ಸಂಕ್ರಾಂತಿ ವಿಶೇಷ: ಸ್ಮಾರ್ಟ್ ಫೋನಿನಲ್ಲೇ ದೇಗುಲಗಳ ದರ್ಶನ

By: ಅಶ್ವಿನಿ ಅನೀಶ್
Subscribe to Oneindia Kannada

ಬೆಂಗಳೂರು ಮೂಲದ ತಂಡ ವಿನ್ಯಾಸಗೊಳಿಸಿ MyTemple ಆಂಡ್ರಾಯ್ಡ್ ಅಪ್ಲಿಕೇಷನ್ ಬಗ್ಗೆ ಮಾಹಿತಿ ಇಲ್ಲಿದೆ. ಈ ವಿಶಿಷ್ಟ ಅಪ್ಲಿಕೇಷನ್ ಲೋಕಾರ್ಪಣೆಯಾಗಿ ಒಂದು ವರ್ಷ ಕಳೆದ ಬಳಿಕ ಈಗ ಹೊಸ ರೂಪದೊಂದಿಗೆ ನಿಮ್ಮ ಮುಂದಿದೆ.

ಭಾರತದ ಸುಂದರವಾದ ದೇವಸ್ಥಾನಗಳನ್ನು, ಸಂಪ್ರದಾಯವನ್ನು ಹಾಗು ಸಂಸ್ಕೃತಿಯನ್ನು ಪರಿಚಯಿಸುವ ವಿನೂತನ ಪ್ರಯತ್ನ ಇದಾಗಿದೆ. ವಾಟ್ಸಾಪ್, ಫೇಸ್ ಬುಕ್ ಹಾಗು ಹಿತೈಷಿಗಳ ಮಾತುಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಿ ಸಾವಿರಾರು ಜನ MyTemple ಆಪ್ ಗೆ ಚಂದಾದಾರರಾಗಿದ್ದಾರೆ.

ಆಗಸ್ಟ್ 1, 2016ರಲ್ಲಿ ಹಿತೈಷಿಗಳ ಪ್ರೋತ್ಸಾಹದಿಂದ ಹಾಗು ಬೆಂಬಲದಿಂದ, MyTemple ಆಪ್ ಅನ್ನು ಇತಿಹಾಸಕಾರರಾದ ವಿಜಯಲಕ್ಷ್ಮಿ ವಿಜಯಕುಮಾರ್ ಹಾಗು ಲೇಖಕರು ಹಾಗು ಕವಿಗಳಾದ ಡಾ. ಆರ್. ಶತಾವಧಾನಿ ಗಣೇಶ್ ಅವರ ಮುಖ್ಯಸ್ಥಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಈಗ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ವೆಬ್ ಪುಟ ಹಾಗೂ ಅಪ್ಲಿಕೇಷನ್ ಎಲ್ಲರಿಗೂ ಲಭ್ಯವಿದೆ.

ಅದರ ಸಾರ್ವಜನಿಕೆ ಬಿಡುಗಡೆಯ ನಂತರ, ಆಪ್ ನ ದಾಖಲಾತಿಗಳು 60,000 ಕ್ಕೂ ಹೆಚ್ಚು ತಲುಪಿದ್ದು, ಫೇಸ್ ಬುಕ್ ನಲ್ಲಿ 77,000 ಕ್ಕೂ ಹೆಚ್ಚು ಜನ ಫಾಲೋಯರ್ಸ್ ಇದ್ದಾರೆ.

ವಿವಿಧ ಭಾಷೆಗಳಲ್ಲಿ ದೈನಂದಿನ ಕಥೆ

ವಿವಿಧ ಭಾಷೆಗಳಲ್ಲಿ ದೈನಂದಿನ ಕಥೆ

MyTemple ತನ್ನ ಬಳಕೆದಾರರಿಗೆ ವಿವಿಧ ಭಾಷೆಗಳಲ್ಲಿ ದೈನಂದಿನ ಕಥೆಗಳನ್ನು ಕೊಡುತ್ತಾ, ಹಿಂದೂತ್ವದ ವಿವಿಧ ಅಂಶಗಳನ್ನು, ಅದರ ಪರಂಪರೆಗಳನ್ನು, ದೇವಸ್ಥಾನಗಳನ್ನು ಹಾಗು ಪುರಾಣಗಳಿಂದ ತೆಗೆದುಕೊಂಡ ಕಥೆಗಳನ್ನು ಹಾಗು ಇತಿಹಾಸವನ್ನು, ಹಾಡು, ಪ್ರಾರ್ಥನೆ, ಭಜನೆ ಹಾಗು ಇನ್ನಷ್ಟು ವಿಚಾರಗಳಿಗೆ ಸಂಬಂಧ ಪಟ್ಟ ಧ್ವನಿಗಳನ್ನು ಹಾಗು ದೃಶ್ಯಗಳನ್ನು ನೀಡುತ್ತದೆ.

