ಗಣಪನಿಗೆ ಷರತ್ತಿನೊಂದಿಗೆ ದುಬಾರಿ ಶುಲ್ಕದ ಬರೆ- ಗಣೇಶನಿಡಲು ಸಾವಿರಾರು ರೂ. ಶುಲ್ಕ!
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 4: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆಗೆ ಸರಕಾರ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜೇಡಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ.
ಈ ಬಾರಿ ಆದ್ದೂರಿ ಗಣೇಶೋತ್ಸವಕ್ಕೆ ಇಡೀ ಜಿಲ್ಲೆ ಸಜ್ಜಾಗಿದೆ, ಎಲ್ಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಆದರೆ ಸಾರ್ವಜನಿಕವಾಗಿ ಗಣೇಶ ನನ್ನು ಕೂರಿಸಲು ಹಾಕಿರುವ ಷರತ್ತುಗಳು, ನಾನಾ ಅನುಮತಿ ಹಾಗೂ ದುಬಾರಿ ಶುಲ್ಕ ನೋಡಿ ಸಾಕಪ್ಪ ಸಾಕು ಗಣೇಶನ ಮಹೋತ್ಸವ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಯುವ ಸಂಘಟನೆಗಳು ಹೆಚ್ಚಾಗಿ ಗಣೇಶನ ಉತ್ಸವಕ್ಕೆ ವಕ್ಕೆ ಎಲ್ಲ ತಯಾರಿ ನಡೆಸಿವೆ. ಆದರೆ ಅಧಿಕೃತವಾಗಿ ಗಣೇಶನನ್ನು ಕೂರಿಸಬೇ ಕಾದರೆ ವಿಧಿಸಿರುವ ನಿಯಮಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಅನುಮತಿ ಪಡೆಯಲು ಒಬ್ಬ ವ್ಯಕ್ತಿಯನ್ನು ಮೀಸಲಿಟ್ಟರೂ ಸಾಧ್ಯವಾಗುತ್ತಿಲ್ಲ. ಡಿಜೆಗೂ ಷರತ್ತು, ಅವಧಿಗೂ ಷರತ್ತು, ಮೆರವಣಿಗೆಗೆ ನಾನಾ ಷರತ್ತುಗಳನ್ನು ವಿಧಿಸಲಾಗಿದೆ.
ಸಂಘಟಕರು ಸುಸ್ತು:
ಜಿಲ್ಲೆಯಲ್ಲಿ ನಗರದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಏಕಗವಾಕ್ಷಿ ಯಲ್ಲಿ ಅನುಮತಿ ನೀಡಲು ವ್ಯವಸ್ಥೆ ಮಾಡಲಾ ಗಿದೆ. ಬೆಸ್ಕಾಂ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ ಹೀಗೆ ಹಲವು ಇಲಾಖೆಗಳನ್ನು ಸುತ್ತಿ ಅನುಮತಿ ಪಡೆಯುವ ಬದಲು ಒಂದೇ ಕಡೆ ಪಡೆಯಲು ಇದು ಅನುಕೂಲ. ಅರ್ಜಿ ಸಲ್ಲಿಸಿದರೆ ಅದಕ್ಕೆ ನೂರೆಂಟು ಷರತ್ತು ವಿಧಿಸುತ್ತಿದ್ದು ಸಂಘಟಕರು ಸುಸ್ತು ಹೊಡೆಯುತ್ತಿದ್ದಾರೆ.

ದುಬಾರಿ ಶುಲ್ಕದ ಹೊರೆ:
ಸಾರ್ವಜನಿಕವಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲು ನಗರಸಭೆ, ಪೋಲಿಸ್ ಹಾಗೂ ಬೆಸ್ಕಾಂ ಇಲಾಖೆಯಿಂದ ಅನು ಮತಿ ಪಡೆಯುವುದು ಕಡ್ಡಾಯ, ಅನುಮತಿ ಗೆಂದು ಹೋದರೆ ಇವರು ವಿಧಿಸುವ ಶುಲ್ಕಗಳು ಗಣಪತಿ ಮಂಡಳಿಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿವೆ. ಮೊದಲು ನಗರಸಭೆ ಕಾರ್ಯಾಲಯದಿಂದ ಅನುಮತಿಗಾಗಿ ದಿನಕ್ಕೆ 200 ರೂ.ನಂತೆ ಶುಲ್ಕ ಪಾವತಿಸಬೇಕು. ಆದರೆ ಸಾರ್ವಜನಿಕವಾಗಿ ಕೂರಿಸುವ ಕಾರ್ಯಕ್ರಮಕ್ಕೂ ಈ ಶುಲ್ಕವೇಕೆ ಎನ್ನುವುದೇ ಪ್ರಶ್ನೆ.
