ಕಾಂಗ್ರೆಸ್‌ನವರು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ; ಅಶ್ವತ್ಥ್ ನಾರಾಯಣ್ ಆಕ್ರೋಶ
ಹುಬ್ಬಳ್ಳಿ, ಡಿಸೆಂಬರ್, 27: ದೇಶದಲ್ಲಿ ಕೋವಿಡ್ ಹೆಚ್ಚಳವಾಗಿದ್ದು, ನಾವು ಮುನ್ನೆಚ್ಚರಿಕೆ ವಹಿಸಬೇಕು. ಚೀನಾದಲ್ಲಿ ಕೋವಿಡ್ ನಾವು ಬಿಟ್ಟಿದೀವಾ? ಇದೊಂದು ಸೋಂಕಿನ ಕಾಯಿಲೆ, ಹೊಸ ಹೊಸ ತಳಿ ಮೂಲಕ ಬರುತ್ತಿದೆ. ಇವರಿಗೆ ರಾಜಕೀಯ ಬಿಟ್ಟು ಬೇರೆ ಏನೂ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ಗೆ ಸಚಿವ ಅಶ್ವತ್ಥ್ ನಾರಾಯಣ್ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ನವರು ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ನಾವು ತುಪ್ಪವನ್ನು ಬಾಯಿಗೆ ಹಾಕುತ್ತೇವೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ಗೆ ಅಧಿಕಾರದ ಹಸಿವು ನಿರಂತರ ಕಾಡುತ್ತಿದೆ. ಅವರ ತಲೆಯಲ್ಲಿ ರಾಜಕೀಯ ವಿಚಾರ ಬಿಟ್ಟು ಬೇರೆನೂ ಇಲ್ಲ. ಜನರ ಬಗ್ಗೆ ಸ್ವಲ್ಪನೂ ಕಾಳಜಿ ಇಲ್ಲ. ಯಾವಾಗ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಯುತ್ತಿದ್ದಾರೆ.
ಅಧಿಕಾರ ತಪ್ಪಿ ಹೋಗಿರುವುದಕ್ಕೆ ಅವರಿಗೆ ಸಂಕಟ ಆಗುತ್ತಿದೆ. ಆದ್ದರಿಂದ ಅಧಿಕಾರ ಪಡೆಯುವುದಕ್ಕೆ ಕೋವಿಡ್ ನೆಪದಲ್ಲಿ ಅವಧಿಪೂರ್ವ ಚುನಾಚಣೆ ಅಂತಿದಾರೆ. ಅವರ ಅಭಿವೃದ್ಧಿ, ಕಾಂಗ್ರೆಸ್ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಠಾಕ್ರೆಗೆ ಅಶ್ವತ್ಥ್ ನಾರಾಯಣ್ ತಿರುಗೇಟು
ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂಬೈನಲ್ಲಿ ಎಷ್ಟು ಮರಾಠಿಗರಿದ್ದಾರೆ ಎಂದು ಕೇಳಿದರೆ ಅವರಿಗೆ ಸಮಸ್ಯೆ ಆಗುತ್ತದೆ. ಅವರು ಮಾತಾಡುವಾಗ ಸ್ವಲ್ಪ ಆಲೋಚನೆ ಮಾಡಬೇಕು. ಹೀಗೆ ಪದೇ ಪದೇ ಸುಮ್ಮನೆ ಮಾತನಾಡಿ ಜನರ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಇದೆಲ್ಲ ರಾಜಕೀಯ ಪ್ರೇರಿತವಾಗಿದೆ. ಅಧಿಕಾರದಲ್ಲಿದ್ದಾಗ ಜನರ ಅಭಿವೃದ್ಧಿಗಾಗಿ ಏನೂ ಮಾಡುವುದಿಲ್ಲ. ತಮ್ಮ ಸ್ವಾರ್ಥಕ್ಕೆ ಬೇಡವಾದ ಕೆಲಸವನ್ನು ಮಾಡುತ್ತಾರೆ ಎಂದು ಉದ್ಧವ್ ಠಾಕ್ರೆಗೆ ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದರು.

ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ನವರು ಅಧಿಕಾರದಲ್ಲಿ ಇದ್ದಾಗ ಮೀಸಲಾತಿ ವಿಚಾರ ಯಾಕೆ ನೆನಪಾಗಲಿಲ್ಲ. ಅವರು ಆಗ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿದ್ದರು. ನಾವು ಮೂಗಿಗೆ ತುಪ್ಪ ಸವರಲ್ಲ, ಬಾಯಿಗೆ ಕೊಡುತ್ತೇವೆ. ಮೋಸ ಮಾಡುವುದು, ರಾಜಕೀಯ ಮಾಡುವುದು, ತುಷ್ಟೀಕರಣ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿಯಾವಿದೆ. ಆದರೆ ನಾವು ಸಮಾಜದ ಅಭಿವೃದ್ಧಿಯನ್ನು ಮಾತ್ರ ಬಯಸುತ್ತೇವೆ ಎಂದರು.












Click it and Unblock the Notifications