Drought Relief Fund: ಬರ ಪರಿಹಾರ ಹಣ ಸಾಲದ ಖಾತೆಗೆ ಜಮೆ ಮಾಡದಂತೆ ಸೂಚನೆ
ಧಾರವಾಡ, ಮೇ. 19: ಸರಕಾರದಿಂದ ಬಿಡುಗಡೆ ಆಗಿರುವಂತಹ ಪ್ರೋತ್ಸಾಹ ಧನ, ಬರ ಪರಿಹಾರ ನೇರವಾಗಿ ಫಲಾನುಭವಿಗಳ ಖಾತೆಗೆ (ಡಿಬಿಟಿ ಮೂಲಕ) ಸಂದಾಯವಾಗಿರುವಂತಹ ಹಣವನ್ನು ಯಾವುದೇ ಕಾರಣಕ್ಕೆ ಸಾಲದ ಖಾತೆಗೆ ಜಮಾ ಮಾಡಬಾರದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದ್ದಾರೆ.
ಸರಕಾರವು ಯಾವುದೇ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೈತರ ಹಾಗೂ ಸಾರ್ವಜನಿಕರ ಜೀವನೋಪಾಯಕ್ಕಾಗಿ ಬಿಡುಗಡೆ ಮಾಡುತ್ತದೆ. ಆದ್ದರಿಂದ ಬರ ಪರಿಹಾರದ ಹಣ ಸೇರಿದಂತೆ ವೃದ್ಯಾಪ್ಯ ವೇತನ, ಅಂಗವಿಕಲರ ಮಾಶಾಸನ, ನರೇಗಾ ಕೂಲಿ ಹಾಗೂ ಇತರೆ ಸರಕಾರದಿಂದ ಬಿಡುಗಡೆ ಆಗಿರುವಂತಹ ಪ್ರೋತ್ಸಾಹ ಧನ ಸಾಲದ ಖಾತೆಗೆ ಜಮಾ ಮಾಡಬಾರದೆಂದು ತಿಳಿಸಿದ್ದಾರೆ.

ಬರ ಪರಿಹಾರದ ಹಣ ಸಾಲದ ಖಾತೆಗೆ ಜಮಾ ಮಾಡಬೇಡಿ
ಸರಕಾರದಿಂದ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವು ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಆಗಿತ್ತಿರುವ ಕುರಿತು ರೈತರಿಂದ ದೂರುಗಳು ಬಂದಿವೆ. ಹೀಗಾಗಿ ಧಾರವಾಡ ರೂಡ್ ಸೆಟ್ ಆವರಣದ ಸಭಾಂಗಣದಲ್ಲಿ (RUDSETI) ಆವರಣದಲ್ಲಿ ಆರ್.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ, ಜಿಲ್ಲಾ ಲೀಡ ಬ್ಯಾಂಕ ವ್ಯವಸ್ಥಾಪಕರ ಪ್ರಭುದೇವ ಎನ್‌ಜಿ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರುಗಳ ಜೊತೆ ತುರ್ತು ಸಭೆ ಮಾಡಿದ್ದಾರೆ.
ಸರಕಾರದಿಂದ ಬಿಡುಗಡೆಯಾದ ಯಾವುದೇ ತರಹದ ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡದೆ ಗ್ರಾಹಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು. ಅವರ ಜೊತೆ ಸಂಯಮದಿಂದ ವರ್ತಿಸಬೇಕು. ತಾಂತ್ರಿಕ ಸಮಸ್ಯೆ ಇದ್ದರೆ ಗ್ರಾಹಕರಿಗೆ ಸರಿಯಾಗಿ ತಿಳುವಳಿಕೆ ನೀಡಿ ಮಾರ್ಗದರ್ಶನ ಮಾಡಬೇಕು ಮತ್ತು ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು ಎಂದು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಯೋಜನೆಗಳ ಲಾಭವನ್ನು ತಲುಪಿಸುತ್ತಿವೆ. ಆದರೆ ಎಲ್ಲ ಬ್ಯಾಂಕ್ ಗಳು ಇದನ್ನು ಅನುಸರಿಸಬೇಕು. ಸರಿಯಾದ ಸಮಯಕ್ಕೆ ಉದ್ಯೋಗಿಗಳಿಗೆ ಸಾಲ, ಸಹಾಯಧನ ಸೌಲಭ್ಯ ದೊರೆಯಬೇಕು ಎಂದು ಹೇಳಿದ್ದಾರೆ.

ಪ್ರೋತ್ಸಾಹ ಧನವನ್ನು ಸಾಲಕ್ಕೆ ಜಮೆ ಮಾಡಬಾರದು
ರೈತರ ಸಹಮತ ವಿಲ್ಲದೆ ಬರಪರಿಹಾರ ಸೇರಿದಂತ ಯಾವ ಪ್ರೋತ್ಸಹಧನವನ್ನು ಸಾಲಕ್ಕೆ ಜಮೆ ಮಾಡಬಾರದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲ ಬ್ಯಾಂಕ್ ಶಾಖೆಗಳಿಗೆ ಮಾಹಿತಿ ನೀಡಿ, ರೈತರಿಗೆ ತೊಂದರೆ ಆಗದಂತೆ ನಿರಂತರ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದ್ದಾರೆ.
ಜಿಲ್ಲೆಯ ಬ್ಯಾಂಕುಗಳಿಂದ 2,90,392 ಫಲಾನುಭವಿಗಳು ಕೃಷಿ ಸಾಲ ಪಡೆದಿದ್ದಾರೆ. ಗೊತ್ತುಪಡಿಸಿದ ಗುರಿಗೆ ಹೋಲಿಸಲಾಗಿ ಶೇ. 125 ಕೃಷಿ ಸಾಲ ಮತ್ತು ಶೇ.164 ಆಧ್ಯತಾ ವಲಯಕ್ಕೆ ಹೆಚ್ಚಿನ ಸಾಲವನ್ನು ವಿತರಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್. ಜಿ. ಮಾಹಿತಿ ನೀಡಿದ್ದಾರೆ.
2024-25 ನೇ ಸಾಲಿನಲ್ಲಿ ಬೆಳೆ ಸಾಲ ವಲಯದಲ್ಲಿ 1,27,283 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 1,640.27 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 2291.25 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 140 ರಷ್ಟು ಶೇಕಡಾವಾರು ಸಾಧನೆ ಆಗಿದೆ. ಕೃಷಿ ಅವಧಿ ಸಾಲ ವಲಯದಲ್ಲಿ 1,63,109 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 1,741.76 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 1,946.22 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ ಎಂದಿದ್ದಾರೆ.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವಲಯದಲ್ಲಿ 47,160 ಫಲಾನುಭವಿಗಳು ಇದ್ದಾರೆ. ಇತರ ಆಧ್ಯತಾ ವಲಯದಲ್ಲಿ 68,824 ಫಲಾನುಭವಿಗಳು ಇದ್ದಾರೆ. ಆಧ್ಯತಾ ರಹಿತ ವಲಯದಲ್ಲಿ 1,39,313 ಫಲಾನುಭವಿಗಳು ಇದ್ದಾರೆ. ಒಟ್ಟಾರೆಯಾಗಿ 5,45,689 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 14,580.46 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 19,560.73ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 139 ಶೇಕಡಾವಾರು ಸಾಧನೆ ಆಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications