ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?
ಬೆಂಗಳೂರು, ಅ.06: ದೇಶದ ಐಟಿ ಬಿಟಿ ಸಿಟಿ, ಗಾರ್ಡನ್ ಸಿಟಿ, ಕಾಸ್ಮೋಪಾಲಿಟನ್ ಸಿಟಿ ಎನಿಸಿಕೊಂಡಿರುವ ಬೆಂಗಳೂರು ಜರ್ಮನಿಯ ಹೂಡಿಕೆದಾರರಿಗೆ ಹೊಸತೇನಲ್ಲ. ಹಾಗೆ ನೋಡಿದರೆ ಬೆಂಗಳೂರಿನ ಮೂಲಕ ಭಾರತಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆಗಳಿಗೆ ಸಾಕಷ್ಟು ಹಣ ಹರಿದು ಬರಲಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ.
ಬೆಂಗಳೂರಿನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಹಾಗೂ ಬಯೋ ಟೆಕ್ನಾಲಜಿ ಕಂಪನಿಗಳಲ್ಲದೆ, ಇಂಜಿನಿಯರಿಂಗ್, ರಕ್ಷಣೆ, ವೈಮಾನಿಕ, ಹೆವಿ ವೆಹಿಕಲ್, ಹಾರ್ಡ್ ವೇರ್ ಡಿಸೈನ್, ಆಟೋಮೊಬೈಲ್ ಕ್ಷೇತ್ರದ ದೊಡ್ಡ ಕಂಪನಿಗಳು ಬೀಡು ಬಿಟ್ಟಿವೆ. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]
ಸುಮಾರು ಶೇ 62ಕ್ಕೂ ಅಧಿಕ ಮಂದಿ ವಲಸಿಗರನ್ನು ಹೊಂದಿದ್ದರೂ, ಮೂಲ ಸೌಕರ್ಯ ಕೊರತೆ ಇದ್ದರೂ ಕರ್ನಾಟಕದ ರಾಜಧಾನಿಯಲ್ಲಿ ಚಿನ್ನದ ಬೆಳೆಯನ್ನು ಬಹುರಾಷ್ಟ್ರೀಯ ಕಂಪನಿಗಳು ಎತ್ತುತ್ತಿವೆ.[ಬಾಷ್‌ಗೆ ಭೇಟಿ ಇತ್ತ ಮೋದಿ, ಮರ್ಕೆಲ್, ಸಿದ್ದರಾಮಯ್ಯ]
ಆರ್ ಅಂಡ್ ಡಿ ಗೆ ಒತ್ತು: ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಜರ್ಮನ್ ಮೂಲದ ಬಾಷ್ ಕಂಪನಿ ಇತ್ತೀಚೆಗೆ ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿ ತನ್ನ ಅತ್ಯಾಧುನಿಕ ಘಟಕವನ್ನು ಸ್ಥಾಪಿಸಿದೆ. [ಬಾಷ್ ಸಂಬಳವೇ ಅಧಿಕ!]
ಪ್ರಧಾನಿ ಮೋದಿ ಅವರು ತಮ್ಮ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಕೈ ಜೋಡಿಸುವಂತೆ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರಿಗೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಮರ್ಕೆಲ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ.ಬೆಂಗಳೂರಲ್ಲಿ ಜರ್ಮನ್ ಕಂಪನಿಗಳ ಸಾಧನೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕಿರುವ ಅವಕಾಶಗಳು ಬೆಂಗಳೂರನ್ನು ಆಯ್ಕೆ ಮಾಡುವಂತೆ ಪ್ರೇರಿಪಿಸಿದೆ.

ಆರ್ ಅಂಡ್ ಡಿ ಕ್ಷೇತ್ರಕ್ಕೆ ಜರ್ಮನ್ನರ ಒತ್ತು
ಯುವ ವೃತ್ತಿಪರರು, ಅಗತ್ಯ ಸೌಲಭ್ಯದ ನೆರವಿನಿಂದ ಜರ್ಮನ್ನರಿಗೆ ಹೂಡಿಕೆಗೆ ತಕ್ಕ ಲಾಭ ತರುವ ಈ ಪ್ರದೇಶದಲ್ಲೇ ಮುಂದಿನ ಆರ್ಥಿಕ ಅಭಿವೃದ್ಧಿಗೆ ನಾಂದಿ ಹಾಡಬೇಕು ಎನಿಸಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬೆಂಗಳೂರು ಸೂಕ್ತ ಪ್ರದೇಶವಾಗಿದೆ. ಆಟೋಮೊಬೈಲ್ ನಿಂದ ಐಟಿ ತನಕ ಹಲವಾರು ಆರ್ ಅಂಡ್ ಡಿ ಸಂಸ್ಥೆಗಳು ಇಲ್ಲಿವೆ. ಚಿತ್ರದಲ್ಲಿ : ಏಂಜೆಲಾ ಮರ್ಕೆಲ್ ಅವರಿಗೆ ಶಾಲು ಹೊದೆಸಿ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯ

