ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
ಚಿಕ್ಕಮಗಳೂರು, ಡಿಸೆಂಬರ್ 7: ಜಿಲ್ಲೆಯ ಗ್ರಾಮದೇವತೆಯ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ ಗಳನ್ನು ಹಾಕಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಿನ್ನೆ ಅರೆಕಲ್ಲಮ್ಮನ ಜಾತ್ರೆ ನಡೆದಿತ್ತು. ತಮ್ಮ ಸ್ವಗ್ರಾಮದಲ್ಲಿ ನಡೆದ ಈ ದೇವಿ ಜಾತ್ರೆಯಲ್ಲಿ ವೈ ಎಸ್ ವಿ ದತ್ತ ನೃತ್ಯ ಮಾಡಿದ್ದಾರೆ.

ಸರಳ, ಸಜ್ಜನಿಕೆ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ರಾಜಕಾರಣಿ ದತ್ತ ಅವರು ಗ್ರಾಮಸ್ಥರೊಂದಿಗೆ ಸೇರಿ ತಮಟೆ ವಾದ್ಯಕ್ಕೆ ಹೆಜ್ಜೆ ಹಾಕಿದ್ದರಿಂದ ಗ್ರಾಮಸ್ಥರೂ ಫುಲ್ ಖುಷ್ ಆಗಿದ್ದರು. ಈ ಹಳ್ಳಿ ಮೇಷ್ಟ್ರರೊಂದಿಗೆ ಗ್ರಾಮಸ್ಥರೂ ಸೇರಿ ನೃತ್ಯಕ್ಕೆ ಹೆಜ್ಜೆ ಹಾಕಿದರು.












Click it and Unblock the Notifications