'ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 29 : 'ವಿದೇಶಿ ವಾಚ್ ಉಡುಗೊರೆ ಪಡೆಯುವ ಮೂಲಕ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಜೋಶಿ ಅವರು, ' ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ 2 (ಎಚ್) ಪ್ರಕಾರ ಶಾಸಕರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು 25 ಸಾವಿರಕ್ಕೂ ಅಧಿಕ ಮೌಲ್ಯದ ಉಡುಗೊರೆ ಪಡೆಯುವಂತಿಲ್ಲ' ಎಂದರು. [ಸಿದ್ದುಗೆ ಕಂಟಕ ತರಲಿದೆಯಾ ಉಬ್ಲೋ ಡೈಮಂಡ್ ವಾಚ್?]

prahlad joshi

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14 ಲಕ್ಷ ಮೌಲ್ಯದ ವಾಚನ್ನು ದುಬೈನಲ್ಲಿರುವ ಡಾ.ಗಿರೀಶ್ ಚಂದ್ರ ಮರ್ಮಾ ಅವರಿಂದ ಉಡುಗೊರೆಯಾಗಿ ಸ್ವೀಕರಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರಿಗೆ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿದೆ' ಎಂದು ವಿವರಣೆ ನೀಡಿದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]

'ಡಾ.ಗಿರೀಶ್ ಚಂದ್ರ ವರ್ಮಾ ಅವರ ಮೂಲದ ಬಗ್ಗೆ ವಿವರವಾದ ತನಿಖೆ ನಡೆಯಬೇಕು. ಇಷ್ಟು ದೊಡ್ಡ ಮೊತ್ತದ ಉಡುಗೊರೆಯನ್ನು ಮುಖ್ಯಮಂತ್ರಿಗಳಿಗೆ ನೀಡಲು ಕಾರಣವೇನೆಂದು? ತನಿಖೆಯಿಂದ ಬಹಿರಂಗವಾಗಬೇಕು' ಎಂದು ಜೋಶಿ ಒತ್ತಾಯಿಸಿದರು. [ಗಡಿಯಾರದ ಗಲಾಟೆ, ಎಚ್ಡಿಕೆ ಬುಟ್ಟಿಯಲ್ಲಿ ಹೊಸ ಹಾವು!]

ಸಂಶಯಾಸ್ಪದವಾಗಿದೆ : 'ವಾಚ್ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ನಡೆ ಸಂಶಯಾಸ್ಪದವಾಗಿದೆ. ಒಂದು ಕಡೆ ಉಡುಗೊರೆ ಬಂದಿದ್ದು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಡಾ.ಸುಧಾಕರ ಶೆಟ್ಟಿ ಅವರ ಮನೆಯಿಂದ ಕಳುವಾದ ವಾಚ್ ಎಂಬ ಆರೋಪಗಳಿವೆ' ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಜೋಶಿ ಆಗ್ರಹಿಸಿದರು. [ಕೈಗಡಿಯಾರ ರಾದ್ಧಾಂತ, ಬಾಯ್ಬಿಟ್ಟ ಸಿದ್ದರಾಮಯ್ಯ]

ರಾಜೀನಾಮೆ ಕೊಡಲಿ : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ಮೌಲ್ಯ 14 ಲಕ್ಷ ಎಂದು ಹೇಳುತ್ತಿದ್ದಾರೆ. ಆದರೆ, ಅದ ಮೌಲ್ಯ ಅದಕ್ಕಿಂತ ಹೆಚ್ಚಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ತನಿಖೆ ಮುಗಿಯುವ ತನಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. ಈ ಬಗ್ಗೆ ಬಿಜೆಪಿ ಸಂಸತ್ ಮತ್ತು ವಿಧಾನಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಿದೆ' ಎಂದು ಜೋಶಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah Rs 70 lakh Hublot watch controversy : Karnataka BJP president Prahlad Joshi on Sunday demand for Siddaramaiah resignation and The Enforcement Directorate (ED) probe on expensive watch issue.
Please Wait while comments are loading...