ಹಾಸನದಲ್ಲಿ ಮೊಮ್ಮಗನ ಗೆಲುವಿಗೆ ಮತಚಲಾಯಿಸಿ ದೇವೇಗೌಡ ದಂಪತಿ
Recommended Video
ಹಾಸನ, ಏಪ್ರಿಲ್ 18: ಹಾಸನದಲ್ಲಿ ದೇವೇಗೌಡ ಹಾಗೂ ಚೆನ್ನಮ್ಮ ದಂಪತಿಗಳು ಒಟ್ಟಿಗೆ ಬಂದು ಮತಚಲಾಯಿಸಿದರು. ತಮ್ಮ ಮೊಮ್ಮಗನೇ ಚುನಾವಣೆಗೆ ನಿಂತಿರುವ ಕ್ಷೇತ್ರದಲ್ಲಿ ದೇವೇಗೌಡ ಹಾಗೂ ಚೆನ್ನಮ್ಮ ಮತಚಲಾಯಿಸಿದರು.
ಈ ಸಮಯ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಮತದಾರರ ಮೇಲೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಅವರು ಟೊಳ್ಳು ಮಾತಿಗೆ ಬೆಲೆ ಕೊಡದೆ ಜನ ಸೇವೆಗೆ ಬೆಲೆ ಕೊಡುತ್ತಾರೆ ಎಂದು ನಂಬಿದ್ದೇನೆ ಎಂದರು.
ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳ ಬಗ್ಗೆ ಮಾತನಾಡಿದ ಅವರು, ತಾವು, ನಿಖಿಲ್, ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸುವುದಾಗಿ ಹೇಳಿದರು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕು ಎಂಬುದು ಮಂಡ್ಯದ ಜೆಡಿಎಸ್ ಶಾಸಕರ ಒತ್ತಾಯವಾಗಿತ್ತು ಎಂದರು.

ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿದ್ಯಾವಂತ, ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಆದರೆ ಜನಸೇವೆಯ ಗುರಿಯಿಂದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದರು, ಹಾಗಾಗಿ ಅವರಿಗೆ ಅರ್ಹತೆ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ ಎಂದು ದೇವೇಗೌಡ ಹೇಳಿದರು.












Click it and Unblock the Notifications