ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರೀನ್ ಝೋನ್‌ಗೆ ಸೇರಿದ ಬೆನ್ನಲ್ಲೇ ದಾವಣಗೆರೆ ಬೆನ್ಹತ್ತಿದ ಕೊರೊನಾ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 29: ಗ್ರೀನ್ ಝೋನ್‌ಗೆ ಸೇರಿದ ಮರುದಿನವೇ ಬೆಣ್ಣೆನಗರಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಲ್ಲಿನ ಭಾಷಾ ನಗರದ ಮಹಿಳೆಗೆ ಸೋಂಕು ತಗುಲಿದೆ.

Recommended Video

ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿರೋ ತಬ್ಲಿಘಿಗಳಿಗೆ ಸಲಾಂ

ಈ ಮಹಿಳೆ ಭಾಷಾ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಕೆಲಸ ಮಾಡುತ್ತಿದ್ದರು. ಎರಡು ದಿನದ ಹಿಂದೆ ಗಂಟಲು ನೋವು, ಮೈ ಕೈ ನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲು ದ್ರವವನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ ಹಾಗೂ ಪುಣೆಯ ಲ್ಯಾಬ್ ‌ನಲ್ಲೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಕೊರೊನಾ: ಆರೆಂಜ್‌ ಜೋನ್‌ನಿಂದ ಗ್ರೀನ್‌ ಜೋನ್‌ನತ್ತ ದಾವಣಗೆರೆಕೊರೊನಾ: ಆರೆಂಜ್‌ ಜೋನ್‌ನಿಂದ ಗ್ರೀನ್‌ ಜೋನ್‌ನತ್ತ ದಾವಣಗೆರೆ

ಜಿಲ್ಲಾಡಳಿತ ಮಹಿಳೆ ಇರುವ ಭಾಷಾ ನಗರ ಪ್ರದೇಶವನ್ನು ಸೀಲ್ ‌ಡೌನ್ ಮಾಡಲಿದೆ. ಗ್ರೀನ್ ಝೋನ್ ಘೋಷಣೆ ಬೆನ್ನಲ್ಲೇ ಸೋಂಕು ಪತ್ತೆಯಾಗಿದ್ದು, ಈ ಸೋಂಕಿತ ಮಹಿಳೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 20 ಜನರನ್ನು ಜಿಲ್ಲಾಡಳಿತ ಗುರುತಿಸಿದೆ. ಈ ಸೋಂಕಿತ ಮಹಿಳೆ ಏಪ್ರಿಲ್ 23ರಂದು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ. ಅಷ್ಟೆ ಅಲ್ಲದೇ ಮಹಿಳೆಗೆ ಪತಿ ಹಾಗೂ 18 ವರ್ಷದ ಮಗ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

One Coronapostive Case Found In Green Zone Davanagere Today

 ದಾವಣಗೆರೆಯಲ್ಲಿ ಮುಂದುವರೆದ ಅನಗತ್ಯ ಸಂಚಾರ: ಆಟೋ ವಶ ದಾವಣಗೆರೆಯಲ್ಲಿ ಮುಂದುವರೆದ ಅನಗತ್ಯ ಸಂಚಾರ: ಆಟೋ ವಶ

ಸೋಂಕಿತ ಮಹಿಳೆ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ಸೋಂಕು ಪೀಡಿತ ಮಹಿಳೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

English summary
One coronapositive case confirmed in green zone davanagere today informed dc mahantesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X