ನೀವು ಶೃಂಗೇರಿಗೆ ಹೊರಟಿದ್ದೀರಾ? ನಿಮ್ಮ ಬ್ಯಾಗ್ ಒಮ್ಮೆ ಚೆಕ್ ಮಾಡಿಕೊಳ್ಳಿ? ಏಕಂದ್ರೆ....
ರಾಜ್ಯದ ಹಲವು ದೇವಾಯಲಗಳಲ್ಲಿ ಈಗಾಗಲೇ ವಸ್ತ್ರ ಸಂಹಿತಿಯನ್ನು ಅಳವಡಿಸಿಲಾಗಿದೆ. ಈ ಪಟ್ಟಿಗೆ ಸದ್ದಿಲ್ಲದೆ ಶೃಂಗೇರಿ ಶಾರದಾ ಪೀಠ ಸಹ ಸೇರಲಿದೆ. ಇನ್ನು ಮುಂದೆ ನೀವು ಏನಾದ್ರೂ ಶಾರದಾಂಬೆಯ ದರ್ಶನಕ್ಕೆ ಹೋಗುವುದಾದರೆ, ದೇವಸ್ಥಾನ ಮಂಡಳಿ ಸೂಚಿಸಿರುವ ಡ್ರೆಸ್‌ಗಳನ್ನು ತೆಗೆದುಕೊಂಡ ಹೋಗ ಬೇಕು ಇಲ್ಲಾ ಅಂದರೆ ನಿಮಗೆ ಒಳಗೂ ಬಿಡುವುದಿಲ್ಲ.
ಒಂದು ವೇಳೆ ನೀವು ಶಾರಾದಾಂಬೆಯ ದರ್ಶನಕ್ಕೆ ಎಂದು ಲಘು ಬಗೆಯಿಂದ ಹೊರಟ್ಟಿದ್ದರೆ, ದಯವಿಟ್ಟು ಒಂದು ಕ್ಷಣ ನಿಲ್ಲಿ. ಒಂದು ಬಾರಿ ನಿಮ್ಮ ಬ್ಯಾಗ್‌ಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿರುವ ಡ್ರೆಸ್‌ಗಳು ಇವೆಯಾ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲಾ ಅಂದ್ರೆ ದೇವರ ದರ್ಶನ ಇನ್ನು ಕಷ್ಟ. ಏಕಂದರೆ ಶೃಂಗೇರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತಿ ಜಾರಿ ಆಗಿದೆ.

ಇದೇ ಆಗಸ್ಟ್ 15 ರಿಂದ ಜಾರಿಗೆ ಬರುವಂತೆ ಶೃಂಗೇರಿ ಆಡಳಿತ ಮಂಡಳಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಗೆಯನ್ನು ತೊಟ್ಟು ಬಂದವರಿಗೆ ದೇವಸ್ಥಾನದಲ್ಲಿ ಎಂಟ್ರಿ ನೀಡಲಾಗುತ್ತದೆ. ದೇವಸ್ಥಾನಕ್ಕೆ ಹೋಗುವ ಪುರುಷ ಭಕ್ತರು ಇನ್ನು ಮುಂದೆ ಧೋತಿ ಅಥವಾ ಶಲ್ಯ, ಲುಂಗಿ ಅಥವಾ ಉತ್ತರಾಣಿಯನ್ನು ಧರಿಸಿರ ಬೇಕು.
ಮಹಿಳೆಯರು ಸೀರೆ-ರವಿಕೆ, ಸಲ್ದಾರ್ ಜೊತೆಗೆ ದುಪಟ್ಟಾ, ಲಂಗಾ ದಾವಣಿ ತೊಟ್ಟು ಬರುವುದು ಕಡ್ಡಾಯವಾಗಿದೆ ಎಂದು ಶೃಂಗೇರುಯ ಶಾರದಾ ಪೀಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ಅರ್ಧಮಂಟಪರ ಒಳಗೆ ಪ್ರವೇಶವಿರುವುದಿಲ್ಲ. ಹೋರಗಿನ ಪ್ರಾಕಾರದಿಂದಲೇ ದೇವರ ದರ್ಶನ್‌ವನ್ನು ಪಡೆಯಬೇಕಾಗುತ್ತದೆ ಎಂದು ಮಂಡಳಿ ತಿಳಿಸಿದೆ.

ಬೆಂಗಳೂರಿನಲ್ಲಿ ಜಾರಿ
ಇದಕ್ಕೂ ಮುನ್ನ ಬೆಂಗಳೂರಿನ ಹಲವು ದೇವಾಲಯಗಳಲ್ಲಿ ಈ ವರ್ಷ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿರುವುದು ವಿಶೇಷವಾಗಿದೆ. ಇನ್ನು ದೇವಸ್ಥಾನದಲ್ಲಿ ವಸ್ತ್ರ ಸಂಹಿತಿ ತರಬೇಕು ಎಂದು ಇದೇ ವರ್ಷ ಜನವರಿಯಲ್ಲಿ ಒಂದು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯದ ಎಲ್ಲ ಅರ್ಚಕರು, ಟ್ರಸ್ಟಿಗಳು ಈ ನಿಯಮ ಜಾರಿಗೆ ತರಲು ಒತ್ತಾಯಿಸಿದ್ದರು. ದಕ್ಷಿಣ ಕನ್ನಡ ಹಾಗೂ ಉಡುಪಿಯ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗೆ ಹೋಗುವಂತಿಲ್ಲ. ಈಗಾಗಲೇ ಈ ಭಾಗದಲ್ಲಿ ಈ ವಸ್ತ್ರ ಸಂಹಿತಿ ಜಾರಿಯಲ್ಲಿದೆ.












Click it and Unblock the Notifications