಾಲ (56) ಮತ್ತು ಸಮಿತ ಗೋಯಲ್ (18) ಅವರ ನೆರವಿನಿಂದ 82 ರನ್ ಗಳಿಸಿತ್ತು.

ಮಧ್ಯಾಹ್ನ ಚಹಾ ವಿರಾಮ ವೇಳೆಗೆ ಪಂದ್ಯದ ತೀರ್ಪುಗಾರರಾದ ಕೃಷ್ಣರಾಜ್ ಶ್ರೀನಾಥ, ಜಯರಾಮನ್ ಮದನಗೋಪಾಲ,ಮಧುಸೂಧನ ರೆಡ್ಡಿ ಪಂದ್ಯವನ್ನು ಡ್ರಾ ಎಂದು ಘೋಷಿಸಿದರು.

ಸ್ಕೋರ್ ವಿವರ:
ಗುಜರಾತ್ ಮೊದಲನೇ ಇನ್ನಿಂಗ್ಸ್ : 160.1 ಓವರ್ ಗಳಲ್ಲಿ 437.
ಮುಂಬಯಿ ಮೊದಲನೇ ಇನ್ನಿಂಗ್ಸ್ : 143 ಓವರ್ ಗಳಲ್ಲಿ 422.
ಗುಜರಾತ್ ಎರಡನೇ ಇನ್ನಿಂಗ್ಸ್ : 45 ಓವರ್ ಗಳಲ್ಲಿ 82.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With Mumbai putting up a stiff resistance on the pentultimate day of their Ranji Trophy encounter against Gujarat here, the only realistic outcome in this match was a draw, and that's how things panned out at the KSCA Stadium on Thursday.
Please Wait while comments are loading...