ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

TCS ಈಗ ವಿಶ್ವದ ಅತ್ಯಮೂಲ್ಯ ಐಟಿ ಕಂಪನಿ: ಅಕ್ಸೆಂಚರ್‌ ಹಿಂದಿಕ್ಕಿದ ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ

|
Google Oneindia Kannada News

ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೊಸ ದಾಖಲೆಯನ್ನೇ ಬರೆದಿದೆ. ವಿಶ್ವದ ಮತ್ತೊಂದು ಅಗ್ರಮಾನ್ಯ ಸಾಫ್ಟ್‌ವೇರ್ ಕಂಪನಿ ಅಕ್ಸೆಂಚರ್‌ ಅನ್ನು ಸೋಲಿಸಿ ಮುಂದೆ ಸಾಗಿದೆ.

ಹೌದು, ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಗುರುವಾರ ತನ್ನ ಸಾಧನೆಗಳಲ್ಲಿ ಮತ್ತೊಂದು ಪ್ರಗತಿಯನ್ನು ಸಾಧಿಸಿದೆ. ಟಿಸಿಎಸ್ ಈಗ ವಿಶ್ವದ ಅಮೂಲ್ಯ ಐಟಿ ಕಂಪನಿಯಾಗಿದೆ. ಮಾರುಕಟ್ಟೆ ಕ್ಯಾಪ್ ವಿಷಯದಲ್ಲಿ ಇದು ಮೊದಲ ಬಾರಿಗೆ ಅಕ್ಸೆಂಚರ್ ಅನ್ನು ಹಿಂದಿಕ್ಕಿದೆ.

ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಿಸುವುದಾಗಿ ಘೋಷಿಸಿದ TCS: ಅಕ್ಟೋಬರ್ 1ರಿಂದಲೇ ಜಾರಿತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಿಸುವುದಾಗಿ ಘೋಷಿಸಿದ TCS: ಅಕ್ಟೋಬರ್ 1ರಿಂದಲೇ ಜಾರಿ

ಟಿಸಿಎಸ್ ಷೇರು ಬಿಎಸ್‌ಇಯಲ್ಲಿ ಗುರುವಾರ ಶೇ 3.19 ರಷ್ಟು ಏರಿಕೆಯಾಗಿ 2,825 ರೂ.ಗೆ ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್ 144.73 ಬಿಲಿಯನ್ ಅಂದರೆ 10.60 ಲಕ್ಷ ಕೋಟಿ ರೂ. ಆಗಿದೆ. ಅಕ್ಸೆಂಚರ್ ನಾಸ್ಡಾಕ್‌ನಲ್ಲಿ 143.4 ಬಿಲಿಯನ್ ಅಥವಾ 10.52 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಕ್ಯಾಪ್ ಹೊಂದಿದೆ ಮತ್ತು ಐಬಿಎಂ 118.2 ಬಿಲಿಯನ್ ಡಾಲರ್ ಅಥವಾ 8.67 ಲಕ್ಷ ಕೋಟಿ ರೂ. ಹೊಂದಿದೆ.

TCS Surpasses Accenture: Become Worlds Most-Valuable IT Company

ಎರಡನೇ ತ್ರೈಮಾಸಿಕದಲ್ಲಿ, ನಿರೀಕ್ಷಿತ ಕಾರ್ಯಕ್ಷಮತೆಗಿಂತ ಉತ್ತಮವಾಗಿರುವುದರಿಂದ ಟಿಸಿಎಸ್ ಷೇರುಗಳು ಏರಿಕೆಯಾಗಿವೆ. ಅಲ್ಲದೆ, ಕಂಪನಿಯು 16,000 ಕೋಟಿ ರೂ.ಗಳ ಮರುಖರೀದಿ ಯೋಜನೆಯನ್ನು ಪ್ರಕಟಿಸಿದೆ. ಕಂಪನಿಯು ಪ್ರತಿ ಷೇರಿಗೆ 12 ರೂ.ಗಳ ಮಧ್ಯಂತರ ಲಾಭಾಂಶವನ್ನು ಸಹ ಪಾವತಿಸುತ್ತಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 3 ರಷ್ಟು ಏರಿಕೆ ಕಂಡು 40,135 ಕೋಟಿ ರೂ. ತಲುಪಿದೆ

ಇತ್ತೀಚೆಗೆ, ಟಿಸಿಎಸ್ ನೌಕರರ ವೇತನವನ್ನು ಹೆಚ್ಚಿಸುವುದಾಗಿ ಘೋಷಿಸಿತು. ಈ ವೇತನ ಹೆಚ್ಚಳ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಟಿಸಿಎಸ್‌ನ ಈ ಕ್ರಮವು ಕಂಪನಿಯ ಚಿತ್ರಣವನ್ನು ಇನ್ನಷ್ಟು ಉತ್ತಮಗೊಳಿಸಿದೆ. ಟಿಸಿಎಸ್ ಪ್ರಕಾರ, 3.52 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದೆ.

English summary
Tata group flagship firm Tata Consultancy Services (TCS) on Thursday became the most-valuable information technology (IT) company globally, surpassing rival Accenture for the first time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X