2nd PUC Result 2025: ದ್ವಿತೀಯ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ದಾವಣಗೆರೆ ವಿದ್ಯಾರ್ಥಿನಿ
2nd PUC Result 2025: ರಾಜ್ಯದಲ್ಲಿ ಮಾರ್ಚ್ 1ರಿಂದ 20ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಏಪ್ರಿಲ್ 8ರಂದು ಫಲಿತಾಂಶ ಬಿಡುಗಡೆಯಾಗಿದೆ. ಉತ್ತೀರ್ಣ ಫಲಿತಾಂಶದಲ್ಲಿ ಉಡುಪಿ ಮೊದಲಿದ್ದರೆ, ಯಾದಗಿರಿ ಜಿಲ್ಲೆ ಕೊನೇ ಸ್ಥಾನದಲ್ಲಿದೆ. ಹಾಗಾದ್ರೆ ದಾವಣಗೆರೆ ಜಿಲ್ಲೆ ಸ್ಥಾನ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025-25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ನಿನ್ನೆ ಅಂದರೆ ಏಪ್ರಿಲ್ 8ರಂದು ಪ್ರಕಟ ಆಗಿದೆ. ಇಡೀ ರಾಜ್ಯದಲ್ಲು ಶೇಕಡ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 69.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ ಶೇಕಡ 11ರಷ್ಟು ಫಲಿತಾಂಶ ಕುಸಿತವಾಗಿದೆ.

ರಾಜ್ಯದ ಜಿಲ್ಲಾವಾರು ಫಲಿತಾಂಶದಲ್ಲಿ ಜಿಲ್ಲೆ 20ನೇ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 21,153 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು, ಶೇಕಡ 69.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಸರ್.ಎಂ.ವಿ ಪದವಿ ಪೂರ್ವ ಕಾಲೇಜಿನ ಅದಿತಿ ವಿ.ಅಂಗಡಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸಿ ರಾಜ್ಯದಲ್ಲಿ 3ನೇ ರ‍್ಯಾಂಕ್ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದೇ ಕಾಲೇಜಿನ ಎನ್.ಎಂ. ಜಯಲಕ್ಷ್ಮಿ, ರಾಹುಲ್ ಮಠದ್ ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಎನ್.ರವಿಕಿರಣ್, ದಿ ಟೀಮ್ ಪದವಿ ಪೂರ್ವ ಕಾಲೇಜಿನ ಸೃಜನಾ ಎಸ್.ಗೌಡ 595 ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಜಿಲ್ಲಾವಾರು ಉತ್ತೀರ್ಣ ಫಲಿತಾಂಶ
* ಉಡುಪಿ - ಶೇಕಡ 93.90
* ದಕ್ಷಿಣ ಕನ್ನಡ - ಶೇಕಡ 93.57
* ಬೆಂಗಳೂರು ದಕ್ಷಿಣ - ಶೇಕಡ 85.36
* ಕೊಡಗು - ಶೇಕಡ 83.84
* ಬೆಂಗಳೂರು ಉತ್ತರ - ಶೇಕಡ 83.31
* ಉತ್ತರ ಕನ್ನಡ - ಶೇಕಡ 82.93
* ಶಿವಮೊಗ್ಗ - ಶೇಕಡ 79.91
* ಬೆಂಗಳೂರು ಗ್ರಾಮಾಂತರ - ಶೇಕಡ 79.70
* ಚಿಕ್ಕಮಗಳೂರು - ಶೇಕಡ 79.56
* ಹಾಸನ - ಶೇಕಡ 77.56
* ಚಿಕ್ಕಬಳ್ಳಾಪುರ - ಶೇಕಡ 75.80
* ಮೈಸೂರು - ಶೇಕಡ 74.30
* ಚಾಮರಾಜನಗರ - ಶೇಕಡ 73.97
* ಮಂಡ್ಯ - ಶೇಕಡ 73.27
* ಬಾಗಲಕೋಟೆ - ಶೇಕಡ 72.83
* ಕೋಲಾರ - ಶೇಕಡ 72.45
* ಧಾರವಾಡ - ಶೇಕಡ 72.32
* ತುಮಕೂರು - ಶೇಕಡ 72.02
* ರಾಮನಗರ - ಶೇಕಡ 69.71
* ದಾವಣಗೆರೆ - ಶೇಕಡ 69.45
* ಹಾವೇರಿ - ಶೇಕಡ 67.56
* ಬೀದರ್ - ಶೇಕಡ 67.31
* ಕೊಪ್ಪಳ - ಶೇಕಡ 67.20
* ಚಿಕ್ಕೋಡಿ - ಶೇಕಡ 66.76
* ಗದಗ - ಶೇಕಡ 66.64
* ಬೆಳಗಾವಿ - ಶೇಕಡ 65.37
* ಬಳ್ಳಾರಿ - ಶೇಕಡ 64.41
* ಚಿತ್ರದುರ್ಗ - ಶೇಕಡ 59.87
* ವಿಜಯಪುರ - ಶೇಕಡ 58.81
* ರಾಯಚೂರು - ಶೇಕಡ 58.75
* ಕಲಬುರಗಿ - ಶೇಕಡ 55.70
* ಯಾದಗಿರಿ - ಶೇಕಡ 48.45












Click it and Unblock the Notifications