ಆಮದು ಸುಂಕ ಇಳಿಕೆ; ಫೆ.8ರಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಚಿನ್ನ ಮತ್ತು ಬೆಳ್ಳಿಯ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದರು. ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 12.5 ರಿಂದ ಶೇ 7.5 ಕ್ಕೆ ಇಳಿಸುವುದಾಗಿ ಹೇಳಿದರು. ಇದಾದ ಬಳಿಕ ಚಿನ್ನ, ಬೆಳ್ಳಿ ದರದಲ್ಲಿ ಸತತ ವ್ಯತ್ಯಾಸ ಕಂಡು ಬಂದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಚೇತರಿಕೆ ಕಂಡಿದ್ದು, ಚಿನ್ನದ ಮೌಲ್ಯ ಏರಿಕೆ ಕಂಡಿದೆ. ನವದೆಹಲಿಯಲ್ಲಿ ಚಿನ್ನದ ಬೆಲೆ 94ರು ಏರಿಕೆ ಕಂಡು 22 ಕ್ಯಾರೆಟ್ ಚಿನ್ನ 10 ಗ್ರಾಂ 46,877 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ 340 ರು ಏರಿಕೆ ಕಂಡು 68, 391 ರೂಪಾಯಿ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸಿಗೆ 1,815 ಯುಎಸ್ ಡಾಲರ್ ಹಾಗೂ ಬೆಳ್ಳಿ 27.16 ಯುಎಸ್ ಡಾಲರ್ ನಷ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಮುಂದೆ ನೀಡಲಾಗಿದೆ

ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕ
ಪ್ರಮುಖ ಲೋಹಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು 2019ರ ಜುಲೈಯಲ್ಲಿ ಶೇ 10 ರಿಂದ ಶೇ 12.5ಕ್ಕೇರಿಸಲಾಗಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ 11.85% ರಿಂದ ಶೇ 6.9ಕ್ಕಿಳಿಸಲಿದೆ. ಬೆಳ್ಳಿ ಮೇಲೆ ಇದ್ದ ಅಬಕಾರಿ ಸುಂಕ ಶೇ 11%ರಿಂದ ಶೇ 6.1ಕ್ಕೆ ಇಳಿಸಲಾಗಿದೆ. ಇದೇ ರೀತಿ ಪ್ಲಾಟಿನಂ ಹಾಗೂ ಪಲ್ಲಿಡಂ ಮೇಲಿನ ಸುಂಕ ಶೇ 12.5ರಿಂದ 10ಕ್ಕಿಳಿಸಲಾಗಿದೆ. ಇದಲ್ಲದೆ ಈ ಬಾರಿ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ 2.5% ಚಿನ್ನ ಹಾಗೂ ಬೆಳ್ಳಿ ಮೇಲೂ ಹಾಕಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 8: 44,060 (ಬದಲಾವಣೆ ಇಲ್ಲ)<>48, 070 (ಬದಲಾವಣೆ ಇಲ್ಲ)
ಫೆಬ್ರವರಿ 7: 44,060 (10 ಏರಿಕೆ)<>48, 070 (10 ಏರಿಕೆ)
ಫೆಬ್ರವರಿ 6: 44, 050 (300 ಏರಿಕೆ)<> 48,060 (330 ಏರಿಕೆ )
ಫೆಬ್ರವರಿ 5: 43,730 (600 ಇಳಿಕೆ)<>47, 730 (650 ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 8: 46,200 (10 ರು ಇಳಿಕೆ)<>50, 400 (10 ರು ಇಳಿಕೆ)
ಫೆಬ್ರವರಿ 7: 46,210 (10 ಏರಿಕೆ)<> 50,410 (10 ಏರಿಕೆ)
ಫೆಬ್ರವರಿ 6: 46,200 (300 ಏರಿಕೆ)<>50,400 (390 ಏರಿಕೆ )
ಫೆಬ್ರವರಿ 5: 45,900 (600 ಇಳಿಕೆ)<>50, 010 (720 ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 8: 44,580 (120 ಇಳಿಕೆ)<>48, 630 (100 ಇಳಿಕೆ)
ಫೆಬ್ರವರಿ 7: 44,700 (10 ಏರಿಕೆ)<>48, 730 (ಬದಲಾವಣೆ ಇಲ್ಲ)
ಫೆಬ್ರವರಿ 6: 44, 690 (140 ಏರಿಕೆ)<> 48,730 (140 ಏರಿಕೆ )
ಫೆಬ್ರವರಿ 5: 44, 550 (280 ಇಳಿಕೆ)<>48, 590 (310 ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 8: 46,350 (190 ಏರಿಕೆ)<>47, 350 (190 ಏರಿಕೆ)
ಫೆಬ್ರವರಿ 7: 46,160 (10 ಇಳಿಕೆ)<>47,160 (10 ಇಳಿಕೆ)
ಫೆಬ್ರವರಿ 6: 46,170 (210 ಇಳಿಕೆ)<> 47,170 (210 ಇಳಿಕೆ)
ಫೆಬ್ರವರಿ 5: 46,380 (220 ಇಳಿಕೆ)<>47, 380 (220 ಇಳಿಕೆ)