Chamarajanagar Lok Sabha constituency: ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ರಣತಂತ್ರ, ಕಗ್ಗಂಟಾದ ಅಭ್ಯರ್ಥಿ ಆಯ್ಕೆ!
ಚಾಮರಾಜನಗರ ಲೋಕಸಭಾ ಕ್ಷೇತ್ರ ಜನಸಂಖ್ಯೆಯ ದೃಷ್ಟಿಯಿಂದ ರಾಜ್ಯದಲ್ಲಿ ಮೂರನೇ ಅತಿದೊಡ್ಡ ಕ್ಷೇತ್ರವಾಗಿದೆ. ಈ ಊರಿನಲ್ಲಿ ಜನಿಸಿದ ಮೈಸೂರು ರಾಜ ಚಾಮರಾಜ ಒಡೆಯರ್ ಅವರ ಹೆಸರನ್ನು ಈ ಜಿಲ್ಲೆಗೆ ಇಡಲಾಗಿದೆ. 1962ರಲ್ಲಿ ಅಸ್ತಿತ್ವಕ್ಕೆ ಬಂದ ಈ ಲೋಕಸಭಾ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಪ್ರಸ್ತುತ ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದು. ಈ ಮೊದಲು, ಮೈಸೂರು ಜಿಲ್ಲೆಯ ಭಾಗವಾಗಿತ್ತು, ಭಾರತದ 50ನೇಯ ಸ್ವಾತಂತ್ರ್ಯ ಮಹೋತ್ಸವದ ನೆನಪಿನಾರ್ಥ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಆಗಸ್ಟ್ 15, 1997ರಂದು ಚಾಮರಾಜ ನಗರ ಜಿಲ್ಲೆಯಾಗಿ ಘೋಷಿಸಿದರು. ಈ ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಬಳಿಕ ಜೆಡಿಎಸ್ ಕೂಡ ಇಲ್ಲಿ ಪ್ರಾಮುಖ್ಯತೆ ಗಳಿಸಿದೆ.

ಬಿಜೆಪಿಯ ಸಂಸದರಿದ್ದರೂ ಕೂಡ ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ. ಈ ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 17 ಚುನಾವಣೆಗಳು ನಡೆದಿದ್ದು, ಈ ಪೈಕಿ ಕಾಂಗ್ರೆಸ್ 12 ಬಾರಿ ಗೆದ್ದಿದೆ. ಜನತಾದಳ ಎರಡು ಬಾರಿ ಗೆದ್ದಿದ್ದರೆ, ಜೆಡಿಎಸ್ ಮತ್ತು ಜೆಡಿಯು ಅಭ್ಯರ್ಥಿಗಳು ತಲಾ ಒಂದು ಬಾರಿ ಗೆದ್ದಿದ್ದಾರೆ. ಬಿಜೆಪಿಗೆ ಕಳೆದ ಬಾರಿ ಗೆಲುವು ಕಂಡಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಗಳಿಸಿ ಜಯಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್ ಧ್ರುವನಾರಾಯಣ 5,66,720 ಮತಗಳನ್ನು ಪಡೆದು, ಕೇವಲ 1,817 ಮತಗಳಿಂದ ಸೋಲು ಕಂಡಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ಡಾ.ಶಿವಕುಮಾರ್ 87,631 ಮತಗಳನ್ನು ಪಡೆದಿದ್ದಾರೆ.

2014ರ ಚುನಾವಣೆಯಲ್ಲಿ ಆಗಿನ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು. ಅವರು ಬಿಜೆಪಿಯ ಎಆರ್ ಕೃಷ್ಣಮೂರ್ತಿ ಅವರನ್ನು ಸುಮಾರು 1.41 ಲಕ್ಷ ಮತಗಳಿಂದ ಸೋಲಿಸಿದರು. ಕಾಂಗ್ರೆಸ್ 5,67,782 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 4,26,600 ಮತಗಳನ್ನು ಗಳಿಸಿದ್ದರು.
ಗೆಲುವು ಯಾರ ಪಾಲಾಗಬಹುದು?
ಚಾಮರಾಜನಗರ ಲೋಕಸಭಾ ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹೆಗ್ಗಡದೇವನಕೋಟೆ ( ಮೈಸೂರು ಅನಿಲ್ ಕುಮಾರ್), ನಂಜನಗೂಡು (ದರ್ಶನ್ ಧ್ರುವನಾರಾಯಣ), ವರುಣ (ಸಿದ್ದರಾಮಯ್ಯ), ಟಿ.ನರಸೀಪುರ (ಎಚ್.ಸಿ ಮಹದೇವಪ್ಪ), ಹನೂರು ( ಎಂ ಆರ್ ಮಂಜುನಾಥ್), ಕೊಳ್ಳೇಗಾಲ (ಎ.ಆರ್. ಕೃಷ್ಣಮೂರ್ತಿ), ಚಾಮರಾಜನಗರ (ಸಿ.ಪುಟ್ಟರಂಗಶೆಟ್ಟಿ) , ಗುಂಡ್ಲುಪೇಟೆ (ಹೆಚ್ ಎಂ ಗಣೇಶ್ ಪ್ರಸಾದ್).

ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹನೂರಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ ಅದು ಬಿಟ್ಟರೆ ಎಲ್ಲರೂ ಕಾಂಗ್ರೆಸ್ ಶಾಸಕರು. ಹೀಗಾಗಿ ಇಲ್ಲಿ ಕಾಂಗ್ರೆಸ್ ಗೆಲುವು ಅಷ್ಟೇನು ಕಷ್ಟವಲ್ಲ. ಆದರೆ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿರೋದು ಕಾಂಗ್ರೆಸ್ ಕೈಯಲ್ಲಿದೆ. ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ 17 ಲಕ್ಷದ 57 ಸಾವಿರದ 616 ಮತದಾರರಿದ್ದಾರೆ. 8 ಲಕ್ಷದ 69 ಸಾವಿರದ 389 ಪುರುಷರು, 8 ಲಕ್ಷದ 88 ಸಾವಿರದ 113 ಮಹಿಳೆಯರು, 114 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಬಿಜೆಪಿಯಿಂದ ಬಾಲರಾಜ್ ಕಾಂಗ್ರೆಸ್‌ನಿಂದ..?
ಚಾಮರಾಜನಗರದ ಸಂಸದ ಶ್ರೀನಿವಾಸಪ್ರಸಾದ್ ಅಳಿಯ ಡಾ.ಮೋಹನ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೂ ಅವರಿಗೆ ಟಿಕೆಟ್ ಮಿಸ್ ಆಗಿತ್ತು. ಭಾರತೀಯ ಜನತಾ ಪಾರ್ಟಿಯಿಂದ ಎಸ್ ಬಾಲರಾಜ್ ಅಭ್ಯರ್ಥಿಯಾಗಿದ್ದಾರೆ. ಸಾಕಷ್ಟು ಲಾಬಿ ಮಾಡಿದ್ದ ಸಂಸದ ಶ್ರೀನಿವಾಸಪ್ರಸಾದ್ ಅಳಿಯ ಡಾ.ಮೋಹನ್ ಪಕ್ಷಾಂತರ ವಿಷಯ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ಅವರು ಕೂಡ ಬಿಜೆಪಿ ಅಭ್ಯರ್ಥಿ ಬಾಲರಾಜ್‌ಗೆ ಬೆಂಬಲ ಸೂಚಿಸಿದ್ದಾರೆ.
ಇತ್ತ, ಕಾಂಗ್ರೆಸ್‌ನಲ್ಲಿ ಫೈನಲ್ ಆಗದ ಕಾಂಗ್ರೆಸ್ ಅಭ್ಯರ್ಥಿ, ಸ್ಪರ್ಧೆಗೆ ಮಾಜಿ ಚಿವ ಮಹದೇವಪ್ಪ ಒಪ್ಪುತ್ತಿಲ್ಲ. ಮಗ ಸುನೀಲ್ ಬೋಸ್‌ಗೆ ಟಿಕೆಟ್ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಸುನೀಲ್ ಬೋಸ್‌ಗೆ ಟಿಕೆಟ್ ಕೊಡಲು ಹೈಕಮಾಂಡ್ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸುನೀಲ್ ಬೋಸ್, ದರ್ಶನ್ ಧ್ರುವನಾರಾಯಣ, ಡಿ.ಎನ್.ನಟರಾಜು, ಜಿ.ಎನ್.ನಂಜುಂಡಸ್ವಾಮಿ ಟಿಕೆಟ್ ರೇಸ್‌ನಲ್ಲಿ ಇದ್ದಾರೆ. ಆದರೆ, ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಸೂಚಿಸಿದವರಿಗೆ ಟಿಕೆಟ್ ಸಿಗಲಿದೆ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
"ಕಾಂಗ್ರೆಸ್‌ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications