ಇನ್ನೂ ಪತ್ತೆಯಾಗಿಲ್ಲ ವಾಯುಪಡೆ ವಿಮಾನ: 13 ಜನರ ಕತೆ ಏನು?
ಗುವಾಹತಿ, ಜೂನ್ 04: ಸೋಮವಾರ ಅಸ್ಸಾಮ್ ನ ಜೊರ್ಹಾತ್ ಏರ್ ವಾಯುನೆಲೆಯಿಂದ ನಾಪತ್ತೆಯಾದ ವಾಯುಪಡೆಯ ವಿಮಾನ ಇನ್ನೂ ಪತ್ತೆಯಾಗಿಲ್ಲ.
ವಿಮಾನದಲ್ಲಿ ಒಟ್ಟು 8 ವಿಮಾನಯಾನ ಸಿಬ್ಬಂಮದಿ ಮತ್ತು ಐವರು ಪ್ರಯಾಣಿಕರಿದ್ದರು. ಅವರ ಕುರಿತು ಇದುವರೆಗೂ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. AN 32 ಮಿಲಿಟರಿ ಏರ್ ಕ್ರಾಫ್ಟ್ ಟೇಕಾಫ್ ಆದ 35 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು.
ನಂತರ ಯಾವುದೇ ಮಾಹಿತಿ ಲಭ್ಯವಾಗದಿರುವುದು ಆತಂಕ ಸೃಷ್ಟಿಸಿದ್ದು, ವಿಮಾನದಲ್ಲಿದ್ದ ಹದಿಮೂರು ಮಂದಿಯೂ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ವಿಮಾನದಲ್ಲಿ ಪ್ರಯಾಣಿಸುತ್ತಿರುವವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಜುಲೈ2016ರಲ್ಲಿ ಭಾರತೀಯ ವಾಯುಸೇನೆಯ ಎಎನ್ 32 ವಿಮಾನವೊಂದು ಬೆಂಗಾಲ ಕೊಲ್ಲಿಯ ಮೇಲೆ ಹಾರುವಾಗ ನಾಪತ್ತೆಯಾಗಿತ್ತು. ಆ ವಿಮಾನದಲ್ಲಿ 29 ಮಂದಿ ಇದ್ದರು. ಆದರೆ ಅದರ ಕುರಿತೂ ಯಾವ ಮಾಹಿತಿ ಲಭ್ಯವಾಗದ ಕಾರಣ ನಂತರ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲಾಗಿತ್ತು.












Click it and Unblock the Notifications