ರೆಡಿಂಗ್ಟನ್ ಇಂಡಿಯಾದಿಂದ ಅಕ್ಟೋಬರ್ 7ಕ್ಕೆ ಐಫೋನ್ ಮಾರಾಟ

Posted By:
Subscribe to Oneindia Kannada

ಬೆಂಗಳೂರು, ಸೆ. 11: ಅತ್ಯಂತ ಸುಧಾರಿತ ಕ್ಯಾಮರಾ, ಅತ್ಯುತ್ತಮ ಬ್ಯಾಟರಿ ಒಳಗೊಂಡ, ನೀರು ಮತ್ತು ಧೂಳು ನಿರೋಧಕ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಅಕ್ಟೋಬರ್ 7ರ ಶುಕ್ರವಾರದಿಂದ ರೆಡಿಂಗ್ಟನ್ ಇಂಡಿಯಾ ಲಿಮಿಟೆಡ್ ಭಾರತದಾದ್ಯಂತ 3,000 ರೀಟೇಲ್ ತಾಣಗಳಲ್ಲಿ ಪೂರೈಸಲಿದೆ. ಆಯ್ದ ನಗರಗಳಲ್ಲಿ ಪ್ರಮುಖ ಮಳಿಗೆಗಳಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಬಿಡುಗಡೆ ಮಾಡಲಾಗುತ್ತದೆ.

ಯುಎಸ್ ನಲ್ಲಿ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 9ರಿಂದ ಆರಂಭವಾಗಲಿದ್ದು,ಸೆಪ್ಟೆಂಬರ್ 16ರಿಂದ ಮಾರಾಟ ಆರಂಭವಾಗಲಿದೆ. ಇದೇ ಫೋನ್ ಗಳು ಭಾರತದ ಮಾರುಕಟ್ಟೆಗೆ ಅಕ್ಟೋಬರ್ 7ರಂದು ಪ್ರವೇಶಿಸಲಿದೆ. [ಐಫೋನ್ 7 ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ]

32 ಜಿಬಿಗೆ 60ಸಾವಿರ ರೂಪಾಯಿ ಇರಬಹುದು ಎಂದು ತಜ್ಞರು ಬೆಲೆ ನಿಗದಿ ಮಾಡಿದ್ದಾರೆ. ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈಗಲೂ ಸ್ಯಾಮ್ ಸಂಗ್ ಅಗ್ರಸ್ಥಾನದಲ್ಲಿದೆ ಮಾರುಕಟ್ಟೆಯಲ್ಲಿ ಶೇ 25.3ರಷ್ಟು ಪಾಲು ಹೊಂದಿದೆ. ಎರಡನೇ ಸ್ಥಾನದಲ್ಲಿ ಮೈಕ್ರೋಮ್ಯಾಕ್ಸ್ ಇದ್ದರೆ, ನಂತರದ ಸ್ಥಾನದಲ್ಲಿ ಇಂಟೆಕ್ಸ್ ಇದೆ. ಆಪಲ್ ಐಫೋನ್ ಸೇರಿ ಆಪಲ್ ಉತ್ಪನ್ನಗಳು ಸದ್ಯಕ್ಕೆ ಶೇ 1.9ರಷ್ಟು ಮಾತ್ರ ಪಾಲು ಹೊಂದಿವೆ.

Redington India to sell iPhone 7 & iPhone 7 Plus from 7th October 2016

ರೆಡಿಂಗ್ಟನ್ ಕುರಿತು: ರೆಡಿಂಗ್ಟನ್ 1993ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು ಉದಯೋನ್ಮುಖ ಮಾರುಕಟ್ಟೆಗಳಿಗೆ ಅತ್ಯಂತ ದೊಡ್ಡ ಪೂರೈಕೆ ಸರಣಿ ಸಂಸ್ಥೆಯಾಗಿದೆ. ರೆಡಿಂಗ್ಟನ್ ಸಮೂಹ ಭಾರತ, ಮಧ್ಯಪ್ರಾಚ್ಯ, ಆಫ್ರಿಕಾ, ಟರ್ಕಿ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಸಿಐಎಸ್ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ರೆಡಿಂಗ್ಟನ್ ಎಲ್ಲ ಬಗೆಯ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳಿಗೆ(ಪಿಸಿಗಳು, ಪಿಸಿ ಬಿಲ್ಡಿಂಗ್ ಬ್ಲಾಕ್‍ಗಳು, ನೆಟ್‍ವರ್ಕಿಂಗ್, ಸಾಫ್ಟ್‍ವೇರ್ ಮತ್ತು ಎಂಟr ಪ್ರೈಸಸ್ ಪರಿಹಾರ ಉತ್ಪನ್ನಗಳು) ಮತ್ತು ಗ್ರಾಹಕ ಹಾಗೂ ಲೈಫ್ ಸ್ಟೈಲ್ ಉತ್ಪನ್ನಗಳನ್ನು (ಟೆಲಿಕಾಂ, ಡಿಜಿಟಲ್ ಲೈಫ್ ಸ್ಟೈಲ್ ಉತ್ಪನ್ನಗಳು, ಮನರಂಜನೆಯ ಉತ್ಪನ್ನಗಳು ಮತ್ತು ಡಿಜಿಟಲ್ ಪ್ರಿಂಟಿಂಗ್ ಮಷಿನ್ ಗಳು) 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬ್ರಾಂಡ್ ಗಳಿಗೆ ಸಂಪೂರ್ಣ ಪೂರೈಕೆ ಸರಣಿ ಪರಿಹಾರಗಳನ್ನು ಹಲವಾರು ವರ್ಷಗಳಿಂದ ನೀಡುತ್ತಿದೆ.

ಚೆನ್ನೈನಲ್ಲಿ ಕಾರ್ಪೊರೇಟ್ ಕಛೇರಿ ಹೊಂದಿರುವ ದೇಶಾದ್ಯಂತ 42 ಕಡೆ ಮಾರಾಟ ತಾಣಗಳನ್ನು ಹೊಂದಿದೆ. ಇದರೊಂದಿಗೆ ತನ್ನ ಅಧೀನ ಸಂಸ್ಥೆಗಳೊಂದಿಗೆ 87 ಮಾರಾಟ ಕಛೇರಿಗಳು, 114 ದಾಸ್ತಾನು ಮಳಿಗೆಗಳು ಮತ್ತು 96 ಸ್ವಂತ ಸೇವಾ ಕೇಂದ್ರಗಳು ಮತ್ತು 264 ಪಾಲುದಾರಿಕೆ ಕೇಂದ್ರಗಳನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Redington India Limited will offer iPhone 7 and iPhone 7 Plus, the best, most advanced iPhone ever, featuring new advanced camera systems, the best battery life ever in an iPhone and water and dust resistance, beginning on Friday, October 7 in 3000 retail locations across India.
Please Wait while comments are loading...