ಕೈಬದಲೆಷ್ಟು?
ಇನ್ನೊಂದೆಡೆ ಗಣೇಶನನ್ನು ಕೊರಿಸುವಷ್ಟು ದಿನ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ದಿನಕ್ಕೆ 375 ರೂ. ಕಟ್ಟಬೇಕು. ಇದು ಅಧಿಕೃತ ಲೆಕ್ಕದ ಬಾಬು. ಇದನ್ನು ಬಿಟ್ಟು ಇನ್ನಷ್ಟು ಶುಲ್ಕ, ದುಡ್ಡು ಕೈ ಬದಲಾಗುವುದು ಗುಟ್ಟಾಗೇನೂ ಉಳಿದಿಲ್ಲ. ಹೀಗಾಗಿ ಸಾವಿರಾರು ರೂ. ಶುಲ್ಕಗಳನ್ನು ಕಟ್ಟಿ ಸಣ್ಣಪುಟ್ಟ ಗಣೇಶೋತ್ಸವ ಮಂಡಳಿಗಳು ಗಣಪತಿ ಪ್ರತಿಷ್ಠಾಪಿಸಲು ಸಾಧ್ಯವೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜಟಿಲ ನಿಯಮ:
ಹಲವು ಗಣಪತಿ ಮಂಡಳಿ ಗಳು ಚಂದಾ ಹಣ ಸಂಗ್ರಹಿಸಿ ಗಣೇಶನನ್ನು ಕೂರಿಸುವುದು ಪರಿಪಾಠ. ಇಂತಹ ವ್ಯವಸ್ಥೆ ಯಲ್ಲಿ ಸಾವಿರಾರು ರೂ. ಶುಲ್ಕ ಕಟ್ಟಿಸಿಕೊಳ್ಳು ವುದು ಈಗ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಆತಿ ಜಟಿಲ ಷರತ್ತುಗಳನ್ನು ವಿಧಿ ಸಲಾಗಿದೆ. ಹೀಗಾಗಿ ಸಾಕಷ್ಟು ಗಣೇಶನ ಮಂಡಳಿಗಳು ಹಿಂದು ಮುಂದು ನೋಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಐದು ದಿನಕ್ಕಷ್ಟೇ ಅನುಮತಿ:
ಹಿಂದೆಲ್ಲ ಹತ್ತಾರು ದಿನಗಳ ಕಾಲ ಗಣೇಶನನ್ನು ಕೂರಿಸಿ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ ಈಗ ಗಣೇಶನನ್ನು ಕೂರಿಸಲು 5 ದಿನ ಮಾತ್ರ ಅನುಮತಿ ನೀಡಲಾಗುತ್ತಿದೆ. ಒಗ್ಗಟ್ಟು ಮೂಡಿ ಸಲು ಗಣೇಶನ ಹಬ್ಬ ಹೇಳಿ ಮಾಡಿಸಿದಂತಹ ಹಬ್ಬ, ಯುವಕರೆಲ್ಲ ಒಂದೆಡೆ ಸೇರಿ ಹಬ್ಬದ ನೆಪದಲ್ಲಿ ಸಂಭ್ರಮಿಸುವುದು ವಾಡಿಕೆ. ಹೀಗೆ ಸಂಬಂಧಗಳು ಗಟ್ಟಿಯಾಗಲಿ ಎಂಬುದು ಹಬ್ಬದ ಉದ್ದೇಶ. ಈಗಲೂ ಇದೇ ಉದ್ದೇಶ ದಲ್ಲೇ ಬಹುಪಾಲು ನಡೆದುಕೊಂಡು ಬಂದಿದೆ.
4 ಸೌಂಡ್ ಬಾಕ್ಸ್ ಅಷ್ಟೇ:
ಇನ್ನು ಗಣೇಶನ ಮೆರವಣಿಗೆ ವೇಳೆ ಡಿಜೆ ಹಾಕಿ ಕುಣಿದು ಕುಪ್ಪಳಿಸುವುದು ವಾಡಿಕೆ. ಆದರೆ ಈ ಬಾರಿ 4 ಸೌಂಡ್ ಬಾಕ್ ಮಾತ್ರ ಬಳಕೆ ಮಾಡಬೇಕೆಂಬ ಷರತ್ತನ್ನು ವಿಧಿಸಲಾಗಿದೆ. ಗಣೇಶೋತ್ಸವದಲ್ಲಿ ಡಿಜೆಯೇ ಪೈಲೈಟ್.. ಇದಕ್ಕಾಗಿ 50 ಸಾವಿರ ದಿಂದ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈಗ ಕೇವಲ 4 ಬಾಕ್ ಮಾತ್ರ ಬಳಸಬೇಕೆಂಬ ನಿಯಮವನ್ನು ಹೇರಲಾಗಿದೆ.
