Gurmitkal Karnataka Elections 2023: ಮತ್ತೆ 'ಕೈ' ಸೇರುತ್ತಾ ಗುರುಮಿಠಕಲ್ ಕ್ಷೇತ್ರ?

ಮುಂಬರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಗುರುಮಿಠಕಲ್ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ನಾಗನಗೌಡ ಜಯ ಗಳಿಸಿದ್ದರು. ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರ 24480 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಗುರುಮಿಠಕಲ್ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾದಗಿರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಗುರುಮಿಠಕಲ್ ಪ್ರವಾಸಿ ತಾಣವಾಗಿದೆ. ಬೆಂಗಳೂರು ನಗರದಿಂದ ಸುಮಾರು 650 ಕಿ.ಮೀ.ದೂರದಲ್ಲಿರುವ ಗುರುಮಿಠಕಲ್ ಕ್ಷೇತ್ರದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಗುರುಮಿಠಕಲ್ ಜಲಪಾತ ಪ್ರಸಿದ್ಧ ಪ್ರವಾಸಿತಾಣ. ಸುಮಾರು 30 ಅಡಿ ಎತ್ತರದಿಂದ ನೀರು ಧುಮ್ಮುಕ್ಕುವುದನ್ನು ನೋಡಲು ಚಳಿಗಾಲ ಸೂಕ್ತ. ಸಾರಿಗೆ ಸಂಚಾರದ ಸಮಸ್ಯೆ ಹೆಚ್ಚಿಲ್ಲ. ಹೈದರಾಬಾದ್ ವಿಮಾನ ನಿಲ್ದಾಣ, ಯಾದಗಿರಿ ರೈಲು ನಿಲ್ದಾಣ ಕ್ಷೇತ್ರಕ್ಕೆ ಹತ್ತಿರವಾಗಿವೆ.

ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುಮಿಠಕಲ್‌ನಿಂದ 8 ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದು ಕ್ಷೇತ್ರ ಹೆಸರು ಪಡೆದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಈಗ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. 2008, 2013ರ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರು ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಸಚಿವರೂ ಆಗಿದ್ದರು.

Gurmitkal-Constituency-Map


ಗುರುಮಿಠಕಲ್ ಕ್ಷೇತ್ರ- ಒಂಬತ್ತು ಸಲ ಗೆದ್ದ ಮಲ್ಲಿಕಾರ್ಜುನ ಖರ್ಗೆ

ಸತತ ಒಂಬತ್ತು ಸಲ ರಾಜ್ಯ ವಿಧಾನಸಭೆಗೆ ಗೆದ್ದವರು ಪ್ರಸ್ತುತ ರಾಜ್ಯಸಭೆ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ. ಅಬಿಭಜಿತ ಕಲಬುರಗಿ ಜಿಲ್ಲೆಯ ಗುರುಮಿಠಕಲ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ 1972ರಿಂದ 2004ರವರೆಗೆ ಸತತವಾಗಿ ಎಂಟು ಸಲ ಗೆದ್ದಿದ್ದರು. 2008ರಲ್ಲಿ ಗುರುಮಿಠಕಲ್ ಸಾಮಾನ್ಯ ಕ್ಷೇತ್ರವಾದ ಅನಂತರ ಮಲ್ಲಿಕಾರ್ಜುನ ಖರ್ಗೆ 2008ರಲ್ಲಿಯೇ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸತತ ಒಂಬತ್ತನೇ ಸಲ ವಿಧಾನಸಭೆ ಪ್ರವೇಶಿಸಿದರು.

ಸತತ ಒಂಬತ್ತು ಸಲ ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿಲ್ಲದೇ ಹಲವು ಖಾತೆಗಳ ಸಚಿವರಾಗಿದ್ದು ಮಗದೊಂದು ದಾಖಲಯೇ ಸರಿ. ಖರ್ಗೆ ಅವರು ಶಿಕ್ಷಣ, ಕಂದಾಯ, ಸಹಕಾರ, ಕೈಗಾರಿಕೆ, ಗೃಹ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ಸಾರಿಗೆ ಸಹಿತ ಇತರ ಖಾತೆಗಳನ್ನು ನಿಭಾಯಿಸಿದ್ದಲ್ಲದೇ ಕೇಂದ್ರದಲ್ಲೂ ಕಾರ್ಮಿಕ ಹಾಗೂ ರೈಲ್ವೇ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ಒಂಬತ್ತು ಸಲ ವಿಧಾನಸಭೆ, ಎರಡು ಸಲ ಲೋಕಸಭೆ ವಿಪಕ್ಷ ನಾಯಕರಾಗಿ ಕೀರ್ತಿ ಗಳಿಸಿ, ದಾಖಲೆ ಮಾಡಿದ್ದಾರೆ.

