ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಆರ್‌ಬಿಐ ಅಸ್ತು

|
Google Oneindia Kannada News

ಮುಂಬೈ, ಆಗಸ್ಟ್. 20: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬುಧವಾರ ಹೊಸ ನೀತಿಯೊಂದಕ್ಕೆ ಒಪ್ಪಿಗೆ ನೀಡಿದೆ.

ಅಂಚೆ ಇಲಾಖೆ, ರಿಲಯನ್ಸ್‌ ಇಂಡಸ್ಟ್ರೀಸ್‌, ಆದಿತ್ಯ ಬಿರ್ಲಾ ನುವೊ, ವೊಡಾಫೋನ್‌ ಮತ್ತು ಏರ್‌ ಟೆಲ್‌ ಸೇರಿದಂತೆ ಒಟ್ಟು 11 ಸಂಸ್ಥೆಗಳಿಗೆ ಪೇಮೆಂಟ್‌ ಬ್ಯಾಂಕ್‌ ಆರಂಭಿಸಲು ತಾತ್ವಿಕ ಒಪ್ಪಿಗೆ ನೀಡಿದೆ.[ಭಾರತದ ಕರೆನ್ಸಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ]

ಆಯ್ಕೆಯಾದ ಕಂಪನಿಗಳಿಗೆ ಬ್ಯಾಂಕ್ ಆರಂಭಿಸಲು 18 ತಿಂಗಳ ಅವಧಿಗೆ ಒಪ್ಪಿಗೆ ನೀಡಲಾಗುತ್ತದೆ. ಆ ಅವಧಿಯಲ್ಲಿ ನಿಗದಿಪಡಿಸಲಾಗಿರುವ ಷರತ್ತುಗಳನ್ನು ಪೂರೈಸಿದರೆ ಅವುಗಳಿಗೆ ಪರವಾನಗಿ ನೀಡಲಾಗುವುದು ಎಂದು ಆರ್​ಬಿಐ ತಿಳಿಸಿದೆ.

Reserve Bank of India clears 11 payments banks

ಅಲ್ಲದೇ ಚೋಳಮಂಡಲಂ ಡಿಸ್ಟ್ರಿಬ್ಯೂಷನ್‌ ಸರ್ವಿಸಸ್‌, ಟೆಕ್‌ ಮಹೀಂದ್ರಾ, ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿ., (ಎನ್‌ಎಸ್‌ಡಿಎಲ್‌), ಫಿನೊ ಪೇಟೆಕ್‌, ಸನ್ ಫಾರ್ಮಾಸ್‌ ದಿಲೀಪ್‌ ಶಾಂತಿಲಾಲ್‌ ಶಾಂಘ್ವಿ ಮತ್ತು ಪೇಟಿಎಮ್ಸ್‌ ವಿಜಯ್‌ ಶೇಖರ್‌ ಶರ್ಮಾ ಸಂಸ್ಥೆಗಳು ಸಹ ಪೇಮೆಂಟ್‌ ಬ್ಯಾಂಕ್‌ ತೆರೆಯಲು ತಾತ್ವಿಕ ಒಪ್ಪಿಗೆ ಪಡೆದುಕೊಂಡಿವೆ.

ಒಟ್ಟು 41 ಕಂಪನಿಗಳು ಪೇಮೆಂಟ್ ಬ್ಯಾಂಕ್ ಸ್ಥಾಪಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 18 ಕಂಪನಿಗಳಿಗೆ ಒಪ್ಪಿಗೆ ಸಿಕ್ಕಿದೆ. ಮಾರ್ಗಸೂಚಿ ಮತ್ತು ಷರತ್ತುಗಳನ್ನು ಒಂದೂವರೆ ವರ್ಷದವರೆಗೆ ಸರಿಯಾಗಿ ಪಾಲಿಸಬೇಕು. ಅಲ್ಲದೇ ಗ್ರಾಹಕರಿಗೆ ಪೇಮೆಂಟ್‌ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಸೇವೆಗಳನ್ನೂ ತೃಪ್ತಿಕರವಾಗಿ ಒದಗಿಸಿದರೆ ಮಾತ್ರ ಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಬ್ಯಾಂಕ್‌ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ಆರ್‌ಬಿಐ ಸ್ಪಷ್ಟ ನಿರ್ದೇಶನ ನೀಡಿದೆ.[ಭಾರತದಲ್ಲಿ ಚಿನ್ನದ ದರ ಈ ಪರಿ ಇಳಿಯಲು 10 ಕಾರಣ]

ಪೇಮೆಂಟ್‌ ಬ್ಯಾಂಕ್‌ ಎಂದರೇನು?
ವಾಣಿಜ್ಯ ಬ್ಯಾಂಕ್ ನಂತೆ ಪೂರ್ಣ ಪ್ರಮಾಣದ ಕೆಲಸವನ್ನು ಇದು ಮಾಡುವುದಿಲ್ಲ. ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿ ನಡೆಸುವುದನ್ನು ಪೇಮೆಂಟ್ ಬ್ಯಾಂಕ್ ಎಂದು ಕರೆಯಬಹುದು. ಮೊಬೈಲ್‌ ಬ್ಯಾಂಕಿಂಗ್‌ ಸೇವೆ, ಸೂಪರ್‌ ಮಾರ್ಕೆಟ್‌ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಶೀಘ್ರವಾಗಿ ಒದಗಿಸಿಕೊಡುತ್ತದೆ.

ಬೇಡಿಕೆ ಆಧರಿಸಿದ ಠೇವಣಿ ಸಂಗ್ರಹ, ಹಣ ಜಮಾ ಸೇವೆಗಳು, ಇಂಟರ್ನೆಟ್‌ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ. ಮೆಂಟ್‌ ಬ್ಯಾಂಕ್‌ಗಳು ತಮ್ಮ ಖಾತೆದಾರರಿಗೆ ಎಟಿಎಂ ಅಥವಾ ಡೆಬಿಟ್‌ ಕಾರ್ಡ್‌, ಭಿನ್ನ ಸ್ವರೂಪದ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ವಿತರಿಸಬಹುದು.

ಪೇಮೆಂಟ್ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿರುವ ಇತರ ಸಂಸ್ಥೆಗಳ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು ಹಂತಹಂತವಾಗಿ ಅನುಮತಿ ನೀಡಲಾಗುವುದು. ಈಗ ಪ್ರಾಯೋಗಿಕವಾಗಿ ಕೆಲ ಸಂಸ್ಥೆಗಳಿಗೆ ಅನುಮತಿ ನೀಡಿದ್ದು ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರ್ ಬಿಐ ತಿಳಿಸಿದೆ.

English summary
The Reserve Bank of India (RBI) on Wednesday paved the way for payment banks in India, after giving an in principle approval to as many as 11 entities for the creation of payment banks. These include the likes of Bharti Airtel, Tech Mahindra, Reliance Industries, Dilip Shanghavi, Vodafone etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X