ಆಗಸ್ಟ್‌ 28ಕ್ಕೆ ಧಾರವಾಡ ಐಐಟಿ ಕ್ಯಾಂಪಸ್‌ಗೆ ಶಂಕುಸ್ಥಾಪನೆ

Posted By:
Subscribe to Oneindia Kannada

ಧಾರವಾಡ, ಆಗಸ್ಟ್ 09 : ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಶಂಕುಸ್ಥಾಪನಾ ಕಾರ್ಯಕ್ರಮ ಆಗಸ್ಟ್ 28ರಂದು ನಡೆಯಲಿದೆ. ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಐಐಟಿ ತರಗತಿಗಳು ಆಗಸ್ಟ್ 1ರಿಂದಲೇ ಆರಂಭವಾಗಿವೆ.

ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಸೋಮವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೆಡೇಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಆ.28ರಂದು ಹಮ್ಮಿಕೊಂಡಿರುವ ಐಐಟಿ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.[ಧಾರವಾಡ ಐಐಟಿ ಕ್ಯಾಂಪಸ್ಸಿಗೆ 470 ಎಕರೆ ಜಾಗ]

Basavaraj Rayareddy

ಧಾರವಾಡದ ಐಐಟಿ ಕ್ಯಾಂಪಸ್‌ಗೆ ಕೆಲಗೇರಿ ಗ್ರಾಮದಲ್ಲಿ 470 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಜಾಗದಲ್ಲಿ ಶಾಶ್ವತ ಕ್ಯಾಂಪಸ್ ನಿರ್ಮಾಣವಾಗಲಿದ್ದು, ಆಗಸ್ಟ್ 28ರಂದು ಇದಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.[ಐಐಟಿ ತರಗತಿಗಳು ಆರಂಭ]

ಉದ್ಘಾಟನೆಯಾಗಿಲ್ಲ : ಧಾರವಾಡದ ಐಐಟಿ ಜುಲೈ 31ರಂದು ಉದ್ಘಾಟನೆಯಾಗಬೇಕಿತ್ತು. ಆಗಸ್ಟ್ 1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಆದರೆ, ಮಹದಾಯಿ ಹೋರಾಟದ ಹಿನ್ನಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆದಿಲ್ಲ. ಆದರೆ, ತರಗತಿಗಳು ಆಗಸ್ಟ್ 1ರಿಂದ ಆರಂಭವಾಗಿವೆ.[ಧಾರವಾಡ ಐಐಟಿ ಉದ್ಘಾಟನೆ ಮುಂದಕ್ಕೆ]

120 ವಿದ್ಯಾರ್ಥಿಗಳು : ಧಾರವಾಡ ಐಐಟಿ ಮೊದಲ ಬ್ಯಾಚ್‌ನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ವಿಭಾಗಕ್ಕೆ ತಲಾ 40 ರಂತೆ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇವರಲ್ಲಿ 8 ವಿದ್ಯಾರ್ಥಿಗಳು ಕನ್ನಡಿಗರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka higher education minister Basavaraj Rayareddy invited union minister of Human Resource Development (HRD) Prakash Javadekar for the Dharwad Indian Institute of Technology (IIT)foundation laying ceremony scheduled on August 28, 2016.
Please Wait while comments are loading...