ಚಿಕ್ಕಬಳ್ಳಾಪುರದಲ್ಲಿ ಸೇವಂತಿಗೆ ಸುಗ್ಗಿ: ದಸರಾ ಹಬ್ಬದ ಲಾಭದ ನಿರೀಕ್ಷೆಯಲ್ಲಿ ಹೂವು ಬೆಳೆಗಾರರು
ಚಿಕ್ಕಬಳ್ಳಾಪುರ, ಅಕ್ಟೋಬರ್ 20: ಮಳೆ ಅಭಾವದ ನಡುವೆ ಹೂವಿನ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗಿದ್ದವು. ಆದರೂ ರೈತರು ಕಷ್ಟಪಟ್ಟು ಬೆಳೆಯನ್ನು ಕಾಪಾಡಿಕೊಂಡಿದ್ದರು. ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳ ಕಾರಣ ಹೂವಿಗೆ ಬೆಲೆ ಬಂದು ಅಷ್ಟೋ ಇಷ್ಟೋ ಆದಾಯ ಸಿಕ್ಕಿತ್ತು.
ಪಿತೃಪಕ್ಷ ಆರಂಭವಾದಾಗಿನಿಂದ ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋದ ಹೂವನ್ನು ಅಲ್ಲೇ ಬಿಟ್ಟು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು . ಟನ್‌ಗಟ್ಟಲೇ ಹೂವನ್ನು ಮಾರುಕಟ್ಟೆಯ ನೆಲದ ಮೇಲೆ ಸುರಿಯುವಂತಾಗಿದ್ದ ರೈತರು ದಸರಾ ಹಬ್ಬಕ್ಕೆ ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಹೂವಿನ ಬೆಲೆ ತೀರಾ ಕಡಿಮೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಕಡೆ ಹಲವಾರು ರೈತರು ವಿವಿಧ ಹೂವಿನ ತೋಟಗಳನ್ನು ಮಾಡಿ, ತಮ್ಮ ತಮ್ಮ ತೋಟಗಳಲ್ಲಿನ ಹೂಗಳನ್ನು ಮಾರುಕಟ್ಟೆಗೆ ಹಾಕಿ ಹಣವನ್ನು ಪಡೆಯುದೆ ದೊಡ್ಡ ಸಾಹಸವಾಗಿತ್ತು. ಆದರೆ ಇದೀಗ ಇನ್ನೇನು ಸಮೀಪದಲ್ಲಿ ದಸರಾ ಇರುವುದರಿಂದ ಹೂವಿನ ಬೆಲೆ ಕೊಂಚ ಬದಲಾಗಿದೆ ಹಾಗಾಗಿ ಎಲ್ಲ ರೈತರು ಹೂವಿನ ತೋಟಗಳ ಕಡೆ ಹೆಚ್ಚು ಒಲವನ್ನು ತೊರಿ ಹೂವಿನ ಇಳುವರಿ ಹೆಚ್ಚಿಸುವಲ್ಲಿ ತೋಟಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ.
ಲಾಭದ ನಿರೀಕ್ಷೆಯಲ್ಲಿ ಹೂವಿನ ರೈತ
ಇತ್ತೀಚಿನ ಕಳೆದ ದಿನಗಳಲ್ಲಿ ಹೂವಿನ ಬೆಲೆಗಳು ಸಹ ತೀರಾ ಅದ್ವಾನವಾಗಿತ್ತು. ಆದರೆ ಮುಂದಿನ ವಾರದಲ್ಲಿ ದಸರಾ ಹಬ್ಬ ಇರುವುದರಿಂದ ಮಾರುಕಟ್ಟೆಯಲ್ಲಿ ಹೂಗಳ ಬೇಡಿಕೆ ಹೆಚ್ಚಾಗಿ ಲಾಭದ ನಡಿಗೆ ತೆರಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಗಿಡಗಳಲ್ಲೇ ಅರಳಿ ನಿಂತ ಸೇವಂತಿಗೆಯಿಂದ ಜಿಲ್ಲೆಯಲ್ಲಿ ಈಗ ಸೇವಂತಿಗೆ ಹೂವಿನ ಸುಗ್ಗಿ ಆರಂಭವಾಗಿದೆ.