2013ರ ಚುನಾವಣೆ ಫಲಿತಾಂಶ : 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಾಬೂರಾವ್ ಚಿಂಚನಸೂರು ಅವರು 36,051 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್‌ನ ನಾಗಣ್ಣ ಗೌಡ ಅವರು 34,401 ಮತ, ಬಿಜೆಪಿಯ ಗಿರೀಶ್ ಮಟ್ಟಣ್ಣನವರ್ 9,795 ಮತಗಳನ್ನು ಪಡೆದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಾಬೂರಾವ್ ಚಿಂಚನಸೂರು ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಸಾಯಿಬಣ್ಣ, ಜೆಡಿಎಸ್‌ ಪಕ್ಷದಿಂದ ನಾಗನಗೌಡ ಅವರು ಅಭ್ಯರ್ಥಿ.

Mallikarjun Kharge

2018ರ ಚುನಾವಣೆ ಫಲಿತಾಂಶ

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಲ್ಲಿ ಜೆಡಿಎಸ್‌ನ ನಾಗನಗೌಡ 79,627 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ 55,147 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ ಬಿಜೆಪಿಯ ಸಾಯಿಬಣ್ಣ ಬೋರಬಂದ 8,995 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದರು.

ಗುರುಮಿಠಕಲ್ ಬಿಜೆಪಿ ಟಿಕೆಟ್ ಯಾರಿಗೆ?

ಕಾಂಗ್ರೆಸ್‌ ನಿಮದ ಬಿಜೆಪಿ ಸೇರಿದ್ದ ಬಾಬುರಾವ್ ಚಿಂಚನಸೂರ್ ಗುರುಮಠಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ನೀಡಲು ಕಮಲ ಪಾಳಿಯಕ್ಕೆ ಕೇಳಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಟಿಕೆಟ್ ನೀಡಲಾಗದು ಎಂದು ಬಿಜೆಪಿ ನಾಯಕರು ತಿಳಿಸಿದ್ದರು. ಹೀಗಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಾಯಿಬಣ್ಣ ಬೋರಬಂದ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಗುರುಮಿಠಕಲ್ ಮತಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕ್ಷೇತ್ರ ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ ಸಾಗಿದೆ. ಬಿಜೆಪಿ ರಾಜ್ಯ ವಿಶೇಷ ಸದಸ್ಯೆ ನಾಗರತ್ನ ಕುಪ್ಪಿ, ರಾಜ್ಯ ಮಹಿಳಾ ಮೋರ್ಚಾ ಯಪಾಧ್ಯಕ್ಷೆ ಲಲಿತಾ ಆನಪುರ, ಕೂಡಾ ಮಾಜಿ ಅಧ್ಯಕ್ಷ ಗರೀಶ ಮಟ್ಟೆಣ್ಣನವರ್ ಟಿಕೆಟ್ ಆಕಾಂಕ್ಷಿ ರೇಸ್‌ನಲ್ಲಿದ್ದಾರೆ.

ಗುರುಮಿಠಕಲ್ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕರಾಗಿದ್ದ ಬಾಬುರಾವ್ ಚಿಂಚನಸೂರ್ ಚುನಾವಣೆ ಹೊತ್ತಲಿ ಬಿಜೆಪಿಯನ್ನ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಚಿಂಚನಸೂರ್‌ ಅವರು ಈಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಇನ್ನೂ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಿಂದ ಕ್ಷೇತ್ರದ ಟಿಕೆಟ್ ಕೈ ಗಿಟ್ಟಿದೆ ಎನ್ನುವ ಚರ್ಚೆಗಳು ಈಗ ಮುನ್ನೆಲೆಗೆ ಬಂದಿದ್ದು, ಚಿಂಚನಸೂರ ಅವರಿಗೆ ಗುರಮಠಕಲ್ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ ಎನ್ನುವ ಚರ್ಚೆಗಳು ಹರಿದಾಡುತ್ತಿವೆ.

