LPG Price: ಮೇ 2ರಂದು ಬೃಹತ್ ಪ್ರತಿಭಟನೆ
ಹುಬ್ಬಳ್ಳಿ, ಏಪ್ರಿಲ್ 20: ಕೇಂದ್ರ ಸರ್ಕಾರ ಮನೆ ಬಳಕೆಯು ಸಿಲಿಂಡರ್ ದರ ಏರಿಕೆ ಮಾಡಿದೆ. 2023ಕ್ಕೆ ಹೋಲಿ ಮಾಡಿದರೆ ಶೇಕಡಾ 60ರಷ್ಟು ಅಧಿಕ ಪ್ರಮಾಣದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ LPG ದರ ಹೆಚ್ಚಾಗಿದೆ. ರಾಜ್ಯ ಸರ್ಕಾರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೆ ಕೇಂದ್ರ ಸರ್ಕಾರ ಬೆಲೆಗಳನ್ನು ಹೆಚ್ಚಿಸಿತ್ತು. ಬಿಜೆಪಿ ನಾಯಕರ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ಮೇ 2ರಂದು ಹಮ್ಮಿಕೊಂಡಿದ್ದಾರೆ.
ಏಪ್ರಿಲ್ 08ರಿಂದ ಜಾರಿಗೆ ಬರುವಂತೆ ಗೃಹ ಬಳಕೆ ಸಿಲಿಂಡರ್ ದರ 50 ರೂ.ಗೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಕಚ್ಚಾ ತೈಲದ ಬ್ಯಾರೆಲ್ ದರ ಕಡಿಮೆ ಇದ್ದರೆ ಇಂಧನ ದರ ಗಗನಕ್ಕೇರಿದೆ. ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಕುರಿತು ಮೇ 2 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾನುವಾರ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾಹಿತಿ ನೀಡಿದರು.

ಬಿಜೆಪಿ ಜನಾಕ್ರೋಶ ಬಗ್ಗೆ ಸಲೀಂ ಲೇವಡಿ
ರಾಜ್ಯ ಕಾಂಗ್ರೆಸ್ ನಾಯಕರಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಹೋರಾಟ, ಪ್ರತಿಭಟನೆ ಈಗಾಗಲೇ ಯಶಸ್ವಿಯಾಗಿದೆ. ದೇಶದ ಜನರು ಕೇಂದ್ರ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರಾ ಮಾಡುತ್ತಿದ್ದಾರೆ. ಆದರೆ ಅವರು ಅವರ ವಿರುದ್ಧ ಜನಾಕ್ರೋಶ ಯಾತ್ರಾ ಮಾಡಬೇಕು ಎಂದು ಬಿಜೆಪಿ ಜನಾಕ್ರೋಶ ಕುರಿತು ಲೇವಡಿ ಮಾಡಿದರು.
ಕಳೆದ 12 ವರ್ಷಗಳಲ್ಲಿ ಬೆಲೆ ಏರಿಕೆ ಏನು ಮಾಡಿದ್ದಾರೆ ಎಂಬ ಆತ್ಮ ವಿಮೆರ್ಶೆಯನ್ನು ಸ್ವತಃ ಬಿಜೆಪಿಯವರು ಮಾಡಿಕೊಳ್ಳಲಿ.
ಕರ್ನಾಟಕಕ್ಕೆ ಅನ್ಯಾಯ ಆದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ಮನವಿ ಕೊಟ್ಟಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಅನೇಕ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂದರು.
ಕೇಂದ್ರಕ್ಕೆ ರಾಜ್ಯದ ಯಾವುದೇ ಬೇಡಿಕೆ ಈಡೇರಿಸಲು ಆಗಿಲ್ಲ. ಇದು ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ.
ಕರ್ನಾಟಕದ ಪಾಲಿನ ಜೆಎಸ್ ಟಿ ಹಣ ಸಹ ಸಿಗುತ್ತಿಲ್ಲ. ರಾಜ್ಯದ ನದಿ ನೀರು ಯೋಜನೆಗಳಾದ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿ ಆಗುತ್ತಿಲ್ಲ.
ಕೇಂದ್ರ ಸಚಿವರೇ ರಾಜ್ಯಕ್ಕೆ ನ್ಯಾಯ ಕೊಡಿಸಿ..
ಕೇಂದ್ರ ಪ್ರಹ್ಲಾದ್ ಜೋಶಿ ಅವರು ವಿಜಯೋತ್ಸವ ಕಾರ್ಯಕ್ರಮಕ್ಕೆ ಕರೆಯುವ ಕುರಿತು ಮಾತನಾಡಿದ್ದಾರೆ. ಎಲ್ಲದರಲ್ಲೂ ಸಚಿವರೇ ರಾಜಕಾರಣ ಮಾಡಬೇಡಿ. ನೀವು ಕೇಂದ್ರ ಸಚಿವರಾಗಿದ್ದುಕೊಂಡು ರಾಜ್ಯಕ್ಕೆ ಸಹಾಯ ಆಗುವಂತಹ ಕೆಲಸ ಮಾಡಿ. ರಾಜ್ಯದಲ್ಲಿ ಐದು ಕೇಂದ್ರದ ಮಂತ್ರಿ ಇದ್ದಾರೆ ಕರ್ನಾಟಕಕ್ಕೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದರು.
ಸದ್ಯ ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ನಡೆ ನಿರ್ಧಾರಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ತಪ್ಪು ಕಾರ್ಯಗಳ ಮಾಡಿದ ಬಿಜೆಪಿಯನ್ನು ಬೆತ್ತಲೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮುಂದಿನ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದೇವೆ. ಕರ್ನಾಟಕ ಸರಕಾರದ ವಿರುದ್ಧ ಮಾಡುವ ನೈತಿಕತೆ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎಂದು ಅವರು ದೂರಿದರು.












Click it and Unblock the Notifications