ಸಂವಿಧಾನ ಮುಟ್ಟಿದರೆ ದೊಡ್ಡ ಆಂದೋಲ ಆಗುತ್ತದೆ: ಬಿಜೆಪಿ ಸರ್ಕಾರಕ್ಕೆ ಜಿ.ಪರಮೇಶ್ವರ್ ಎಚ್ಚರಿಕೆ

ಚಿತ್ರದುರ್ಗ, ಜನವರಿ, 08: ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಲು ಹೊರಟರೇ ದೊಡ್ಡ ಆಂದೋಲನವಾಗುತ್ತದೆ ಎಂದು ಡಾ.ಜಿ. ಪರಮೇಶ್ವರ್ ಚಿತ್ರದುರ್ಗದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ ಮತ್ತು ಎಸ್‌ಟಿ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಅಡಿಪಾಯವಾಗಿ ಈ ಸಮುದಾಯಗಳು ನಿಂತಿವೆ ಎಂದು ಹೇಳಿದರು. ನಮ್ಮ ಸಮುದಾಯದ ವಿಚಾರಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯವರು ಮೊಸಳೆ ಕಣ್ಣಿರು ಸುರಿಸುತ್ತಿವೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಒಂದು ವೇಳೆ
ಸಂವಿಧಾನ ಮುಟ್ಟಿದರೆ ದೊಡ್ಡ ಆಂದೋಲನ ಆಗುತ್ತದೆ. ವಿಶ್ವದಲ್ಲೇ ಅತೀ ದೊಡ್ಡ ಸಂವಿಧಾನ ಇದಾಗಿದ್ದು, ಸಂವಿಧಾನ ಮುಟ್ಟಿದ್ದೇ ಆದರೆ ನಾವು ಯಾರೂ ಸುಮ್ಮನೇ ಕೂರುವುದಿಲ್ಲ ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಎಸ್‌ಸಿ- ಎಸ್‌ಟಿ ಏಳಿಗೆಗಾಗಿ ಜನ ಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದೆವು. ನಾವು 24.1% ಜನ ಸಂಖ್ಯೆಗೆ 88 ಸಾವಿರ ಕೋಟಿ ನೀಡಿದ್ದೇವೆ. ಆದರೆ ಇಂದು ಬಿಜೆಪಿ ಸರ್ಕಾರ 21-22 ಆಯವ್ಯಯದಲ್ಲಿ ಬಜೆಟ್ ನೀಡಿದ್ದಾರೆ. ನಮಗೆ 42 ಸಾವಿರ ಕೋಟಿ ರೂಪಾಯಿ ಹಣ ನೀಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಸಿಎಂ ವಿರುದ್ಧ ಪರಮೇಶ್ವರ್ ವಾಗ್ದಾಳಿ

ಸಿಎಂ ವಿರುದ್ಧ ಪರಮೇಶ್ವರ್ ವಾಗ್ದಾಳಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇವಲ 28 ಸಾವಿರ ಕೋಟಿ ಮಾತ್ರ ನೀಡಿದ್ದು, ಇದು ಕಾನೂನಿನ ಉಲ್ಲಂಘನೆ ಆಗಿದೆ. ನಮ್ಮ ಜನರಿಗೆ ಮೋಸ ಮಾಡಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆ, ಮೀಸಲಾತಿ ಹೆಚ್ಚಳ ಮಾಡಿ ಎಂದರೆ ನಾವು ಮಾಡಲು ಬರುವುದಿಲ್ಲ ಎನ್ನುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬಾರದು. ನಮ್ಮ ಏಳಿಗೆ ಬಯಸದೆ ಇರುವವರಿಗೆ ಮತ ಹಾಕಬಾರದು ಎಂದು ವಾಗ್ದಾಳಿ ನಡೆಸಿದರು.

