ಚಾಮರಾಜನಗರ, ಅಕ್ಟೋಬರ್ 31: ಬುಧವಾರ ನವೆಂಬರ್ 1ರಿಂದ ಬಂಡೀಪುರ ಉದ್ಯಾನದ ಪ್ರವೇಶ ಶುಲ್ಕ ಹಾಗೂ ಸಫಾರಿ ಶುಲ್ಕವನ್ನು ಹೆಚ್ಚಿಸಲಾಗುತ್ತಿದ್ದು, ಇದರ ಬಿಸಿ ಪ್ರವಾಸಿಗರಿಗೆ ತಟ್ಟಲಿದೆ. ಇದರ ಜತೆಗೆ ಉದ್ಯಾನದಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕವೂ ಹೆಚ್ಚಳವಾಗಲಿದೆ.
ರಾಜ್ಯದ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ ಪ್ರವೇಶ ಶುಲ್ಕ ಏರಿಕೆ
ಮೈಸೂರು ಮೃಗಾಲಯ, ಬಂಡೀಪುರ ಮಾತ್ರವಲ್ಲದೇ ರಾಜ್ಯದ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಹುಲಿಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳ ಪ್ರವೇಶ ಶುಲ್ಕವೂ ಹೆಚ್ಚಿಸಲಾಗಿದ್ದು, ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಪರಿಷ್ಕೃತ ದರದ ಪಟ್ಟಿ ಈ ಕೆಳಗಿನಂತಿದೆ.
ಬಂಡೀಪುರದಲ್ಲಿ ಸಫಾರಿ ಶುಲ್ಕವನ್ನು 300 ರಿಂದ 550 ರು,ಗೆ ಹೆಚ್ಚಿಸಲಾಗಿದ್ದು, ವಿದೇಶಿಯರಿಗಿದ್ದ 1000 ರು.ರಿಂದ 1500 ರು.ಗೆ ಏರಿಸಲಾಗಿದೆ.
ಇನ್ನು ಅತಿಥಿಗೃಹದ ಬಾಡಿಗೆ ದಿನವೊಂದಕ್ಕೆ ಭಾರತೀಯರಿಗೆ 1000 ಇದ್ದದ್ದು 2500, ವಿದೇಶಿಗರಿಗೆ 2000 ದಿಂದ 5000 ರು.ಗೆ ಹೆಚ್ಚಳ ಮಾಡಲಾಗಿದೆ. ಹಿಂದೆ ಒಂದು ಗಂಟೆಯಿದ್ದ ಸಫಾರಿ ಸಮಯವನ್ನು ಒಂದೂವರೆ ಗಂಟೆಗೆ ವಿಸ್ತರಿಸಲಾಗಿದೆ.
ಮೃಗಾಲಯ ಪ್ರವೇಶ ದರ ಹೆಚ್ಚಳ
ಮೈಸೂರಿನ ಚಾಮರಾಜೇಂದ್ರ ಮೃಗಾಲಯವು 125ನೇ ವರ್ಷದ ಸಂಭ್ರಮಾಚರಣೆಯಲ್ಲಿ ಈ ವೇಳೆ ಪ್ರವೇಶ ಶುಲ್ಕವನ್ನು ಹೆಚ್ಚಿಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರೂ ಮೃಗಾಲಯದ ನಿರ್ವಹಣೆಯ ವೆಚ್ಚ ಹೆಚ್ಚಳವಾಗಿದ್ದರಿಂದ ಪ್ರವೇಶ ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿರುವುದರಿಂದ ವಿಶೇಷ ದಿನಗಳು, ರಜೆಯ ದಿನಗಳಲ್ಲಿ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡುವ ತೀರ್ಮಾನಕ್ಕೆ ಬರಲಾಗಿದೆ.
ಅದರಂತೆ ಮಾಮೂಲಿ 50 ರು. ಇರುವ ಶುಲ್ಕ ವಿಶೇಷ ದಿನಗಳಂದು 70 ರು. ಆಗಲಿದೆ. ಬ್ಯಾಟರಿ ಚಾಲಿತ ವಾಹನದ ಶುಲ್ಕ ಒಬ್ಬರಿಗೆ 150 ರು. ಆಗಲಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!