ಜಿಲ್ಲೆಯ ಬಹುತೇಕ ಕಡೆ ಹೇರಳವಾಗಿ ಸೇವಂತಿಯನ್ನು ಬೆಳೆದಿದ್ದಾರೆ. ಎಕರೆಗಟ್ಟಲೇ ಪ್ರದೇಶದಲ್ಲಿ ಸೇವಂತಿಗೆ ಹೂ ಅರಳಿ ನಿಂತಿದೆ. ಆದರೆ ಸೂಕ್ತ ಬೆಳೆ ಸಿಗದ ಕಾರಣ ಗಿಡಗಳಲ್ಲೇ ಹೂಗಳು ಅರಳಿ ಮಣ್ಣುಪಾಲಾಗುತ್ತಿವೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದಿದ್ದ ಬೆಳೆಗಳಿಂದ ಬಂಡವಾಳ ಕೂಡಾ ವಾಪಸ್ ಆಗದ ಪರಿಸ್ಥಿತಿ ಎದುರಾಗಿದೆ.
ಗಿಡಗಳನ್ನು ಉಳಿಸಿಕೊಳ್ಳು ಸಾಹಸ
ಕೆಳೆದ ದಿನಗಳಲ್ಲಿ ಸುರಿದ ಮಳೆಯಿಂದಾಗಿ ಕೆಲವು ಹೂವಿನ ಗಿಡಗಳು ಭೂಮಿಗೆ ಉದರಿವೆ, ಇನ್ನು ಕೆಲವು ಹೂವಿನ ಸಸಿಗಳು ಬಿರುಗಾಳಿಗೆ ಭಾಗಿ ಅಲ್ಪ ಸ್ವಲ್ಪ ಹಾಳಾಗಿದೆ. ಆದ್ದರಿಂದ ಮಾರುಕಟ್ಟೆಗೆ ಹೂಗಳು ಸಹ ಕಡಿಮೆ ಆಗುತ್ತಾರೆ. ಇದೇ ಸಮಯದಲ್ಲಿ ದಸಾರವು ಸಮೀಪದಲ್ಲಿರುವುದರಿಂದ ಹೂವಿನ ಬೇಡಿಕೆ ಹೆಚ್ಚಿರುವುದರಿಂದ ಇರುವ ಸಸಿಗಳನ್ನು ಉಳಿಸಿಕೊಳ್ಳಲು ರೈತರು ಮುಂದಾಗಿದ್ದಾರೆ.

ಯಾವುದಕ್ಕೆ ಬೇಡಿಕೆ ಹೆಚ್ಚು
ಸಾಮಾನ್ಯ ಜನರು ಸಹ ಎಲ್ಲವನ್ನು ಸಹ ಹೆಚ್ಚು ಖರೀದಿಸದೆ, ಕನಕಾಂಬರ, ಮಲ್ಲಿಗೆ, ಕಾಕಡ ಹಾಗೂ ಪೂಜೆಗೆ ಚಾಮಂತಿ, ರೋಜ್ , ಸೇರಿದಂತೆ ಕೆಲವು ಹೂಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಸುತ್ತಾರೆ.
ಈಗ ಪಿತೃ ಪಕ್ಷ ಆಗಿರುವುದರಿಂದ ರಬ್ಬರ್ ವೈಟ್ 1 ಕೆಜಿ 50 ರೂ, ಕನಕಾಂಬರ ಕೆಜಿ 500 ರೂ, ರಬ್ಬರ್ ಯಲ್ಲೋ ಕೆಜಿ 45 ರೂ, ಸೇವಂತಿಗೆ 50 ರಿಂದ 110 ರೂ, ಗುಲಾಬಿ 20 ರಿಂದ 30 , ಚೆಂಡು 10 ರಿಂದ 15 ಗಳಿಗೆ ಪ್ರಸ್ತುತ ವೇಳೆ ಮಾರಾಟವಾತ್ತಿದೆೆ.
ಅಂದಾಜು ದಸರಾ ದರಗಳು
ವೈಟ್ ರಬ್ಬರ್ 70 ರಿಂದ 100 ರೂ ಗಳಿಗೆ, ಕನಕಾಂಬರ 800 ರಿಂದ 1200 ರ ವರೆಗೆ, ರಬ್ಬರ್ ಯಲ್ಲೋ 90 ರಿಂದ 120 ರೂ ವರೆಗೆ, ಸೇವಂತಿಗೆ 140 ರಿಂದ 200 ರೂ ವರೆಗೆ, ಗುಲಾಬಿ 250 ರಿಂದ 300 ರೂ ವರೆಗೆ ಮಾರಾಟವಾಗುತ್ತದೆ ಎಂದು ರೈತರು ಹೇಳುತ್ತಾರೆ.