ಜರ್ಮನಿಯ ಪ್ರತಿನಿಧಿ ಜೋರ್ನ್ ರೋಹ್ಡೆ
ಜರ್ಮನಿಯ ಪ್ರತಿನಿಧಿ ಜೋರ್ನ್ ರೋಹ್ಡೆ ಮಾತನಾಡಿ, ಚಾನ್ಸೆಲರ್ ಅವರು ಬೆಂಗಳೂರಿಗೆ ಬಂದಿದ್ದರಿಂದ ಮೋದಿ ಸರ್ಕಾರಕ್ಕೂ ಜರ್ಮನ್ ತಂತ್ರಜ್ಞಾನದ ಪರಿಚಯ, ಪ್ರಾತ್ಯಕ್ಷಿಕೆ ನೀಡಲು ಅನುಕೂಲವಾಗಲಿದೆ. ಯುರೋ-ಜರ್ಮನ್ ಸುಮಾರು 9.7 ಬಿಲಿಯನ್ ಹೂಡಿಕೆಯನ್ನು ಭಾರತದಲ್ಲಿ ಮಾಡಲಿದೆ. ಭಾರತದಲ್ಲಿ ಸುಮಾರು 1,600 ಜರ್ಮನ್ ಕಂಪನಿಗಳಿವೆ, ಕರ್ನಾಟಕದಲ್ಲೇ 200 ಕಂಪನಿಗಳಿವೆ. ಒಟ್ಟಾರೆ ನಾಲ್ಕು ಲಕ್ಷಕ್ಕೂ ಅಧಿಕ ಭಾರತೀಯರಿಗೆ ಉದ್ಯೋಗ ಅವಕಾಶ ಸಿಗಲಿದೆ.

ಬೆಂಗಳೂರಲ್ಲಿ ಜರ್ಮನ್ ಕಂಪನಿಗಳ ಸಾಧನೆ
ಬೆಂಗಳೂರಲ್ಲಿ ಎಸ್ಎ ಪಿ, ಬಾಷ್, ಹೆಂಕಲ್, ಫ್ರೆಯುಂಬರ್ಗ್(Freudenberg), ಸಿಮನ್ಸ್, ದೈಮ್ಲರ್, ಡ್ಯೂಯಚ್ ಬ್ಯಾಂಕ್, ವೋಲ್ವೋ ಮುಂತಾದ ಜರ್ಮನ್ ಸಂಸ್ಥೆಗಳಿವೆ. ಈ ಸಂಸ್ಥೆಗಳ ಅಭಿವೃದ್ಧಿಯ ದ್ಯೋತಕವಾಗೇ ಜರ್ಮನ್ ಚಾನ್ಸೆಲರ್ ಅವರ ಭೇಟಿ ಹಾಗೂ ಭಾರತದೊಡನೆ ಆರ್ಥಿಕ ಅಭಿವೃದ್ಧಿಗೆ ನಾಂದಿ ಹಾಡಲು ಬೆಂಗಳೂರನ್ನೇ ಆಯ್ಕೆ ಮಾಡಲಾಗಿದೆ.

ಬಾಷ್ ಭಾರತದ ಮುಖ್ಯಸ್ಥ ಸ್ಟೀಫನ್ ಬರ್ನ್ಸ್
ನಾವು ಭಾರತದಲ್ಲಿ ಬಹು ವಿಸ್ತರಣೆಯ ಅವಕಾಶದ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ ಮತ್ತು ದೇಶದ ಭವಿಷ್ಯಕ್ಕಾಗಿ ಹೆಚ್ಚಿನ ಯೋಜನೆಗಳನ್ನು, ಉತ್ಪನ್ನಗಳನ್ನು ಮತ್ತು ಉತ್ಪಾದನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ,ಭಾರತದಲ್ಲಿ ನಮ್ಮ ಬೆಳವಣಿಗೆಯು ಕರ್ನಾಟಕದ ರಾಜ್ಯ ಸರಕಾರದೊಂದಿಗೆ ಅತ್ಯಂತ ನಿಕಟವಾಗಿ, ಅನ್ಯೋನ್ಯವಾಗಿ ಬೆರೆತುಕೊಂಡಿದೆ ಮತ್ತು ನಾವು ಈ ಸಂಬಂಧವು ಇನ್ನಷ್ಟು ಉತ್ತಮಗೊಳ್ಳುತ್ತದೆಯೆಂದು ಭಾವಿಸಿದ್ದೇವೆ ಎಂದು ಬಾಷ್ ಭಾರತದ ಮುಖ್ಯಸ್ಥ ಸ್ಟೀಫನ್ ಬರ್ನ್ಸ್ ಹೇಳಿದ್ದಾರೆ.

ಪ್ರಧಾನಿ ಅವರ ಯೋಜನೆಗಳ ಸಾಕಾರ
ಪ್ರಧಾನಿ ಅವರ ಯೋಜನೆಗಳ ಸಾಕಾರಕ್ಕೆ ಬೆಂಗಳೂರು ಹೇಳಿಮಾಡಿಸಿದ ಕ್ಷೇತ್ರವಾಗಿದೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಸೇರಿದಂತೆ ಕೌಶಲ್ಯ ಅಭಿವೃದ್ಧಿಗೂ ಇಲ್ಲಿ ಅವಕಾಶಗಳಿದ್ದು, ಈಗಾಗಲೇ ಅನೇಕ ಯೋಜನೆಗಳು ಕಾರ್ಯಗತವಾಗಿದೆ. ಹೀಗಾಗಿ ಮೋದಿ ಅವರ ಯೋಜನೆ ಜೊತೆ ಕೈಜೋಡಿಸಲು ಬೆಂಗಳೂರು ಸೂಕ್ತ ಎಂದು ಜರ್ಮನ್ನರಿಗೆ ಮನವರಿಕೆಯಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications