ಚೀನಾದಿಂದ ಸಂಕಷ್ಟ: ಕರ್ನಾಟಕದಲ್ಲಿ ಕುಸಿದ ಜವಾರಿ ಬೆಳ್ಳುಳ್ಳಿ ಬೆಲೆ!

ಕರ್ನಾಟಕದ ಜವಾರಿ ಬೆಳ್ಳುಳ್ಳಿಗೆ ಚೀನಾದಿಂದ ಇದೀಗ ಸಂಕಷ್ಟ ಎದುರಾಗಿದ್ದು. ರಾಜ್ಯದ ಬೆಳ್ಳುಳ್ಳಿ ಬೆಳೆಗಾಗರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ನೆರೆಯ ಚೀನಾದಿಂದ ತೀವ್ರ ಪೈಪೋಟಿ ಎದುರಾಗಿದ್ದು. ರಾಜ್ಯದ ಬೆಳ್ಳುಳ್ಳಿ ಬೆಳೆಗಾರರು ಸಂಕಷ್ಟ ಎದುರಾಗಿದೆ. ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯವಾಗಿ ಬೆಳೆದ ಜವಾರಿ ಬೆಳ್ಳುಳ್ಳಿ ದರ ಕುಸಿತ ಕಂಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಧಾರವಾಡ ಜಿಲ್ಲೆಯ ಬಹುತೇಕ ರೈತರು ಈಗ ಬೆಳ್ಳುಳ್ಳಿ ಬೆಳೆದು ಕಂಗಾಲಾಗಿದ್ದಾರೆ. ಅದರಲ್ಲೂ ನವಲಗುಂದ ತಾಲ್ಲೂಕಿನ ಬೆಳಹಾರ, ಶಿರಕೋಳ, ಮೊರಬ, ಕುಂದಗೋಳ ತಾಲ್ಲೂಕಿನ ಗುಡಗೇರಿ, ಗೌಡಗೇರಿ, ಹರಲಾಪುರ, ಸಂಕ್ಲೀಪುರ, ಕಳಸ ,ಧಾರವಾಡ ತಾಲ್ಲೂಕಿನ ನರೇಂದ್ರ, ಮುಮ್ಮಿಗಟ್ಟಿ, ನೀರಲಕಟ್ಟಿ ಹಾಗೂ ಗರಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂಗಾರು ಬೆಳೆಯಾಗಿ ಬೆಳ್ಳುಳ್ಳಿ ಬೆಳೆಯಲಾಗಿದೆ.

Trouble from China Jawari Garlic Prices Fall

ಒಂದೂವರೆ ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದಿದ್ದು, ಬೀಜ, ಗೊಬ್ಬರ ಸೇರಿ 1.30 ಲಕ್ಷ ವೆಚ್ಚ ಮಾಡಿದ್ದೇನೆ. ಈಗ ದರ ಕುಸಿದಿದ್ದು, ಹಾಕಿದ ಬಂಡವಾಳವೂ ಬಾರದ ಸ್ಥಿತಿ ಇದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬೆಳ್ಳುಳ್ಳಿ ಬೆಳೆಗೂ ಸೂಕ್ತ ಧಾರಣಿ ಇಲ್ಲ. ಇದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಇಲ್ಲಿನ ಬೆಳ್ಳುಳ್ಳಿ ಬೆಳೆಗಾರರು ಹೇಳಿದ್ದಾರೆ.

ಗರಿಷ್ಠ ಬೆಲೆಗೆ ಮಾರಾಟವಾಗಿತ್ತು: ಇನ್ನು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯ ಸುತ್ತಮುತ್ತಲಿನ ಭಾಗದಲ್ಲಿ ಈಚೆಗೆ ಬೆಳ್ಳುಳ್ಳಿ ಬೆಲೆಯು ಭರ್ಜರಿ ಏರಿಕೆ ಕಂಡಿತ್ತು. ಈಚೆಗೆ ಬೆಳ್ಳುಳ್ಳಿ ಬೆಲೆಯು ಪ್ರತಿ ಕೆಜಿಗೆ ಈ ಭಾಗದಲ್ಲಿ 450ರಿಂದ 500 ರೂಪಾಯಿಯ ವರೆಗೆ ತಲುಪಿತ್ತು. ಹವಾಮಾನ ವೈಪರೀತ್ಯದಿಂದ ಇತ್ತೀಚಿನ ದಿನಗಳಲ್ಲಿ ಬೆಳ್ಳುಳ್ಳಿ ಬೆಲೆ ಗಗನಮುಖಿಯಾಗಿತ್ತು. ಆದರೆ, ಇದರಿಂದ ಬೆಳ್ಳುಳ್ಳಿ ಬೆಳೆದ ರೈತರಿಗೆ ನೇರವಾಗಿ ಲಾಭವಾಗಿರಲಿಲ್ಲ. ಇದೀಗ ಬೆಳ್ಳುಳ್ಳಿ ಬೆಲೆ ಕುಸಿತ ಕಂಡಿರುವುದು ರೈತರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.

Trouble from China Jawari Garlic Prices Fall

ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ನಿಲ್ಲಸಲು ಆಗ್ರಹ: ಇನ್ನು ಧಾರವಾಡ ಹಾಗೂ ವಿವಿಧ ಭಾಗದಲ್ಲಿ ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು ಎನ್ನುವ ಆಗ್ರಹ ಸಹ ಕೇಳಿ ಬಂದಿದೆ.

ಹವಾಮಾನ ವೈಪರೀತ್ಯದಿಂದ ಸಂಕಷ್ಟ: ಇನ್ನು ಈ ಭಾಗದ ಬೆಳ್ಳುಳ್ಳಿ ಬೆಳಗಾರರಿಗೆ ಈಚೆಗೆ ಹವಾಮಾನದಲ್ಲಿ ವೈಪರೀತ್ಯವುಂಟಾಗಿ ಭಾರೀ ಸಂಕಷ್ಟ ಎದುರಾಗಿತ್ತು. ಇದೀಗ ಇನ್ನೊಂದು ಸಮಸ್ಯೆ ಎದುರಾಗಿದೆ. ಧಾರವಾಡದ ಜವಾರಿ ಬೆಳ್ಳುಳ್ಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದೆ. ಆದರೆ, ಕರ್ನಾಟಕದ ಜವಾರಿ ಬೆಳ್ಳುಳ್ಳಿಗೆ ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ತೀವ್ರ ಪೈಪೋಟಿ ನೀಡುತ್ತಿದೆ. ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ಬೆಲೆಯು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ ಕರ್ನಾಟಕದ ಬೆಳ್ಳುಳ್ಳಿ ಬೆಲೆಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ. ಇನ್ನು ಇದರಿಂದ ಕರ್ನಾಟಕದ ಬೆಳಗಾರರಿಗೆ ಸಂಕಷ್ಟ ಎದುರಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+