ಯುವಕರಿಗೆ ಗುಡ್‌ನ್ಯೂಸ್: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಮೇ.16: ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 2025ನೇ ಸಾಲಿಗೆ ವಿವಿಧ ವೃತ್ತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿವೆ. ಆಸಕ್ತಿಯುಳ್ಳ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಹಾಗೂ 8ನೇ ತರಗತಿ ಉತ್ತೀರ್ಣರಾದ (ಬೆಸುಗೆ ವೃತ್ತಿಗೆ ಮಾತ್ರ) ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು https://cite.karnataka.gov.in ವೆಬ್‌ಸೈಟ್ ಮುಖಾಂತರ ಮೇ 28 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್, ಎಂ.ಆರ್.ಎ.ಸಿ. ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಐ.ಸಿ.ಟಿ.ಎಸ್.ಎಂ., ಡಿ.ಎಂ.ಸಿ. ಆರ್ಕಿಟೆಕ್ಚರಲ್ ಅಸಿಸ್ಟಂಟ, ಕೋಪಾ, ಸಿ.ಹೆಚ್.ಎನ್.ಎಂ. ಸ್ಟೆನೊ., ಟರ್ನರ್, ಫಿಟ್ಟರ್, ಮಷಿನಿಷ್ಟ, ಮಷಿನಿಷ್ಟ ಗ್ರೆಂಡರ್, ವೆಲ್ಡರ್, ಮೆಕ್ಯಾನಿಕ್ ಡೀಸಲ್., ಎಂ.ಎಂ.ವಿ. ಎಸ್.ಎಂ. ಡಬ್ಲೂಯ., ಎಂ.ಇ.ವಿ., ಆಯ್.ಆರ್. & ಡಿ.ಎಂ.ಟಿ., ಮೆನ್ಯೂಪೆಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಅಟೋಮೇಶನ್, ವರ್ಚುವಲ್ ಅನೈಲಸಸ್ & ಡಿಸೈನರ್, ಎಂಜಿನಿಯರಿಂಗ್ ಡಿಸೈನ್ ಟೆಕ್ನಿನಿಷಿಯನ್ ಮತ್ತು ಎಂ.ಎ.ಬಿ.ಆರ್. ವೃತ್ತಿಗಳಿವೆ. ಮೆರಿಟ್ ಕಮ್ ಮೀಸಲಾತಿ ಆಧಾರದ ಮೇಲೆ ಒಟ್ಟು 854 ಸ್ಥಾನಗಳು ಲಭ್ಯವಿರುತ್ತವೆ.

ಇನ್ನು ಇದಕ್ಕೆ ಪ್ರವೇಶ ಶುಲ್ಕ ವರ್ಷಕ್ಕೆ 1200 ರೂಪಾಯಿ ಮಾತ್ರ ಇದ್ದು. ಹೆಚ್ಚಿನ ಮಾಹಿತಿಗೆ ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.17 ಮತ್ತು 18 ರಂದು 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಮೇ.17 ಮತ್ತು 18 ರಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮೇ.17 ರಂದು ಬೆಳಿಗ್ಗೆ 10 ಗಂಟೆಗೆ 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಸಭಾಂಗಣದಲ್ಲಿ ಜರುಗಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ ನಾಯ್ಕ ಟಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.(ಡಾ.) ಸಿ. ಬಸವರಾಜು ಅವರು ಅಧ್ಯಕ್ಷತೆ ವಹಿಸುವರು.
ಮೇ.18 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ರವಿ ವಿ.ಹೊಸಮನಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಬೂದಿಹಾಳ್ ಆರ್.ಬಿ., ಧಾರವಾಡ ಜಿಲ್ಲಾ ನ್ಯಾಯಾಲಯದ ಹಿರಿಯ ವಕೀಲರಾದ ಬಸವಪ್ರಭು ಹೊಸಕೇರಿ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.(ಡಾ.) ಸಿ. ಬಸವರಾಜು ಅವರು ಅಧ್ಯಕ್ಷತೆ ವಹಿಸುವರು. ವಿಶ್ವವಿದ್ಯಾಲಯದ ಆಡಳಿತಾಂಗ ಕುಲಸಚಿವರಾದ ಗೀತಾ ಈ. ಕೌಲಗಿ, ಪರೀಕ್ಷಾಂಗದ ಕುಲಸಚಿವರಾದ ಪ್ರೊ.(ಡಾ.) ರತ್ನಾ ಆರ್. ಭರಮಗೌಡರ್ ಅವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications