ಮಳೆಯಲ್ಲಿ ಶಾರದಾಂಬೆ ಸ್ನಾನಘಟ್ಟ, ಸಂಧ್ಯಾವಂದನಾ ಮಂಟಪವೂ ಮುಳುಗಡೆ?
ಚಿಕ್ಕಮಗಳೂು, ಆಗಸ್ಟ್ 6: ಶೃಂಗೇರಿ ಸೇರಿದಂತೆ ಮಲೆನಾಡಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತುಂಗಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ.
ತುಂಗಾ ನದಿಯ ಪ್ರವಾಹದಿಂದಾಗಿ ಶೃಂಗೇರಿ ಶಾರದಾಂಬೆ ದೇವಸ್ಥಾನದ ಸ್ನಾನ ಘಟ್ಟ, ಕಪ್ಪೆ ಶಂಕರ ದೇವಸ್ಥಾನ, ಸಂಧ್ಯಾ ವಂದನಾ ಮಂಟಪ ಮುಳುಗಡೆಯಾಗಿದೆ.

ಮಲೆನಾಡಿನಲ್ಲಿ ಅಬ್ಬರದ ಮಳೆ ಮುಂದುವರಿದಿದ್ದು, ಇದೀಗ ಹೆಬ್ಬಾಳ ಸೇತುವೆ ಮತ್ತೆ ಜಲಾವೃತವಾಗುತ್ತಿದೆ. ಭದ್ರಾ ನದಿ ನೀರು ಸೇತುವೆ ಮೇಲೆ ರಭಸವಾಗಿ ಹರಿಯಲು ಆರಂಭಿಸಿದೆ.

ಚಿಕ್ಕಮಗಳೂರಿನ ಕೊಪ್ಪದಲ್ಲೂ ಭಾರೀ ಮಳೆ ಮುಂದುವರಿದಿದೆ. ಇದರಿಂದ ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದ್ದು, ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ನಡೆಯಿತು. ಮಳೆ ನಡುವೆಯೂ ಸಿಬ್ಬಂದಿ ಮರ ತೆರವು, ಲೈನ್ ರಿಪೇರಿ ಮಾಡುತ್ತಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಬಳಿ ರಸ್ತೆ ಕುಸಿತವಾಗಿದ್ದು, ಕೊಪ್ಪ, ಶೃಂಗೇರಿ ಸಂಪರ್ಕ ರಸ್ತೆ ಕಡಿತಗೊಂಡಿದೆ.

ಹಾಗೆಯೇ, ಎನ್.ಆರ್.ಪುರ ತಾಲೂಕಿನ ಕನಗೇರಿಯ ಗ್ರಾಮದಲ್ಲಿ ಎಲ್ಡೊ ಎಂಬುವರ ಮನೆ ಮೇಲೂ ಮರ ಬಿದ್ದ ವರದಿಯಾಗಿದೆ.












Click it and Unblock the Notifications