Cast Remark: ರಾಹುಲ್ ಗಾಂಧಿಗೆ ತಿಳುವಳಿಕೆ ಬರಲ್ಲ: ಪ್ರಹ್ಲಾದ್ ಜೋಶಿ
ಬೆಂಗಳೂರು, ಫೆಬ್ರವರಿ 15: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ಬಾರಿ ಜಾತಿ ನಿಂದನೆ ಮಾಡಿದ್ದಾರೆ. ಇಂತಹ ವಿಚಾರಗಳಿಗೆ ಅವರು ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾರೆ. ದುರ್ದೈವ ಅವರಿಗೆ ತಿಳುವಳಿಕೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ಬಗ್ಗೆ ಜಾತಿ ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹೀಗೆ ಟೀಕೆ ಮಾಡಿ ರಾಹುಲ್ ಗಾಂಧಿಯವರು ಶಿಕ್ಷೆ ಅನುಭವಿಸಿದ್ದಾರೆ. ತಾತ್ಕಾಲಿಕ ಸ್ಟೇ ಸಿಕ್ಕಿದೆ.

ಸುಪ್ರೀಂ ಕೋರ್ಟ್ ಸಹ ಶಿಕ್ಷೆಗೆ ತಡೆ ನೀಡುವಾಗ ಸ್ಪಷ್ಟವಾಗಿ ಹೇಳಿದೆ, ಯಾರು ತಮ್ಮನ್ನು ತಾವು ನಾಯಕರೆಂದು ತಿಳಿದುಕೊಳ್ಳುತ್ತಾರೋ, ಅವರಿಗೆ ಭಾಷೆ ಮೇಲೆ ಹಿಡಿತ ಇರಬೇಕು, ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ತಿಳಿಸಿದೆ ಎಂದು ಜೋಶಿಯವರು ತಿಳಿಸಿದರು.
ಜನರೇ ಬುದ್ಧಿ ಕಲಿಸಿದ್ದಾರೆ
ರಾಹುಲ್ ಗಾಂಧಿಯವರಿಗೆ ಜನರೇ ಬುದ್ಧಿ ಕಲಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದಂತೆ ಅವರು ಇದೇ ರೀತಿ ಮಾತನಾಡುತ್ತ ಹೋದಲ್ಲಿಈ ಬಾರಿ ಲೋಕಸಭೆಯಲ್ಲಿ 40 ಕ್ಕಿಂತ ಅವರು ಕಡಿಮೆ ಸ್ಥಾನಕ್ಕೆ ಇಳಿಯುತ್ತಾರೆ ಎಂದು ಭವಿಷ್ಯ ನುಡಿದರು.
ಲೋಕಸಭೆಯಲ್ಲಿ ಹೊಸಬರಿಗೆ ಅವಕಾಶ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರ, ಒಂದೇ ಪಾಲಿಸಿ ಎಲ್ಲ ಕಡೆ ಅನ್ವಯವಾಗುವುದಿಲ್ಲ. ನಮ್ಮ ರಾಷ್ಟ್ರೀಯ ನೇತೃತ್ವದಲ್ಲಿ ಎಲ್ಲೆಲ್ಲಿ ಅಗತ್ಯ ಇದೆ ಅಲ್ಲಿ ಬದಲಾವಣೆ ಮಾಡುತ್ತಾರೆ. ಯಾರು ಅರ್ಹರಿದ್ದಾರೋ ಅವರಿಗೆ ವರಿಷ್ಠರು ಖಂಡಿತ ಟಿಕೆಟ್ ಕೊಡುತ್ತಾರೆ.

ಗೂಂಡಾ ಹೇಳಿಕೆಗೆ ಸಿಎಂಗೆ ಜೋಶಿ ತಿರುಗೇಟು
ವಿಧಾನಸಭೆಗೆ ಬದಲಾವಣೆ ಮಾಡಿದಂತೆ ಇಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವ ಪಾಲಿಸಿ ಇಲ್ಲ ಎಂದರು. ಗೂಂಡಾಗಳು ಯಾರ ಪಾರ್ಟಿಯಲ್ಲಿ ಎಷ್ಟು ಜನ ಇದ್ದಾರೆ ಮತ್ತು ಅವರ ಈ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ನಾಲಿಗೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ವಿರೋಧ ಪಕ್ಷದವರು ಗೂಂಡಾಗಳಿದ್ದಂತೆ ಸಿದ್ದರಾಮಯ್ಯನವರ ಹೇಳಿಕೆಗೆ ಅವರು ತಿರುಗೇಟು ಕೊಟ್ಟರು.












Click it and Unblock the Notifications