ಸಿಸಿ ಕ್ಯಾಮೆರಾ ಕಡ್ಡಾಯ:
ಇನ್ನು ಎಲ್ಲಾ ಗಣೇಶೋತ್ಸವಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ ಮಾಡಲಾಗಿದೆ. ಮಂಡಳಿ ಮುಖಸ್ಥರೇ ಎಲ್ಲವನ್ನೂ ನೋಡಿಕೊಳ್ಳಬೇಕು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅವರೇ ಜವಾಬ್ದಾರರು ಎಂಬ ಎಚ್ಚರಿಕೆಯನ್ನೂ ನೀಡಲಾಗಿದ್ದು, ಬೇಡಪ್ಪ ಬೇಡ ಇದರ ಸಹವಾಸ ಎನ್ನುವಂತಾಗಿದೆ ಒಗ್ಗಟ್ಟು ಪ್ರದರ್ಶನಕ್ಕೆ ಹಬ್ಬ: ಇಂತಹ ಹಿನ್ನೆಲೆಯುಳ್ಳ ಹಬ್ಬದ ಆಚರಣೆಗೆ ಪ್ರೋತ್ಸಾಹ ಕೊಟ್ಟು ವಿಜೃಂಭಣೆಯಿಂದ ಮಾಡಿಸಬೇಕು.
ಆದರೆ ಷರತ್ತು ಮತ್ತು ಅನುಮತಿ ನೆಪದಲ್ಲಿ ಸುತ್ತಾಟ ಮತ್ತು ಹಣವನ್ನೂ ಪೀಡುವುದು ಸರಿಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣ ದಲ್ಲಿ ಜೋರಾಗಿದೆ. ಸಂಪ್ರದಾಯ, ಸಂಸ್ಕೃತಿ ಬೆಳೆಸಲು ನೆರವಾಗುವ ಇಂತಹ ಹಬ್ಬ ಹರಿದಿನ ಗಳ ಆಚರಣೆ ಸುಲಲಿತ ಮತ್ತು ಸೂಸೂತ್ರ ವಾಗಿರಬೇಕು. ಅದುಬಿಟ್ಟು ನೂರೆಂಟು ಷರತ್ತು ವಿಧಿಸಿ ಗೊಂದಲ ಗೋಜಲು ಮಾಡುವುದು ಸರಿಯೇ ಎಂಬ ಪ್ರಶ್ನೆ ಜನರದ್ದು.
ಗಣೇಶ ಹಬ್ಬದ ಆಚರಣೆಗಿಂತ ಈ ಅನುಮತಿ, ಶುಲ್ಕ ಕಟ್ಟುವುದೇ ದೊಡ್ಡ ತಲೆನೋವು ಮತ್ತು ಹೊರೆಯಾಗಿದೆ. ಸಂಸ್ಕೃತಿ ರಕ್ಷಣೆ ಉದ್ದೇಶದ ಹಬ್ಬಗಳಿಗೂ ಈ ರೀತಿ ಜಟಿಲ ನಿಯಮ ವಿಧಿಸುವುದು ಸರಿಯಲ್ಲ, ಹಬ್ಬಗಳ ಆಚರಣೆಗೆ ಪ್ರೋತ್ಸಾಹ ಕೊಡುವುದನ್ನು ಬಿಟ್ಟು ನಿರುತ್ಸಾಹ ಮೂಡಿಸುವಂತಿದೆ ಈಗಿನ ವ್ಯವಸ್ಥೆ. -ವೆಂಕಟೇಶ್, ಶ್ರೀ ಗಣೇಶ ಮಂಡಳಿ ಸದಸ್ಯರು.
