Arecanut price: ಕ್ವಿಂಟಾಲ್ ಅಡಿಕೆ ಧಾರಣೆ ದಾಖಲೆ ಮಟ್ಟದಲ್ಲಿ ಏರಿಕೆ: ಆಗಸ್ಟ್ 26ರ ದರಪಟ್ಟಿ ಇಲ್ಲಿದೆ
Arecanut Price: ರಾಜ್ಯದಲ್ಲಿ ಇಳಿಕೆಯತ್ತ ಸಾಗಿದ್ದ ಅಡಿಕೆ ಧಾರಣೆ ಕಳೆದ ಕೆಲ ದಿನಗಳಿಂದ ಏರಿಕೆಯತ್ತ ಸಾಗಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಅಡಿಕೆಯನ್ನ ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಜಿಲ್ಲೆಯಲ್ಲಿ ಇದೀಗ ಇಂದು (ಆಗಸ್ಟ್ 26) ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಜಿಲ್ಲೆಯಲ್ಲಿ ಇಂದಿನ ಕ್ವಿಂಟಾಲ್ ಅಡಿಕೆ ಗರಿಷ್ಠ ದರ 60,500 ರೂಪಾಯಿ ಆಗಿದೆ. ಇದು ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ, ತುಸು ಇಳಿಕೆಯಾದಂತಾಗಿದೆ. ಆದರೆ. ಇಷ್ಟಿದ್ದರೂ ಪರ್ವಾಗಿಲ್ಲ. ಇದೇ ದಾಖಲೆ ಮೊತ್ತ. ಮತ್ತಷ್ಟು ಇಳಿಕೆಯಾಗದಿದ್ದರೆ ಅಷ್ಟೇ ಸಾಕು. ಒಂದು ವೇಳೆ ಮತ್ತೆ ಏರಿಕೆಯಾದರೆ ನಾವು ಹಾಕಿದ ಬಂಡವಾಳ ಕೈಗೆ ಸಿಕ್ಕಂತಾಗಲಿದೆ ಎನ್ನುವುದು ರೈತರ ಮಾತಾಗಿದೆ.

ಪ್ರಸ್ತುತ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 60,500 ರೂಪಾಯಿ, ಕನಿಷ್ಠ ದರ 54,012 ರೂಪಾಯಿ ಇದ್ದು, ಸರಾಸರಿ ಬೆಲೆ 58,195 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ 55,000 ರೂಪಾಯಿಗಿಂತ ಕೆಳಗೆ ಇಳಿದಿತ್ತು. ಆದರೆ, ಇದೀಗ ಮತ್ತೆ ಏರಿಕೆಯತ್ತ ಸಾಗಿರುವುದು ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚದಂತಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆಯಾಗುತ್ತಾ ಬಂದಿತ್ತು. ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು.
ಆದರೆ, ಮೇ ಆರಂಭದಿಂದಲೂ ಜೂನ್ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಆದರೆ, ಇದೀಗ ಭರ್ಜರಿಯಾಗಿ ಏರಿಕೆಯಾಗುತ್ತಲಿದೆ. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಬಳಿಕ ಏರಿಕೆ ಆಗುತ್ತಲಿದ್ದು, ಆಗಸ್ಟ್ ತಿಂಗಳಿನಲ್ಲೇ ಕ್ವಿಂಟಾಲ್ ಅಡಿಕೆ ದರದಲ್ಲಿ ಮತ್ತೆ ದಾಖಲೆ ಮಟ್ಟ ತಲುಪುವ ಸಾಧ್ಯತೆಯಿದೆ. ಈಗಾಗಲೇ ಧಾರಣೆಯಲ್ಲಿ ಭಾರೀ ಸುಧಾರಣೆ ಕಂಡಿದ್ದರು, ಇದರಿಂದ ರೈತರು ಸಂತಸದಲ್ಲಿದ್ದಾರೆ. ಇನ್ನೂ ಏನಾದರೂ ಏರಿಕೆಯಾದರೆ, ರೈತರ ಮುಖದಲ್ಲಿ ಮಂದಹಾಸ ದುಪ್ಪಟ್ಟಾಗಲಿದೆ.
ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನೂ ಈ ಬಾರಿ ಅವಧಿಗೂ ಮುನ್ನ ಜೂನ್‌ನಲ್ಲೇ ಮುಂಗಾರು ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆ ಉತ್ತಮ ಫಸಲಿನ ಜೊತೆ ಮತ್ತೆ ಬೆಲೆ ಏರಿಕೆ ಆಗುವ ಭರವಸೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಮತ್ತೊಂದೆಡೆ, ಮಳೆಗಾಲದಲ್ಲಿ ಅಡಿಕೆಯನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಆತಂಕವೂ ಸಹ ಬೆಳೆಗಾರರನ್ನ ಕಾಡತೊಡಗಿದೆ.
ಭಾರೀ ಮಳೆ ಹಿನ್ನೆಲೆ ಅಡಿಕೆಯನ್ನು ಒಳಗಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಅದರಲ್ಲೂ ಈ ವೇಳೆಯೇ ದರ ಹೆಚ್ಚಳ ಆಗುತ್ತಿದ್ದು, ರೈತರು ಅಡಿಕೆಯನ್ನು ಒಳಗಿಸಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣ ಆಗಿಬಿಟ್ಟಿದೆ. ಮತ್ತೆ ಯಾವಾಗ ಏರಿಕೆ ಆಗುತ್ತದೆಯೋ ಗೊತ್ತಿಲ್ಲ.. ಆದರೆ ಈಗಲೇ ನಮಗೆ ಸಿಕ್ಕಷ್ಟು ಸಿಗಲಿ ಎನ್ನುವುದು ಹಳೆ ಅಡಿಕೆ ಹೊಂದಿದವರ ಮಾತಾಗಿದೆ. ಇನ್ನು ಹೊಸ ಅಡಿಕೆ ಹೊಂದಿರುವವರು ಸಹ ಮಳೆಯಿಂದ ತಪ್ಪಿಸಿಕೊಂಡು ಅಡಿಕೆ ಒಳಗಿದರೆ, ಸಾಕು ಎಂದು ಕಾದುಕುಳಿತಿದ್ದಾರೆ.
ಇನ್ನು ಇದೀಗ ಮಳೆ ತಗ್ಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಚುರುಕು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟದಿಂದಾಗಿ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿ ಜನ ಜೀವನ ಅಸ್ತವ್ಯವಸ್ತವಾದ ಘಟನೆಗಳು ನಡೆದಿವೆ.












Click it and Unblock the Notifications