• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಡ್ಗಿಚ್ಚಿಗೆ ಸುಟ್ಟು ಕರುಕಲಾದ ಚಿಕ್ಕಮಗಳೂರಿನ ನೇತ್ಕಲ್ ಅರಣ್ಯ ಪ್ರದೇಶ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಫೆಬ್ರವರಿ 25:ಒಂದು ಕಡೆ ಬಂಡೀಪುರದಲ್ಲಿ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದ್ದರೆ, ಇತ್ತ ಕಡೆ ಎನ್.ಆರ್ ಪುರ ತಾಲೂಕಿನ ಗುಬ್ಬಿಗಾ ಗ್ರಾ.ಪಂ.ವ್ಯಾಪ್ತಿಯ ನೇತ್ಕಲ್ ಅರಣ್ಯ ಪ್ರದೇಶದಲ್ಲಿ ಸಹ ಕಾಡ್ಗಿಚ್ಚು ಮುಂದುವರೆದಿದ್ದು, ಬೆಲೆ ಬಾಳುವ ಮರಗಳು ಅರಣ್ಯದಲ್ಲಿ ಸಂಪೂರ್ಣ ಸುಟ್ಟು ಕರುಕಲಾಗಿವೆ.

ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ನೋಡ ನೋಡುತ್ತಿದ್ದಂತೆ ಬೆಂಕಿ ನಂದಿಸಲು ಹೋಗಿದ್ದ ಫಾರೆಸ್ಟ್ ಗಾರ್ಡ್ ಬೈಕ್ ಕೂಡ ಭಸ್ಮವಾಗಿದೆ. ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಮಂಜಯ್ಯ ಪಾರಾಗಿದ್ದು, ಮಂಜಯ್ಯಗೆ ಸುಟ್ಟ ಗಾಯಗಳಾಗಿವೆ.

ಬರಡಾದ ಬಂಡೀಪುರ ಅರಣ್ಯ;ಎಲ್ಲೆಲ್ಲೂ ಬೆಂಕಿಯಲ್ಲಿ ಬೆಂದ ಪ್ರಾಣಿಗಳ ದರ್ಶನ

ರಾತ್ರಿಯಿಡೀ ದಟ್ಟ ಹೊಗೆಯೊಂದಿಗೆ ಅರಣ್ಯ ಧಗ ಧಗನೆ ಹೊತ್ತಿ ಉರಿದಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ. ಸದ್ಯ ನೂರಾರು ಏಕರೆ ಅರಣ್ಯ ಸುಟ್ಟುಹೋಗಿರುವ ಮಾಹಿತಿ ತಿಳಿದು ಬಂದಿದ್ದು, ಇಂದು ಬೆಳಗ್ಗೆ ಬೆಂಕಿ ಹತೋಟಿಗೆ ಬಂದಿದೆ ಎನ್ನಲಾಗಿದೆ.

English summary
Wildfire continues in forest of Natkal in Chikkamagaluru.Valuable trees are full burned in the forest. In a while forest guard Manjayya escaped from fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X