'ಒಂದು ಎಕರೆ ರಬ್ಬರ್ ವೈಟ್ ಹೂವಿನ ತೋಟ ಮತ್ತು ಒಂದು ಎಕರೆ ರಬ್ಬರ್ ಯಲ್ಲೋ ಹೂವಿನ ತೋಟ ಹಾಕಿದ್ದೇವೆ, ಹೂಗಳು ಗಿಡಗಳ ತುಂಬಾ ಮೈತುಂಬಿಗೊಂಡಿದೆ ಕಳೆದ ದಿನಗಳಲ್ಲಿ ಮಳೆ ಬಂದಿದ್ದರಿಂದ ಅಲ್ಪ ಸ್ವಲ್ಪ ಹಾಳಾಗಿದೆ ಆದರೂ ಪರವಾಗಿಲ್ಲ, ಈಗ ಬರುವ ದಸರಾಗೆ ಬೆಲೆ ಏರಿಕೆ ಆಗುವುದರಿಂದ ಲಾಭ ಗಳಿಸಬಹುದು' ಎಂದು ಹೂವಿನ ಬೆಳೆಗಾರ ನಾಗರಾಜು ಉಪ್ಪಗುಟ್ಟಹಳ್ಳಿ ಹೇಳಿದ್ದಾರೆ.
'ನಾವು 2 ಎಕರೆಗೆ ಸೇವಂತಿಗೆ ಹೂವಿನ ಗಿಡಗಳನ್ನು ಹಾಕಿದ್ದೇವೆ, ಕೆಲವು ಹಬ್ಬಗಳು ಬಂದಾಗ ಹೂವಿನ ದರಗಳು ಹೆಚ್ಚಾಗಿ ನಮ್ಮ ರೈತ ಬಾಂಧವರಿಗೆ ಲಾಭಗಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಈ ಬಾರಿಯೂ ಸಹ ಸಮುಪದಲ್ಲಿ ದಸರಾ ಹಬ್ಬ ಇರುವುದರಿಂದ ಸಾಕಷ್ಟು ಜನರು ಹೂಗಳನ್ನು ಹೆಚ್ಚಿನ ರೀತಿಯಲ್ಲಿ ಖರೀದಿಸುತ್ತಾರೆ. ಹಾಗಾಗಿ ಬೇಡಿಕೆ ಹೆಚ್ಚಾಗಿ ಹೂವಿನ ಬೆಳೆಗಾರರು ಲಾಭ ಪಡೆಯಬಹುದು' ಎಂದು ಬೊಮ್ಮಗಾನಹಳ್ಳಿಯ ಹೂವಿನ ಬೆಳೆಗಾರ ರಾಜಶೇಖರ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಎಪಿಎಂಸಿ ಹೂವಿನ ಮಂಡಿ ಮಾಲೀಕ ಮಂಜುನಾಥ್ ಮಾತನಾಡಿದ್ದು, ಕಳೆದ ತಿಂಗಳಿಂದ ಹೂವಿನ ಬೆಲೆಗಳು ಬಹಳ ಕಡಿಮೆಯಾಗಿ ರೈತರಿಗೆ ತುಂಬಾ ಕಷ್ಟವಾಗಿತ್ತು. ಬೆಲೆ ಕಡಿಮೆಯಾದ ಕಾರಣದಿಂದ ಕೆಲ ರೈತರು ಹೂವಿನ ತೋಟಗಳಲ್ಲಿ ರೋಟರಿ ಹಾಕಿದ್ದಾರೆ. ಆದರೆ ಕೆಲ ರೈತರು ಹಾಗೂ ತಡವಾಗಿ ಹೂ ಬಿಡುತ್ತಿರುವ ರೈತರ ತೋಟಗಳು ಮಾತ್ರ ಇವೆ. ಹಾಗಾಗಿ ಇಗ ದಸರಾ ಆರಂಭವಾಗಿದೆ. ಹಾಗಾಗಿ ಹೂವಿನ ಬೆಲೆ ಖಂಡಿತವಾಗಿ ಏರಿಕೆಯಾಗುತ್ತದೆ ಆಗ ರೈತರಿಗೆ ಅನುಕೂವಾಗುತ್ತದೆ' ಎಂದು ಹೇಳಿದರು.












Click it and Unblock the Notifications