ಗುಂಡ್ಲುಪೇಟೆ-ಚಾಮರಾಜನಗರ ರಸ್ತೆ ಶೀಘ್ರವೇ ರಾಷ್ಟ್ರೀಯ ಹೆದ್ದಾರಿ

ಚಾಮರಾಜನಗರ, ನವೆಂಬರ್ 05 : ಗುಂಡ್ಲುಪೇಟೆ-ಚಾಮರಾಜನಗರ ನಡುವಿನ ರಾಜ್ಯ ಹೆದ್ದಾರಿ ಶೀಘ್ರವೇ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಯಾಗಲಿದೆ. ಸುಮಾರು 156 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ.

ಸುಮಾರು 35 ಕಿ.ಮೀ. ಉದ್ದದ ಗುಂಡ್ಲುಪೇಟೆ-ಚಾಮರಾಜನಗರ ನಡುವಿನ ರಾಜ್ಯ ಹೆದ್ದಾರಿ 81ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆ ಬಗ್ಗೆ ವಿವರವಾದ ಡಿಪಿಆರ್ ತಯಾರಾಗಿದೆ.

ಯೋಜನೆಯ ವರದಿ ಪ್ರಕಾರ ಎರಡೂ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಮಾಡಲಾಗುತ್ತದೆ. 32.8 ಕಿ.ಮೀ.ಉದ್ದದ ಹೊಸ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ನಿರ್ಮಾಣಕ್ಕೆ 120 ಕೋಟಿ, ಭೂ ಸ್ವಾಧೀನ ಎಲ್ಲಾ ಸೇರಿ 156 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ.

Gundlupet-Chamarajanagar highway to be upgraded as National Highway

ರಸ್ತೆ ಅಕ್ಕ-ಪಕ್ಕದಲ್ಲಿ ಹೆಚ್ಚು ಜಾಗವಿದ್ದು, ಈ ಯೋಜನೆಗೆ ಕೇವಲ 20 ಎಕರೆಯಷ್ಟು ಜಾಗವನ್ನು ಭೂ ಸ್ವಾಧೀನ ಮಾಡಬೇಕು ಎಂದು ಅಂದಾಜಿಸಲಾಗಿದೆ. 12 ಕಿರು ಸೇತುವೆ ನಿರ್ಮಾಣ, 1.5 ಕಿ.ಮೀ. ಬೈಪಾಸ್ ರಸ್ತೆಯನ್ನು ತೆರಕಣಾಂಬಿಯಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಯೋಜನೆಯ ಭಾಗವಾಗಿ ಚಾಮರಾಜನಗರದಲ್ಲಿ ಗುಂಡ್ಲುಪೇಟೆ ವೃತ್ತದಿಂದ 800 ಮೀಟರ್‌ವರೆಗೆ ನಾಲ್ಕು ಪಥಗಳ ರಸ್ತೆ ನಿರ್ಮಾಣವಾಗಲಿದೆ. ಹೊಸ ರಸ್ತೆ ಹಾದು ಹೋಗುವ ಗ್ರಾಮಗಳಲ್ಲಿ ಚರಂಡಿ, ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ತಡೆ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+