ಚಂದಾದಾರರು ಮಾಹಿತಿ ಹಂಚಿಕೊಳ್ಳಬಹುದು

ಚಂದಾದಾರರು ಮಾಹಿತಿ ಹಂಚಿಕೊಳ್ಳಬಹುದು

ಆಸಕ್ತಿಕರ ವಿಚಾರವೆಂದರೆ ಚಂದಾದಾರರೂ ಕೂಡ ಛಾಯಚಿತ್ರಗಳನ್ನು, ದೃಶ್ಯಗಳನ್ನು ಹಾಗು ಧ್ವನಿಗಳನ್ನು ಕಳುಹಿಸಿದರೆ, ಅದನ್ನು ಪ್ರಕಟಿಸುವ ವ್ಯವಸ್ಥೆ ಇದೆ. ಇದರ ಮೂಲಕ ಅದು ದೇಶಾದ್ಯಂತ ಮಾಹಿತಿ ಹಂಚಿಕೆಯಾಗುತ್ತದೆ. ಸುಮಾರು 15 ಶೇಕಡಾ ವಿಚಾರಗಳು ಬಳಕೆದಾರರೇ ಕಳುಹಿಸಿರುತ್ತಾರೆ.

ಪ್ರಶ್ನೆ ಕೇಳಿ ಉತ್ತರವನ್ನು ಪಡೆಯುತ್ತಾರೆ

ಪ್ರಶ್ನೆ ಕೇಳಿ ಉತ್ತರವನ್ನು ಪಡೆಯುತ್ತಾರೆ

ಬಳಕೆದಾರರು ದೇವಸ್ಥಾನಗಳ ಬಗ್ಗೆ, ಸಂಪ್ರದಾಯಗಳ ಬಗ್ಗೆ, ಆಚರಣೆಗಳ ಬಗ್ಗೆ ಹಾಗು ಹಿಂದುತ್ವದ ವಿವಿಧ ಅಂಶಗಳ ಬಗೆಗಿನ ತಮ್ಮ ಅನುಮಾನಗಳನ್ನು ತಜ್ಞರಿಂದ ಪ್ರಶ್ನೆ ಕೇಳಿ ಉತ್ತರವನ್ನು ಪಡೆಯುತ್ತಾರೆ.

ಸಹ ಸಂಸ್ಥಾಪಕರಾದ ಅರುಣ್ ಶರ್ಮ

ಸಹ ಸಂಸ್ಥಾಪಕರಾದ ಅರುಣ್ ಶರ್ಮ

ಸಂಪ್ರದಾಯಕ್ಕೆ ಹೊಸ ದೈನಂದಿನ ಸಂಪರ್ಕವನ್ನು ಕೊಡ ಬೇಕೆಂಬ ಹಂಬಲದಿಂದ,ನಾವು ಭಾರತದ ಹಾಗು ಹಿಂದುತ್ವದ ಬಗ್ಗೆ ಇರುವ ಅಮೂಲ್ಯವಾದ ವಿಚಾರಗಳನ್ನು ಮೊಬೈಲ್ ಯುಗಕ್ಕೆ ತರಲು ಪ್ರಯತ್ನ ಪಟ್ಟಿದ್ದೇವೆ. ಸ್ಮಾರ್ಟ್ ಫೋನ್ ಮೂಲಕ ತಮ್ಮ ಸಂಪ್ರದಾಯದೊಂದಿಗೆ ತಮ್ಮ ಭಾಷೆಯಲ್ಲಿ ಸಂಪರ್ಕವನ್ನು ಇಟ್ಟುಕೊಳ್ಳುವುದು ಬಹಳ ಜನ ಹಿಂದೂಗಳಿಗೆ ಇಷ್ಟವಾಗುತ್ತದೆ ಎಂದು. ಹಾಗು ನಮ್ಮ ಹೊಣೆ, ಅವರಿಗೆ ಬೇಕಾದ್ದನ್ನು ಅವರ ಭಾಷೆಯಲ್ಲಿ ಕೊಡುವುದು ನಮ್ಮ ಆದ್ಯತೆ

ಎಲ್ಲೆಲ್ಲಿ ಲಭ್ಯ, ಏನೆಲ್ಲ ಸಿಗುತ್ತದ್?

ಎಲ್ಲೆಲ್ಲಿ ಲಭ್ಯ, ಏನೆಲ್ಲ ಸಿಗುತ್ತದ್?

* ಹೆಚ್ಚಿನ ಮಾಹಿತಿಯನ್ನು www.mytempleapp.com ಅಲ್ಲಿ ಪಡೆಯಬಹುದು.
* ಕನ್ನಡ ಸೇರಿದಂತೆ ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಅಪ್ಲಿಕೇಷನ್ ಹಾಗೂ ವೆಬ್ ಪುಟ ಲಭ್ಯ.
* ಆಂಡ್ರಾಯ್ಡ್ ಅಲ್ಲದೆ ಐಒಎಸ್ ನಲ್ಲೂ ಮೈಟೆಂಪಲ್ ವೀಕ್ಷಿಸಬಹುದು.
* ದೇಗುಲಗಳ ಸ್ಥಳ ಪುರಾಣ, ಕಥೆ, ಜತೆಗೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಕೂಡಾ ಆರಂಭಿಸಲಾಗಿದೆ.
* ಪಂಚಾಂಗ ಮತ್ತು ಆಧ್ಯಾತ್ಮಿಕ ವಿಶೇಷ ದಿನಗಳ ಬಗ್ಗೆ ಸೂಚನೆಗಳನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಚಂದಾದಾರರಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Makara Sankranti Special: MyTemple an app created by a Bangalore based team, started its journey earlier this year, as an initiative to make India’s beautiful temples, traditions and culture accessible on smartphones.
Please Wait while comments are loading...