Actor Darshan: ದಿಢೀರ್ ಪೊಲೀಸರಿಗೆ ಶರಣಾದ ದರ್ಶನ್ ಗ್ಯಾಂಗ್‌ನ ಮತ್ತೊಬ್ಬ ಆರೋಪಿ
ಚಿತ್ರದುರ್ಗ, ಜೂನ್, 13: ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ದು ಜೋರಾಗಿದ್ದು, ಪ್ರಕರಣದ 8ನೇ ಆರೋಪಿ ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಪಿ ಕಚೇರಿಗೆ ಬಂದು ಆರೋಪಿ ರವಿ ಪೊಲೀಸರಿಗೆ ಶರಣಾಗಿದ್ದಾನೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. 17 ಜನರ ಪೈಕಿ ಈಗಾಗಲೇ 13 ಆರೋಪಿಗಳು ಪೊಲೀಸರ ವಶದಲ್ಲಿದ್ದು, ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು.

ಕಲೆಮರಸಿಕೊಂಡಿದ್ದ ಎಂಟನೇ ಆರೋಪಿಯಾಗಿರುವ ಚಿತ್ರದುರ್ಗದ ದಂಡಿನ ಕುರಬರಹಟ್ಟಿ ನಿವಾಸಿ ರವಿ ಏಕಾಏಕಿ ಚಿತ್ರದುರ್ಗದ ಕಚೇರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.
ನಟ ದರ್ಶನ್ ವಿರುದ್ಧ ಮತ್ತೊಂದು ಅರೋಪ: ಅಭಿಮಾನಿ ಕೊಲೆ ಕೇಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿರುದ್ಧ ಯಾವುದೇ ಪರಿಹಾರ ಕೊಡದ ಆರೋಪ ಕೇಳಿಬಂದಿದೆ.
ಹತ್ತು ವರ್ಷಗಳ ಹಿಂದಿನ ಕರಾಳ ಕಥೆ ಇದೀಗ ಬಯಲಾಗಿದ್ದು, ಕೊಲೆ ಪ್ರಕರಣ ಬಳಿಕ ದರ್ಶನ್‌ನ ಒಂದೊಂದೆ ಮುಖ ಅನಾವರಣಗೊಳ್ಳುತ್ತಿದೆ.
ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್‌ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರ ಮಹೇಶ್ ಬದುಕು ನರಕಮಯವಾಗಿದ್ದು, ಅಂದು ಪರಿಹಾರ ಕೊಡದೇ ದರ್ಶನ್ ಕ್ರೌರ್ಯ ಮೆರೆದಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ.
ಕೆಲಸ ಮಾಡುವ ವೇಳೆ ಎತ್ತೊಂದು ಕೊಂಬಿನಿಂದ ತಿವಿದಿತ್ತು. ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಎತ್ತಿನ ಕೊಂಬು ಬಂದಿತ್ತು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ನಟ ದರ್ಶನ್ ಕಡೆಯವರು ಬಿಟ್ಟು ಹೋಗಿದ್ದರು. ನಂತರ ಕುಟುಂಬದತ್ತ ನಟ ತಿರುಗಿಯೂ ನೋಡಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಪರಿಹಾರ ಕೇಳಲು ಕಾರ್ಮಿಕನ ಸಂಬಂಧಿಕರು ಫಾರಂ ಹೌಸ್‌ಗೆ ಹೋದ್ರೆ ಸಾಕುನಾಯಿಗಳನ್ನು ಛೂ ಬಿಡಲಾಗಿತ್ತು, ಬಳಿಕ ಮೈಸೂರಿನ ಹೊಟೇಲ್‌ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಿದ್ದರು. ವಿಚಾರ ಹೊರಗಡೆ ಬಾಯಿಬಿಟ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಡಿ ಬಾಸ್ ಅಂಡ್ ಗ್ಯಾಂಗ್ ಹೆದರಿಸಿದ್ದರು ಎಂದು ಮಹೇಶ್ ಕುಟುಂಬ ಆರೋಪಿಸಿದೆ.
ಹತ್ತು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೂಲಿ ಕಾರ್ಮಿಕ ಮಹೇಶ್‌ಗೆ ಸದ್ಯ
ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದ್ದು, ದರ್ಶನ್‌ಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರಲ್ಲಿ ಕಾರ್ಮಿಕ ಮಹೇಶ್ ಕುಟುಂಬವಿದೆ. ಇವರಿಗೆ ದಾನಿಗಳ ನೆರವು ಅಗತ್ಯವಿದೆ.












Click it and Unblock the Notifications