ಯಾವ್ ಪುರುಷಾರ್ಥಕ್ಕೆ ಈ ಕಮಿಟಿ ಮಾಡಿದ್ದಾರೆː ಜಗದೀಶ್ ಶೆಟ್ಟರ್ ಗರಂ

Posted By: ಧಾರವಾಡ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್ 24:ಲಿಂಗಾಯತ ಸ್ವತಂತ್ರ ಧರ್ಮದ ಪರಿಣತರ ಸಮಿತಿ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಸಮಿತಿ ಇದೊಂದು ಸರ್ಕಾರ ಪ್ರಾಯೋಜಿತ ಕಮಿಟಿಯಾಗಿದ್ದು, ಸರ್ಕಾರ ಹೇಗೆ ಹೇಳುತ್ತೇ ಹಾಗೇ ವರದಿ ನಿಡೋ ಕಮೀಟಿ.‌ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸರ್ಕಾರ ಯಾವ ರುಷಾರ್ಥಕ್ಕೆ ಈ ಕಮಿಟಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

Why is the purpose Expert committee? Jagadish Shettar asks Siddaramaiah Government

ವೀರಶೈವ ಮಹಾಸಭಾಕ್ಕೆ ಅಧಿಕಾರಿ ಕೊಡಿ ಅವರೇ ಒಂದು ವರದಿ ನೀಡ್ತಾಯಿದ್ರು ಆದ್ರೆ, ಸಿಎಮ್ ಸಿದ್ದರಾಮಯ್ಯ ಈ ಮೂಲಕ ರಾಜಕಾರಣ ಮಾಡಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡ್ತಾಯಿದ್ದಾರೆ ಎಂದು‌ ಆರೋಪಿಸಿದ್ರು.

ಇನ್ನೂ ಇದೇ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ ನಾಳೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಡೆಯಲಿರೋ ಸರ್ಕಾರ ವಿವಿಧ ಕಾಮಗಾರಿಗಳ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕನಾದ ನನಗೆ ಆಹ್ವಾನ ನೀಡಿಲ್ಲ, ಅವರು ಜನರ ತೆರಿಗೆ ಹಣದಿಂದ ಕಾಂಗ್ರೆಸ್ ಸಮಾವೇಶವನ್ನು ಮಾಡ್ತಾಯಿದ್ದು, ಸರ್ಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಸಭೆ ಮಾಡಿ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಹೀಗಾಗಿ, ಈ ಕುರಿತು ಸಿಎಂ ಸ್ಪಷ್ಟೀಕರಣ ನೀಡಬೇಕೆಂದು‌ ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What is the purpose Expert committee? Jagadish Shettar asks Siddaramaiah Government. Congress govt formed a seven member committee to decide on Separate Lingayat religion demand.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