Kannada Sahitya Sammelana 2023: ಸಾಹಿತ್ಯ ಸಮ್ಮೇಳನದಲ್ಲಿ ಅವ್ಯವಸ್ಥೆ: ಚಿಕ್ಕಮಗಳೂರಿನ ಕನ್ನಡಾಭಿಮಾನಿಗಳಿಂದ ಪ್ರತಿಭಟನೆ
ಹಾವೇರಿ, ಜ. 06: ಶುಕ್ರವಾರದಿಂದ ಆರಂಭವಾಗಿರುವ ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆಯ ಆಗರವಾಗಿ ಎಂದು ಚಿಕ್ಕಮಗಳೂರಿನ ಕನ್ನಡಾಭಿಮಾನಿಗಳು ಪ್ರತಿಭಟನೆ ನಡೆಸಿದರು.
ಹಾವೇರಿಯಲ್ಲಿ ಆರಂಭವಾದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆಯನ್ನು ಖಂಡಿಸಿ ಚಿಕ್ಕಮಗಳೂರಿನ ಕನ್ನಡಾಭಿಮಾನಿಗಳು ಸೇರಿದಂತೆ ಇತರ ಜಿಲ್ಲೆಯಿಂದ ಆಗಮಿಸಿದ ಕನ್ನಡಾಭಿಮಾನಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ದೂರದೂರಿನಿಂದ ಬಂದವರ ವಸತಿ ಮತ್ತಿತ್ತರ ಸೌಕರ್ಯಗಳ ಬಗ್ಗೆ ವಿಚಾರಿಸಲು ವಿಚಾರಣೆ ಕೌಂಟರ್‌ಗೆ ಹೋದರೆ ಕೌಂಟರ್‌ನಲ್ಲಿ ಕೇಳುವವರೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನ್ ಲೈನ್‌ನಲ್ಲಿ ನೊಂದಣಿ ಮಾಡಿದವರು ನೊಂದಣಿಯ ಬಗ್ಗೆ ವಿಚಾರಿಸಿದರೇ ನೊಂದಣಿ ಕೌಂಟರಿನಲ್ಲಿ ನೊಂದಣಿ ಮಾಡಿಕೊಂಡ ವಿವರಗಳೇ ಇಲ್ಲ. ವಸತಿ ಸೌಕರ್ಯ ಕಲ್ಪಿಸಿರುವವಲ್ಲಿನ ಅಧಿಕಾರಿಗಳಿಗೆ ಕರೆ ಮಾಡಿದರೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕನ್ನಡಾಭಿಮಾನಿಗಳು ಆರೋಪಿಸಿದ್ದಾರೆ.
ಇದಲ್ಲದೆ ಹಣ ಕಟ್ಟಿದರೂ ಕೂಡ ನೋಂದಣಿ ಕೌಂಟರ್‌ನಲ್ಲಿ ಬ್ಯಾಗ್ ಮತ್ತು ಇತರ ಸೌಲಭ್ಯ ಇಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸಮ್ಮೇಳನದ ನೋಂದಣಿ ಕೌಂಟರ್‌ನ ಮುಂದೆ ದಿಡೀರ್ ಪ್ರತಿಭಟನೆ ನಡೆಸಿದರು.

ಜನವರಿ 6ರಿಂದ ಆರಂಬಾವಗಿರುವ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ನಡೆಯಲಿದೆ. ಸಮ್ಮೇಳನಕ್ಕೆ ಸುಮಾರು 128 ಹೆಕ್ಟೇರ್ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಪ್ರಧಾನ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಲು ಆಸನ ಕಲ್ಪಿಸಲಾಗಿದೆ. ಜೊತೆಗೆ ಸಮಾನಾಂತರ ವೇದಿಕೆ ನಿರ್ಮಿಸಲಾಗಿದ್ದು, ಅಲ್ಲಿಯೂ ಸಹ ಸಾವಿರಾರು ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ತೋಟಗಾರಿಗೆ ಇಲಾಖೆ ಸುಮಾರು 1 ಲಕ್ಷ 50 ಸಾವಿರ ಪುಷ್ಪಗಳಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಜಿಲ್ಲಾಡಳಿತ ಫಲಫುಷ್ಪ ಪ್ರದರ್ಶನಕ್ಕೆ 10 ಗುಂಟೆ ಪ್ರದೇಶ ನೀಡಿದ್ದು, ಇಲಾಖೆ ಸಿದ್ಧತೆಮಾಡಿಕೊಂಡಿದೆ.. ಫಲಪುಷ್ಪಪ್ರದರ್ಶನದಲ್ಲಿ ಪುಷ್ಪಗಳಿಂದ, ತರಕಾರಿಗಳಿಂದ ಹಣ್ಣುಗಳಿಂದ ಮತ್ತು ಸಿರಿಧಾನ್ಯಗಳಿಂದ ವಿವಿಧ ಕಲಾಕೃತಿ ರಚಿಸಲಾಗಿದ್ದು, ಇವು ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.












Click it and Unblock the Notifications