ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಂಸದರ ಮನೆಯಲ್ಲಿ ಲೋಡುಗಟ್ಟಲೆ ಪೈಪು! ರೈತರಿಗೆ ಸೇರಬೇಕಿದ್ದ ಪೈಪುಗಳಲ್ಲೂ ಅಕ್ರಮ?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 7: ವಿವಿಧ ಕಾಮಗಾರಿಗಳ ಸಲುವಾಗಿ ಸರ್ಕಾರದ ವತಿಯಿಂದ ತರಿಸಿದ್ದ ಪಿವಿಸಿ ಪೈಪುಗಳನ್ನೇ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡ ಆರೋಪ ಮಾಜಿ ಸಂಸದರೊಬ್ಬರ ಮೇಲೆ ಕೇಳಿಬಂದಿದೆ.

ಚಿಕ್ಕಮಗಳೂರಿನಲ್ಲಿ ರೈತರಿಗೆ ಸಂಬಂಧಿಸಿದಂತೆ ನಿರ್ಮಾಣ ಕಾಮಗಾರಿಗೆ ಪೈಪುಗಳನ್ನು ತರಿಸಿ ಅದನ್ನು ಕಾಮಗಾರಿಗೆ ಬಳಸದೇ ಸಂಗ್ರಹಿಸಿಟ್ಟುಕೊಂಡಿದ್ದು, ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

 ಯಾರು ಈ ಸಂಸದ?

ಯಾರು ಈ ಸಂಸದ?

ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ಅವರೇ ಈ ಆರೋಪಕ್ಕೆ ಒಳಗಾಗಿರುವ ವ್ಯಕ್ತಿ. ವಿವಿಧ ಕಾಮಗಾರಿಗಳ ಸಲುವಾಗಿ ಸರ್ಕಾರದ ವತಿಯಿಂದ ತರಿಸಿದ್ದ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಆರೋಪವನ್ನು ಎಂ.ಸೀತಾರಾಮು ಎಂಬುವವರು ಮಾಡಿದ್ದಾರೆ. ಈ ದೂರಿನನ್ವಯ ಲಕ್ಕವಳ್ಳಿ ಪೊಲೀಸರು ಚಂದ್ರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹುರಳಿಬಾರೆ ಗ್ರಾಮದಲ್ಲಿನ ಅವರ ತೋಟದ ಮನೆಯನ್ನೂ ಪರಿಶೀಲಿಸಿದ್ದಾರೆ.

'ಹೋಂ ಸ್ಟೇ'; ಕೊಡಗಿಗೆ ಕಪ್ಪುಚುಕ್ಕೆಯಾಗುತ್ತಿವೆಯೇ ಈ ಆತಿಥ್ಯದ ಮನೆಗಳು?'ಹೋಂ ಸ್ಟೇ'; ಕೊಡಗಿಗೆ ಕಪ್ಪುಚುಕ್ಕೆಯಾಗುತ್ತಿವೆಯೇ ಈ ಆತಿಥ್ಯದ ಮನೆಗಳು?

 ಬೀಗ ಹಾಕಿಟ್ಟುಕೊಂಡ ಕುಟುಂಬಸ್ಥರು

ಬೀಗ ಹಾಕಿಟ್ಟುಕೊಂಡ ಕುಟುಂಬಸ್ಥರು

ಚಂದ್ರಪ್ಪ ಅವರು ಗೋಪಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮ ತವರು ಗ್ರಾಮದ ಮನೆಯಲ್ಲಿ ಲೋಡುಗಟ್ಟಲೆ ಪಿ.ವಿ.ಸಿ ಪೈಪ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ತರೀಕೆರೆಯ ಹುರುಳಿಬಾರೆ ಎಂಬಲ್ಲಿ ಅವರ ಮನೆ, ಅವರ ಅಣ್ಣನ ಮನೆ, ಅದೇ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲೂ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬೀಗ ಹಾಕಿ ಚಂದ್ರಪ್ಪ ಕುಟುಂಬಸ್ಥರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

 ಎಂಪಿ ಆಗಿದ್ದ ಸಂದರ್ಭದಲ್ಲಿ ನಡೆದ ಅಕ್ರಮ?

ಎಂಪಿ ಆಗಿದ್ದ ಸಂದರ್ಭದಲ್ಲಿ ನಡೆದ ಅಕ್ರಮ?

ಚಂದ್ರಪ್ಪ ಅವರು ಸಂಸದರಾಗಿದ್ದ ಸಂದರ್ಭ, ಅಂದರೆ ಎರಡು ಮೂರು ವರ್ಷಗಳ ಹಿಂದೆ ಈ ಪೈಪ್ ಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಂಪಿ ಆಗಿದ್ದ ಸಂದರ್ಭದಲ್ಲಿ ಇವುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಈ ಪೈಪುಗಳು ಯಾರಿಗೆ ಸೇರಿದ್ದು, ಯಾವ ಇಲಾಖೆಯಿಂದ ತರಲಾಗಿದೆ ಎಂಬುದರ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಲಾಗಿದೆ.

ಪೆಹ್ಲು ಖಾನ್ ಮತ್ತು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪ ರದ್ದುಪೆಹ್ಲು ಖಾನ್ ಮತ್ತು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪ ರದ್ದು

 ಸಮುದಾಯ ಭವನದಲ್ಲಿಡಲು ಅನುಮತಿ ಕೊಟ್ಟವರಾರು?

ಸಮುದಾಯ ಭವನದಲ್ಲಿಡಲು ಅನುಮತಿ ಕೊಟ್ಟವರಾರು?

ಸಮುದಾಯ ಭವನದಲ್ಲಿ ಲೋಡುಗಟ್ಟಲೆ ಪಿವಿಸಿ ಪೈಪುಗಳನ್ನು ಸಂಗ್ರಹಿಸಿರುವುದರಿಂದ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸಲೂ ಅಡ್ಡಿಯಾಗುತ್ತಿದ್ದು, ಇವುಗಳನ್ನು ಇಲ್ಲಿ ಸಂಗ್ರಹಿಸಲು ಅನುಮತಿ ಯಾರು ನೀಡಿದ್ದಾರೆ ಎಂದೂ ಪ್ರಶ್ನಿಸಲಾಗಿದೆ.

English summary
A former MP has been accused of illegally collecting PVC pipes which were granted from government for various works in chikkamgaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X