34 ಸಾವಿರ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ : ಎಚ್.ಆಂಜನೇಯ

ಚಿತ್ರದುರ್ಗ, ನವೆಂಬರ್ 27 : ಚುನಾವಣೆ ಹತ್ತಿರವಾಗುತ್ತಾ ಅಭಿವೃದ್ಧಿ ಕಾರ್ಯಗಳು ಜೋರು ಪಡೆದುಕೊಳ್ಳುತ್ತಿದ್ದಹಾಗಿವೆ. ಚಿತ್ರದುರ್ಗ ಜಿಲ್ಲೆಯ 34151 ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅಡುಗೆ ಅನಿಲ ಘಟಕವನ್ನು ವಿತರಿಸವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ಸೋಮವಾರ (ನವೆಂಬರ್ 27)ರಂದು ನಗರದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು 4,040 ರೂಪಾಯಿ ವೆಚ್ಚದಲ್ಲಿ ಗ್ಯಾಸ್ ಸ್ಟೌ, ಎರಡು ಅನಿಲ ತುಂಬಿದ ಸಿಲಿಂಡರ್ ಗಳು, ರೆಗ್ಯಲೇಟರ್, ಪೈಪ್ ಸೇರಿದಂತೆ ಏಳು ವಸ್ತುಗಳನ್ನು ನೀಡಲಾಗುತ್ತದೆ ಎಂದು ವಿವರಿಸಿದರು.

34000 thousand BPL families to get free LPG : H.Anjaneya

ಇದೇ ಸಮಯದಲ್ಲಿ ಕೇಂದ್ರ ಹುಳುಕುಗಳ ಮೇಲೆ ಬೆಳಕು ಚೆಲ್ಲಿದ ಅವರು 'ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ನೀಡುತ್ತಿರುವ ರೂ 1.450 ಹಣ ಸಾಕಾಗುತ್ತಿಲ್ಲ. ಹೀಗಾಗಿ ನಮ್ಮ ಸರ್ಕಾರದ 'ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ' ತುಂಬಾ ಪ್ರಯೋಜನಕಾರಿಯಾಗಿದೆ' ಎಂದರು.

ಜಿಲ್ಲೆಯಲ್ಲಿ ಒಟ್ಟು 107354 ಬಿಪಿಎಲ್ ಕುಟುಂಬಗಳಿವೆ. ಅದರಲ್ಲಿ ಮೊದಲ ಹಂತವಾಗಿ 34151ಮಂದಿಗೆ ವಿತರಿಸಿ, ನಂತರ ಒಂದು ವಾರದಲ್ಲಿ ಇನ್ನೊಂದು ಹಂತದಲ್ಲಿ ಉಳಿದವರಿಗೆ ನೀಡಲಾಗುತ್ತದೆ ಎಂದರು.

34000 thousand BPL families to get free LPG : H.Anjaneya

'ಫಲಾನುಭವಿಗಳನ್ನು ಆಯ್ಕೆ ಮಾಡಿದ ಮೇಲೆ ಸರ್ಕಾರಿ ಅಧಿಕಾರಿಗಳೇ ಅವರನ್ನು ಕರೆಸಿ, ಆನ್ ಲೈನ್ ಮೂಲಕ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ಅವರು ಹೇಳಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+