ಷರತ್ತುಗಳಿಗೆ ಸಾರ್ವಜನಿಕರ ಬೇಸರ -
ಹಿಂದೂ ಹಬ್ಬಗಳಿಗೆ ಮಾತ್ರ ನಾನಾ ರೀತಿಯ ಷರತ್ತು ವಿಧಿಸುತ್ತಿರುವುದು ಸರಿಯಲ್ಲ. ಪ್ರತಿ ಹಬ್ಬಕ್ಕೂ ತನ್ನದೇ ಆದ ಇತಿಹಾಸ ಮತ್ತು ಅರ್ಥಗಳೂ ಇವೆ. ಆದರೆ ಈ ರೀತಿ ಅನುಮತಿ ಹೆಸರಲ್ಲಿ ಒತ್ತಡ ಹಾಕುತ್ತಿರುವುದು ಸರಿಯಲ್ಲ. ನಮ್ಮ ಸಂಸ್ಕೃತಿ ರಕ್ಷಣೆಗೆ ಅಗತ್ಯವಾದ ಹಬ್ಬಗಳನ್ನು ಆಚರಿಸಲು ಇಷ್ಟೆಲ್ಲ ಷರತ್ತುಗಳನ್ನು ಪಾಲಿಸಬೇಕಾ? ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಗರುಡಾ ಚಾರ್ಲಹಳ್ಳಿ ಅಮರೇಶ್ ಪ್ರಶ್ನೆ ಮಾಡಿದರು.
ಗಣೇಶನ ಉತ್ಸವಕ್ಕೆ ಸರಕಾರದಿಂದ ಕೇವಲ ಐದು ದಿನಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ವಿವಾದಾತ್ಮಕ ಭಾಷಣ ಮಾಡಬಾರದು, ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಯಾಗದಂತೆ ಗಣೇಶನ ಉತ್ಸವಗಳನ್ನು ಮಾಡಬೇಕು, ಗಣೇಶನ ಮೆರವಣಿಗೆಯಲ್ಲಿ ಬಳಸುವ ಡಿಜೆಗೆ ಕೇವಲ 4 ಬಾಕ್ಸ್ ಗಳನ್ನು ಬಳಸಬೇಕು, ಇದನ್ನು ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ಡಿವೈಎಸ್‌ಪಿ ಶಿವಕುಮಾರ್ ತಿಳಿಸಿದರು.
ಕಡಿಮೆಯಾಗದ ಮೋಹ:-
ನಿಷೇಧವಿದ್ದರೂ ಮಾರುಕಟ್ಟೆಯಲ್ಲಿ ಈಗಲೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳು ಲಭ್ಯ ಇವೆ. ಮಣ್ಣಿನ ಗಣಪತಿಗಿಂತ ಪಿಒಪಿ ಗಣೇಶ ನಿಗೆ ಬೆಲೆ ಜಾಸ್ತಿ ಇದೆಯಾದರೂ ಉತ್ತಮ ಫಿನಿಷಿಂಗ್‌ನೊಂದಿಗೆ ನೋಡಲು ಸುಂದರವಾಗಿರುವ ಕಾರಣಕ್ಕೆ ಕೆಲವರು ಈಗಲೂ ಅದನ್ನೇ ಮೆಚ್ಚು ತ್ತಾರೆ. ಮಣ್ಣಿಗಿಂತ ಪಿಒಪಿ ಗಣಪತಿ ಹಗುರವಾಗಿರುವ ಕಾರಣಕ್ಕೂ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಪಿಒಪಿ ಮೊರೆ ಹೋಗುತ್ತಾರೆ.
ಯಾವೆಲ್ಲ ನಿಯಮಗಳು?
# ಬಣ್ಣ ರಹಿತ ಮಣ್ಣಿನ/ ನೈಸರ್ಗಿಕ ಮೂರ್ತಿ ಪ್ರತಿಷ್ಠಾನೆ.
# ನಿಗದಿಪಡಿಸುವ ಜಾಗದಲ್ಲಿ ಮಾತ್ರ ವಿಸರ್ಜಿಸಬೇಕು.
# ಅಲಂಕಾರಿಕ ವಸ್ತುಗಳನ್ನು ಪ್ರತ್ಯೇಕಿಸಿ ಕಸ ಸಂಗ್ರಹ ವಾಹನಕ್ಕೆ ನೀಡಬೇಕು.
# ಗಣಪತಿ ಪೆಂಡಾಲ್‌ನಲ್ಲಿ ಶಬ್ದ ಮಾಲಿನ್ಯ ನಿಯಮ ಕಡ್ಡಾಯ.
* ಪರಿಸರಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು.
# ರಾತ್ರಿ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ.
# ಪೆಂಡಾಲ್ ನಿರ್ಮಾಣಕ್ಕೆ ಪ್ಲಾಸ್ಟಿಕ್ ವಸ್ತು ಬಳಸಬಾರದು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications