ಬೆಂಗಳೂರು-ಹುಬ್ಬಳ್ಳಿ ನಡುವೆ ಏರ್ ಇಂಡಿಯಾ ಸೇವೆ ಆರಂಭ

Posted By:
Subscribe to Oneindia Kannada

ಹುಬ್ಬಳ್ಳಿ, ಜುಲೈ 21 : ಏರ್ ಇಂಡಿಯಾ ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸೇವೆ ಆರಂಭಿಸಿದೆ. ಏರ್ ಪೆಗಾಸಸ್ ಮತ್ತು ಏರ್ ಇಂಡಿಯಾ ವಿಮಾನಗಳು ರಾಜಧಾನಿ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಹಾರಾಟ ನಡೆಸುತ್ತಿವೆ.

42 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಬುಧವಾರ ಸಂಜೆ 6.25ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಾಟರ್ ಸೆಲ್ಯೂಟ್ ನೀಡುವ ಮೂಲಕ ವಿಮಾನವನ್ನು ಸ್ವಾಗತಿಸಲಾಯಿತು.[ಏರ್ ಇಂಡಿಯಾ ವೆಬ್ ಸೈಟ್]

air india

ವಾರದಲ್ಲಿ ಮೂರು ದಿನಗಳ ಕಾಲ ಏರ್ ಇಂಡಿಯಾ ಬೆಂಗಳೂರು-ಹುಬ್ಬಳ್ಳಿ ನಡುವೆ ಹಾರಾಟ ನಡೆಸಲಿದೆ.
ಉಭಯ ನಗರಗಳ ನಡುವಿನ ಸಂಚಾರಕ್ಕೆ ಏರ್ ಇಂಡಿಯಾ 1,902 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.[ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಮತ್ತಷ್ಟು ವಿಳಂಬ?]

ವೇಳಾಪಟ್ಟಿ : ಸೋಮವಾರ, ಬುಧವಾರ ಮತ್ತು ಶುಕ್ರವಾರ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಲಿದೆ. ಸಂಜೆ 5.05ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನ 5.25ಕ್ಕೆ ಹುಬ್ಬಳ್ಳಿ ತಲುಪಲಿದೆ.

ವಿಮಾನ ಅಪಘಾತ ಸಂಭವಿಸಿತ್ತು : ಮೊದಲು ಸ್ಪೈಸ್‌ಜೆಟ್ ಹುಬ್ಬಳ್ಳಿಗೆ ವಿಮಾನಯಾನ ಸೇವೆ ನೀಡುತ್ತಿತ್ತು. 2015ರ ಮಾ.8ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಸ್ಪೈಸ್‌ ಜೆಟ್ ವಿಮಾನ ಸೇವೆ ಸ್ಥಗಿತಗೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Air India launched its service between Bengaluru and Hubballi on Wednesday July 20, 2016. The flight will make three trips a week (Monday, Wednesday, Friday). Rs. 1,902 fare fixed for the service.
Please Wait while comments are loading...