ಕೇಜ್ರಿವಾಲ್, ಭಗವಂತ್ ರೋಡ್‌ಶೋ: ಇಲ್ಲಿದೆ ಅಪ್‌ಡೇಟ್ಸ್
ಚಂಡೀಗಢ, ಮಾರ್ಚ್ 13: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಪಡೆದಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಭಾನುವಾರ ಪಂಜಾಬ್‌ನ ಅಮೃತಸರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇನ್ನೆನ್ನೂ ಕೆಲವೇ ಸಮಯದಲ್ಲಿ ರೋಡ್ ಶೋ ಆರಂಭವಾಗಲಿದೆ.
ಪಂಜಾಬ್‌ನಲ್ಲಿ 92 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದ ನಂತರ, ಆಮ್ ಆದ್ಮಿ ಪಕ್ಷ (ಎಎಪಿ) ಈಗ ರಾಜ್ಯದಲ್ಲಿ ತನ್ನ ಪ್ರಚಂಡ ವಿಜಯೋತ್ಸವವನ್ನು ಆಚರಿಸುತ್ತಿದೆ. ಭಾನುವಾರ ಅಮೃತಸರದಿಂದ ಎಲ್ಲಾ ಜಿಲ್ಲೆಗಳಲ್ಲಿ ವಿಜಯಯಾತ್ರೆಯನ್ನು ಪಕ್ಷವು ಯೋಜಿಸಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾನುವಾರ ಪಂಜಾಬ್‌ಗೆ ಭೇಟಿ ನೀಡಿದ್ದು, ಗೋಲ್ಡನ್ ಟೆಂಪಲ್ ಸಂಕೀರ್ಣ, ದುರ್ಗಿಯಾನ ಮಂದಿರ ಮತ್ತು ರಾಮತೀರ್ಥ ಮಂದಿರ ಸೇರಿದಂತೆ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಲು ನಿರ್ಧಾರ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಜೊತೆ ಭಗವಂತ್ ಮಾನ್ ಮತ್ತು 91 ಶಾಸಕರು ಸೇರಲಿದ್ದಾರೆ. ಭಗವಂತ್ ಮಾನ್ ಅವರು ತಮ್ಮ ಸರ್ಕಾರ ಹಳ್ಳಿಗಳಿಂದ ನಡೆಯುತ್ತದೆಯೇ ಹೊರತು ಚಂಡೀಗಢದಿಂದಲ್ಲ ಎಂದು ಜನರಿಗೆ ಭರವಸೆ ನೀಡಿದ್ದರು ಎಂಬುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಇಲ್ಲಿದೆ ಪ್ರಮುಖ ಅಪ್‌ಡೇಟ್ಸ್
* ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಈಗಾಗಲೇ ಅಮೃತಸರಕ್ಕೆ ಆಗಮಿಸಿದ್ದಾರೆ.
* ಪಂಜಾಬ್ ಸಿಎಂ ಆಗಲಿರುವ ಭಗವಂತ್ ಮಾನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಸುವರ್ಣ ವಿಧಾನಸೌಧದಲ್ಲಿ ಪ್ರಾರ್ಥನೆ ಸಲ್ಲಿಸಿ ಇಂದು ನಗರದಲ್ಲಿ ವಿಜಯ ಪಥಸಂಚಲನ ನಡೆಸಲು ಸಿದ್ಧರಾಗಿದ್ದಾರೆ.
* ಭಗವಂತ್ ಮಾನ್ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಚುನಾವಣೆಯಲ್ಲಿ ಪಕ್ಷದ ವಿಜಯವನ್ನು ಗುರುತಿಸುವ ತಮ್ಮ ರೋಡ್‌ಶೋಗೆ ಮುನ್ನ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದರು.
* ಭಗವಂತ್ ಮಾನ್ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಜಲಿಯನ್ ವಾಲಾಬಾಗ್ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು.
* ಜಾರ್ಖಂಡ್‌ನ ಸ್ವತಂತ್ರ ಶಾಸಕ, ಸರಯು ರಾಯ್ ಅವರು ಅಮೃತಸರಕ್ಕೆ ತೆರಳುವ ಮೊದಲು ದೆಹಲಿ ವಿಮಾನ ನಿಲ್ದಾಣದಲ್ಲಿ ಎಎಪಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭೇಟಿಯಾದರು.
* ಪಂಜಾಬ್ ಸಿಎಂ ಆಗಲಿರುವ ಭಗವಂತ್ ಮಾನ್ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನಗರದಲ್ಲಿ ರೋಡ್‌ಶೋಗೆ ಮುನ್ನ ದುರ್ಗಿಯಾನಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
* ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ನಿಯೋಜಿತ ಭಗವಂತ್ ಮಾನ್ ಅಮೃತಸರದಲ್ಲಿ ವಿಜಯೋತ್ಸವ ರೋಡ್ ಶೋ ನಡೆಸಿದರು.
* ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಎಎಪಿಯ ಪ್ರಚಂಡ ಗೆಲುವು ಒಂದು ದೊಡ್ಡ ಕ್ರಾಂತಿ (ಇಂಕ್ವಿಲಾಬ್) ಮತ್ತು ಮೊದಲ ಬಾರಿಗೆ ರಾಜ್ಯದ ಜನರು ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆಯಲಿದ್ದಾರೆ ಎಂದು ಹೇಳಿದರು.
* "ನನ್ನ ಕಿರಿಯ ಸಹೋದರ ಭಗವಂತ್ ಮಾನ್ ಪ್ರಾಮಾಣಿಕ ವ್ಯಕ್ತಿ. ಪಂಜಾಬ್‌ನಲ್ಲಿ ಇನ್ನು ಮುಂದೆ ಲೂಟಿ ನಿಲ್ಲುತ್ತದೆ. ಈಗ ಇಲ್ಲಿ ಶಾಸಕರು, ಸಚಿವರು ಲೂಟಿ ಮಾಡಿದರೆ ಜೈಲಿಗೆ ಹೋಗುತ್ತಾರೆ. ಸರ್ಕಾರದ ಹಣವನ್ನು ಪಂಜಾಬ್‌ಗೆ ಖರ್ಚು ಮಾಡಲಾಗುವುದು. ನಾವು ನಮ್ಮ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ, ಕೆಲವು ಸಮಯ ತೆಗೆದುಕೊಳ್ಳುತ್ತದೆ, ಕೆಲವು ತಕ್ಷಣವೇ ಮಾಡಲಾಗುತ್ತದೆ," ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.
* ನಾವು 122 ಜನರ ಭದ್ರತೆಯನ್ನು ಕಡಿಮೆ ಮಾಡಿದ್ದೇವೆ ಮತ್ತು ಅದರ ಕಾರಣದಿಂದಾಗಿ 403 ಪೊಲೀಸ್ ಸಿಬ್ಬಂದಿ ಮತ್ತು 27 ಪೊಲೀಸ್ ವಾಹನಗಳು ಪೊಲೀಸ್ ಠಾಣೆಗಳಿಗೆ ಹಿಂತಿರುಗಲು ಸಾಧ್ಯವಾಗಿದೆ. ಯಾವುದೇ ಸರ್ಕಾರಿ ಕಚೇರಿಯಲ್ಲಿ ಸಿಎಂ ಫೋಟೋ ಇರುವುದಿಲ್ಲ. ಆದರೆ ಶಹೀದ್ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿತ್ರಗಳು ಇರುತ್ತವೆ ಎಂದ ಭಗವಂತ್ ಮಾನ್












Click it and Unblock the Notifications