 ಸುಳ್ಳೇ ಬಿಜೆಪಿಯವರ ಮನೆ ದೇವರು- ಡಿ.ಕೆ.ಶಿ

ಸುಳ್ಳೇ ಬಿಜೆಪಿಯವರ ಮನೆ ದೇವರು- ಡಿ.ಕೆ.ಶಿ

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸುಳ್ಳು ಹೇಳದೆ ಬದುಕಲು ಸಾಧ್ಯವಿಲ್ಲ. ಸುಳ್ಳೇ ಅವರ ಮನೆ ದೇವರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ ಮತ್ತು ಎಸ್ಟಿ ಸಮುದಾಯದ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಾಂಗ್ರೆಸ್ ಶಕ್ತಿ ದೇಶದ ಶಕ್ತಿಯಾಗಿದ್ದು, ಇಂತಹ ಐತಿಹಾಸಿಕ ಸಮಾವೇಶ ಎಲ್ಲಾ ಪಕ್ಷಗಳಿಗೆ ಸಂದೇಶ ಕೊಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತರ ಶಕ್ತಿಯಾಗಿ ಅವರ ಜೊತೆ ಕಾಂಗ್ರೆಸ್ ನಿಂತಿದೆ ಎಂದು ಹೇಳಿದರು.

 ಪರಿಶಿಷ್ಟ ವರ್ಗ ಕಾಂಗ್ರೆಸ್‌ನ ಬುನಾದಿ

ಪರಿಶಿಷ್ಟ ವರ್ಗ ಕಾಂಗ್ರೆಸ್‌ನ ಬುನಾದಿ

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಎಂದರೆ ಕಾಂಗ್ರೆಸ್ ಪಕ್ಷವಾಗಿದೆ. ಪರಿಶಿಷ್ಟ ವರ್ಗ ಕಾಂಗ್ರೆಸ್‌ನ ಬುನಾದಿ ಎಂದು ಹೇಳಿದರು.
ಈ ದೇಶದ ಇತಿಹಾಸ ಮಹಾತ್ಮಾ ಗಾಂಧಿಜಿ, ಸುಭಾಷ್ ಚಂದ್ರಬೋಸ್, ಬಾಬು ಜಗಜೀವನ್ ರಾಂ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸ್ಥಾನವನ್ನು ನಮ್ಮ ರಾಜ್ಯದ ಖರ್ಗೆ ಅಲಂಕರಿಸಿದ್ದಾರೆ. 50 ವರ್ಷಗಳ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಕಾರಣಕ್ಕೆ ಅವರ ಹಿರಿತನಕ್ಕೆ ಸಿಕ್ಕ ಗೌರವವಾಗಿದೆ.
ಹಾಗೆಯೇ ರಾಜ್ಯದಲ್ಲಿ 136 ಸ್ಥಾನ ಗಳಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ವರ್ಷದ ಹಿಂದೆ ಮೇಕೆದಾಟು ಹೋರಾಟ, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ, ಈಗ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇಂದು ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೇ ಜನವರಿ16 ರಂದು ಮಹಿಳೆಯರಿಗೆ ಶಕ್ತಿ ತುಂಬುವ ಉದ್ದೇಶದಿಂದ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಪ್ರನಾಳಿಕೆ ಮಾಡಲು ಕಾಂಗ್ರೆಸ್ ಅಲೋಚನೆ ಮಾಡಿದೆ. ಪ್ರತಿ ಪಂಚಾಯತಿಯಿಂದ ಇಬ್ಬರು ಮಹಿಳೆಯರು ಬರಬೇಕು ಎಂದು ಹೇಳಿದರು.

 ನಡ್ಡಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ನಡ್ಡಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದಾ ಅವರು ಚುನಾವಣೆಯಲ್ಲಿ ಸೋತು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ಹೈಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚೆಗಷ್ಟೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿಮಾಚಲ ಪ್ರದೇಶದಲ್ಲಿ ನಡ್ಡಾ ಅವರಿಗೆ ಸೋಲಾಗಿದೆ. ಅಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆರು ಜನರನ್ನು ಮಂತ್ರಿ ಮಾಡಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+