ಹುಬ್ಬಳ್ಳಿ ಮಾಜಿ ಮೇಯರ್ ಪುತ್ರನಿಗೆ ಸಾವು ತಂದ ಹೊಸವರ್ಷ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ,೦1: ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಗೋವಾದಿಂದ ಮರಳುವಾಗ ಧಾರವಾಡ ಜಿಲ್ಲೆಯ ಕಲಘಟಗಿ ಬಳಿಯ ತಂಬೂರು ಕ್ರಾಸ್ ಬಳಿ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಹುಬ್ಬಳ್ಳಿ ಧಾರವಾಡ ಪಾಲಿಕೆಯ ಮಾಜಿ ಮೇಯರ್ ಫೀರ್ದೋಸ್ ಕೊಣ್ಣೂರು ಅವರ ಪುತ್ರ ನಿಹಾಲ್ ಕೊಣ್ಣೂರು (20) ಮತ್ತು ಪವನ, ಮೇತ್ರಾಣಿ (20) ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]

Accident

ಮೃತನಾದ ನಿಹಾಲ್ ಕೊಣ್ಣೂರು ಮತ್ತು ಗಾಯಗೊಂಡ ಆತನ ಸ್ನೇಹಿತರಾದ ಆರು ಮಂದಿ ಗೋವಾದಲ್ಲಿ ಹೊಸ ವರ್ಷ ಆಚರಿಸಲು ಇನ್ನೋವಾ ಕಾರಿನಲ್ಲಿ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಗೋವಾದಿಂದ ಮರಳಿ ಬರುವಾಗ ಭಾರೀ ವೇಗವಾಗಿ ಬಂದ ಲಾರಿ ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದಿದೆ.[ಸಂಚಾರ ನಿಯಮ ಮುರಿದು ಪೊಲೀಸರಿಗೆ ಧಮ್ಕಿ ಹಾಕಿದ್ರೆ ಜೈಲೂಟ!]

ಇನ್ನೊವಾ ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ನಿಹಾಲ್ ಕೊಣ್ಣೂರು ಮತ್ತು ಆತನ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದಾರೆ. ಗಾಯಗೊಂಡ ನಾಲ್ವರನ್ನು ಕಲಘಟಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಪಘಾತ ಸಂಭವಿಸಲು ಏನು ಕಾರಣ ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi former mayer son Nihal Konnur (20) and his friends Pavan, Metrani killed in road accident in Dharwad. Another 4 friends vwery injured on Friday early morning after returning to home from goa.
Please Wait while comments are loading...