Arecanut Price: ಕ್ವಿಂಟಾಲ್ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಜನವರಿ 2ರ ದರಪಟ್ಟಿ
Arecanut Price: ಕ್ವಿಂಟಾಲ್ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆಯಾಗಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾಗುವಂತೆ ಮಾಡಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ಜನವರಿ 2, 2026) ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಂದು (ಜನವರಿ 2) ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 58,700 ರೂಪಾಯಿ, ಕನಿಷ್ಠ ದರ 56,812 ರೂಪಾಯಿ ಇದ್ದು, ಸರಾಸರಿ ಬೆಲೆ 57,828 ರೂಪಾಯಿ ಆಗಿದೆ. ಕಳೆದ ಕೆಲ ವಾರಗಳಿಂದ ಕುಸಿತ ಕಂಡಿದ್ದ ಅಡಿಕೆ ಧಾರಣೆ ಇದೀಗ ಏರಿಕೆಯತ್ತ ಹೊರಟಿದೆ. ಇದರಿಂದ ಬೆಳೆಗಾರರಲ್ಲಿ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ.

60,000 ರೂಪಾಯಿ ಗಡಿ ದಾಟುವ ಸಾಧ್ಯತೆ: ನವೆಂಬರ್ ತಿಂಗಳ ಆರಂಭದಲ್ಲಿ ಕ್ವಿಂಟಲ್ ಅಡಿಕೆ ಧಾರಣೆ 60,000 ರೂಪಾಯಿ ಇತ್ತು. ಡಿಸೆಂಬರ್ ಆರಂಭ ಆಗುತ್ತಿದ್ದಂತೆ ಸತತ ಕುಸಿತ ಕಂಡು 55,000 ಸಾವಿರ ರೂಪಾಯಿಗೆ ಕುಸಿತ ಕಂಡಿತ್ತು. ಇದೀಗ ಸುಧಾರಣೆ ಕಂಡಿದ್ದು, 58,000 ರೂಪಾಯಿ ಗಡಿ ದಾಟಿದೆ. ಕೆಲವೇ ದಿನಗಳಲ್ಲಿ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಿ ಮತ್ತೆ 60,000 ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ವರ್ಷ ಕೊಯ್ಲು ಆರಂಭದಿಂದಲೂ ದರದಲ್ಲಿ ಭಾರೀ ಏರಿಕೆಯಾಗಿತ್ತು. ಆದರೆ, ವರ್ಷದ ಕೊನೆ ತಿಂಗಳು ಅಂದರೆ ಡಿಸೆಂಬರ್ ಮಧ್ಯದವರೆಗೂ ಇಳಿಕೆ ಕಂಡಿದ್ದು, ಬೆಳೆಗಾರರಿಗೆ ಆತಂಕ ಹೆಚ್ಚಾಗಿತ್ತು. ಆದರೆ, ಇದೀಗ ಧಾರಣೆ ಏರಿಕೆಯತ್ತ ಹೊರಟಿರುವ ಕಾರಣ ಅವರ ಮುಖದಲ್ಲಿ ಆತಂಕ ದೂರ ಆದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ತಿಂಗಳವಾರು ಅಡಿಕೆ ದಾರಣೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಕಳೆದ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆ ಆಗುತ್ತಲೇ ಇತ್ತು. ಕೊನೆಗೂ ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು.
ಅಕ್ಟೋಬರ್ ನಾಲ್ಕನೇ ವಾರದ ಆರಂಭದಲ್ಲಿ 70,000 ರೂಪಾಯಿ ಸಮೀಪದತ್ತ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ 70,000 ರೂಪಾಯಿ ಮುಟ್ಟುತ್ತದೆ ಅನ್ನುವಷ್ಟರಲ್ಲೇ ಧಾರಣೆ ಇಳಿಕೆ ಆಗಿತ್ತು. ಕಳೆದ ಕೆಲ ದಿನಗಳಿಂದ ಹೀಗೆ ಇಳಿಮುಖ ಮಾಡಿದ್ದ ಇದೀಗ 2026ನೇ ವರ್ವಷ ಆರಂಭದಲ್ಲಿ ಧಾರಣೆಯಲ್ಲಿ ಭಾರೀ ಸುಧಾರಣೆ ಕಂಡಿದ್ದು, ಭರ್ಜರಿ ಏರಿಕೆಯತ್ತ ಹೊರಟಿದೆ.
ಮೇ ತಿಂಗಳ ಆರಂಭದಿಂದಲೂ ಜೂನ್ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಕೆ ಮಾಡಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಕಂಡಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಅಕ್ಟೋಬರ್ ಅಂತ್ಯದವರೆಗೂ ಸತತವಾಗಿ ಏರಿಕೆ ಹಾದಿ ಹಿಡಿದಿತ್ತು.
ಬಳಿಕ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವೆಂಬರ್ ಮಧ್ಯದಿಂದ ಸತತ ಭರ್ಜರಿ ಏರಿಕೆಯತ್ತ ಹೊರಟಿತ್ತು. ಆದರೆ, ಡಿಸೆಂಬರ್ ಮಧ್ಯದಲ್ಲಿ ಅದೇ ಆಡಿದ್ದೇ ಆಟ ಎಂಬಂತೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಲೇ ಬಂದಿತ್ತು. ಆದರೆ, ಇದೀಗ ಇದೀಗ ಇಂದು ಭರ್ಜರಿ ಏರಿಕೆಯಾಗಿದೆ. ಇದರಿಂದ ಬೆಳೆಗಾರರಲ್ಲಿ ಸಂತಸ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳ ಆಗುವ ಭರವಸೆಯಲ್ಲಿದ್ದಾರೆ.
ಇದೀಗ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗಿದ್ದು, ಅಲ್ಲಲ್ಲಿ ಮಾತ್ರ ಜಿನುಗು ಮಳೆ ಆಗುತ್ತಿದೆ. ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಅಲ್ಲದೆ, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಜನವರಿ ನಂತರದ ದಿನಗಳಲ್ಲಿ ಶೀತಗಾಳಿ ಪ್ರಮಾಣ ತಗ್ಗುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ. ಇನ್ನೂ ಈ ಬಾರಿ ಉತ್ತಮ ಮಳೆ ಸುರಿದ ಕಾರಣ ಅಡಿಕೆ ಫಸಲು ಕೂಡ ಚೆನ್ನಾಗಿ ಬಂದಿದೆ. ಆದರೆ, ಇದಕ್ಕೆ ತಕ್ಕಂತೆ ಬೆಲೆ ಇಲ್ಲ ಎನ್ನುವ ಬೇಸರದಲ್ಲಿ ಅಡಿಕೆ ಬೆಳೆಗಾರರಿದ್ದರು. ಇದೀಗ ಧಾರಣೆಯಲ್ಲಿ ಸುಧಾರಣೆ ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications