ಕಾಂಗ್ರೆಸ್‌ಗೆ BJP, JDSನಿಂದ ಯಾರು ಬೇಕಾದ್ರೂ ಬರಬಹುದು: ಸಚಿವ ಚೆಲುವರಾಯ ಸ್ವಾಮಿ
ಚಿತ್ರದುರ್ಗ, ಆಗಸ್ಟ್, 29: ರಾಜ್ಯದಲ್ಲಿ ಪಕ್ಷಾಂತರ ಪರ್ವ ಸದ್ದು ಜೋರಾಗಿದ್ದು, ಬಿಜೆಪಿ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಎಂದು ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ಚಿತ್ರದುರ್ಗದಲ್ಲಿ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನಾಯಕರು ಸೇರ್ಪಡೆಯಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನಮ್ಮ ಪಕ್ಷಕ್ಕೆ ಹಾಲಿ, ಮಾಜಿ, ಬಿಜೆಪಿ, ಜೆಡಿಎಸ್ ಯಾರು ಬೇಕಾದರೂ ಬರಬಹುದು. ಈಗಾಗಲೇ ನಾವು 136 ಜನ ಶಾಸಕರಿದ್ದೀವಿ, ನಮಗೇನೂ ಕೊರತೆಯಿಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಕಳೆದ ಮೂರು ತಿಂಗಳಿಂದ ನಾಯಕತ್ವ ಕೊಟ್ಟಿಲ್ಲ ಎಂಬ ಕೂಗು ಕಾಡತೊಡಗಿದೆ. ಆದ್ದರಿಂದ ನಾಯಕತ್ವ ಇಲ್ಲದ ಪಕ್ಷದಲ್ಲಿ ಇರಬೇಕಾ ಅಥವೂ ಬೇಡ್ವಾ ಎಂಬ ಗೊಂದಲ ಅವರಲ್ಲಿದೆ. ನಮ್ಮ ಪಕ್ಷಕ್ಕೆ ಯಾರಾದರೂ ಸೇರ್ಪಡೆಯಾಗ್ತೀವಿ ಅಂದರೆ ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ನಾಯಕರೂ ಅದನ್ನೇ ಹೇಳಿದ್ದಾರೆ. ನಮ್ಮದೂ ಅದೇ ಅಭಿಪ್ರಾಯವಾಗಿದೆ ಎಂದು ಹೇಳಿದರು.
ನಾವು ಈಶ್ವರಪ್ಪಗೆ ಕರೆದಿಲ್ಲ
ತಿಪ್ಪರಲಾಗಾ ಹಾಕಿದ್ದರೂ ನಮ್ಮ ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂಬ ಮಾಜಿ ಸಚಿವ ಈಶ್ವರಪ್ಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ನಾವೆಲ್ಲಾದರೂ ಈಶ್ವರಪ್ಪ ಅವರನ್ನು ಕರದಿದ್ವಾ ಎಂದು ತಿರುಗೇಟು ನೀಡಿದರು. ಅಲ್ಲದೆ ನಾವೇನೂ ಈಶ್ಚರಪ್ಪನ್ನು ಕರದೇ ಇಲ್ವಲ್ಲಾ ಎಂದು ಹೇಳುವ ಮೂಲಕ ಅವರನ್ನು ಶಿವಮೊಗ್ಗದಿಂದ ಹಾವೇರಿಗೆ ಕಳುಹಿಸಿದ್ದಾರೆ. ಅವರ ಪರೀಸ್ಥಿತಿ ಈಗ ಅವರಿಗೇ ಗೊತ್ತಿದೆ ಎಂದರು.
ಯಾರು ಇಚ್ಚೇ ಪಟ್ಟು ಬರುತ್ತಾರೆಯೋ ಬರಲು, ನಾವು ಯಾರನ್ನೂ ಕರೆದಿಲ್ಲ ಎಂದು ತಿಳಿಸಿದರು. ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಈಶ್ವರಪ್ಪ ಅವರ ಮತ್ತೊಂದು ಹೇಳಿಕೆಗೆ ಉತ್ತರಿಸಿದ ಅವರು, ಈಶ್ವರಪ್ಪ ಮಾತು ಕೇಳಿಲ್ವೇನ್ರೀ, ಅವರ ಮಾತಿಗೆಲ್ಲ ಯಾಕೆ ತಲೆ ಕೆಡಿಸಿಕೊಳ್ತೀರಿ, ಈಶ್ವರಪ್ಪ ಹೇಳಿದ್ದು ಯಾವುದು ಆಗಿದೆ ಎಂದು ವ್ಯಂಗ್ಯವಾಡಿದರು.












Click it and Unblock the Notifications