ಈಗಾಗಲೇ ಕೆಪಿಸಿಸಿ ನೀಡಿದ ಮಾರ್ಗಸೂಚಿಯಂತೆ ಗುರುಮಠಕಲ್‌ ಕ್ಷೇತ್ರದ ಟಿಕೆಟ್‌ಗಾಗಿ ಶ್ರೇಣಿಕುಮಾರ ದೋಖಾ, ಬಸರೆಗೌಡ ಆನಪುರ, ಶರಣಪ್ಪ ಮಾನೇಗಾರ ಸಾಯಿಬಣ್ಣ ಬೋರಬಂಡ, ತಿಪ್ಪಣ್ಣ ಕಮಕನೂರ, ನಿತ್ಯಾನಂದ ಪೂಜಾರಿ, (A) ಉದಯಕುವಾರ ಹಾಗೂ ಯೋಗೇಶ ಬೆತ್ತ‌ ಸೇರಿ ಒಟ್ಟು ಎಂಟು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಚಿಂಚನಸೂರ ಸೇರ್ಪಡೆಯ ಜೊತೆಗೆ ಟಿಕೆಟ್ ಕೂಡ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಬಾಬುರಾವ್ ಚಿಂಚನಸೂರ್ ವಿರುದ್ದ ಸ್ಥಳೀಯ ಕಾಂಗ್ರೆಸ್‌ ನಾಯಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಅರ್ಜಿ ಸಲ್ಲಿಸಿದ 8 ಜನರಲ್ಲಿ ಯಾರಾಗದರೂ ಟಿಕೆಟ್‌ ನೀಡಿ ಆದರೆ, ಬಾಬುರಾವ್ ಚಿಂಚನಸೂರ್ ಟಿಕೆಟ್‌ ನೀಡಬೇಡಿ ಎಂದು ಹೇಳಲಾಗಿದೆ.

ಗುರುಮಿಠಕಲ್ ಜೆಡಿಎಸ್ ಟಿಕೆಟ್ ಯಾರಿಗೆ?

93 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪಟ್ಟಿ ಬಿಡುಗಡೆ ಮಾಡಿ ಒಂದು ದಿನದ ನಂತರ ಗುರುಮಠಕಲ್ ಜೆಡಿಎಸ್ ಅಭ್ಯರ್ಥಿ ಹೆಸರು ಬದಲಾವಣೆ ಮಾಡಲಾಗಿದೆ. ಆರಂಭದಲ್ಲಿ ಗುರುಮಿಠಕಲ್ ಕ್ಷೇತ್ರದಲ್ಲಿ ಹಾಲಿ ಶಾಸಕ ನಾಗನಗೌಡ ಕಂದಕೂರು ಅವರಿಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಅಧಿಕೃತ ಘೋಷಣೆ ಹೊರಬಿದ್ದಿತ್ತು. ಆದರೆ ನಂತರ ಗುರುಮಿಠಕಲ್ ಕ್ಷೇತ್ರದ ಅಭ್ಯರ್ಥಿ ಹೆಸರು ಬದಲಾವಣೆ ಮಾಡಲಾಗಿದೆ.

ನಾಗನಗೌಡ ಕಂದಕೂರು ಬದಲಿಗೆ ಅವರ ಪುತ್ರ ಶರಣಗೌಡ ಕಂದಕೂರ ಅವರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಲ್ಲಿ ಜೆಡಿಎಸ್‌ನ ನಾಗನಗೌಡ ಜಯ ಸಾಧಿಸಿದ್ದರು. ಈ ಬಾರಿಯೂ ಅವರೇ ಸ್ಪರ್ಧಿಸುತ್ತಾರೆಂದು ಭಾವಿಸಲಾಗಿತ್ತು. ಆದರೆ ಜೆಡಿಎಸ್ ನಾಗನಗೌಡ ಹೆಸರನ್ನು ಮೊದಲು ಪಟ್ಟಿಯಲ್ಲಿ ನೀಡಿ ನಂತರ ಬದಲಾಯಿಸಿದೆ. ವಯಸ್ಸಿನ ಕಾಣರ ನಾಗನಗೌಡ ಸ್ಪರ್ಧೆಗೆ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+