ದಾವಣಗೆರೆಯಲ್ಲಿ ಅಪಘಾತ: ಖಾಸಗಿ ಟಿವಿ ನಿರೂಪಕ ಸಾವು
ದಾವಣಗೆರೆ, ಮೇ 24: ನಿಂತಿದ್ದ ವಾಹನವೊಂದಕ್ಕೆ ಗುದ್ದಿದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತರಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬಲ್ಲಿ ನಡೆದ ಈ ಘಟನೆಯಲ್ಲಿ ಮೃತರಾದ ಇಬ್ಬರಲ್ಲಿ ಒಬ್ಬ ವ್ಯಕ್ತಿಯನ್ನು ಖಾಸಗಿ ಟಿವಿ ಚಾನೆಲ್ ವೊಂದರ ನಿರೂಪಕ ಎಂದು ಗುರುತಿಸಲಾಗಿದೆ.

ಖಾಸಗೀ ಟಿವಿ ವಾಹಿನಿಯ ನಿರೂಪಕ ಚಂದ್ರಶೇಖರ್(34) ಮತ್ತು ಸಂತೋಷಿ(24) ಎಂಬುವವರೇ ಮೃತ ದುರ್ದೈವಿಗಳು.
ಘಟನೆಗೆ ಸಂಬಂಧಿಸಿದಂತೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications