200ರೂ. ನೋಟು ಬರುತ್ತಂತೆ, ಅಂತೆ-ಕಂತೆ!

ಇದು ರಿಸರ್ವ್ ಬ್ಯಾಂಕ್ ನ ಅಂಗಳದಿಂದ ನುಸುಳಿ ಹೊರಬಂದಿರುವ ಸುದ್ದಿ. 200 ರುಪಾಯಿ ನೋಟು ಚಲಾವಣೆಗೆ ತರುತ್ತಾರಂತೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ವಕ್ತಾರರೇನೋ ಇಲ್ಲ ಅನ್ನುತ್ತಿದ್ದಾರೆ. ಆದರೆ ಮೂಲಗಳೇನೋ ಬರುತ್ತಂತೆ ಅನ್ನುತ್ತಿವೆ

ಮುಂಬೈ, ಏಪ್ರಿಲ್ 4: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರುಪಾಯಿ ಮುಖಬೆಲೆಯ ನೊಟು ಪರಿಚಯಿಸಲು ಮುಂದಾಗಿದೆ. ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದವರು ತಮ್ಮ ಗುರುತನ್ನು ತಿಳಿಸದಂತೆ ಮನವಿ ಮಾಡಿದ್ದಾರೆ. ಮಾಧ್ಯಮದ ಜತೆಗೆ ಈ ವಿಚಾರ ವಿನಿಮಯ ಮಾಡಿಕೊಳ್ಳುವ ಅಧಿಕಾರ ತಮಗಿಲ್ಲ ಎಂದು ಕೂಡ ಹೇಳಿದ್ದಾರೆ.

ಕೇಂದ್ರ ಸರಕಾರ ಒಮ್ಮೆ ಅಧಿಕೃತವಾಗಿ ಒಪ್ಪಿಗೆ ನೀಡಿದ ಮೇಲೆ ಈ ವರ್ಷದ ಜೂನ್ ನ ನಂತರ 200 ರುಪಾಯಿ ನೋಟಿನ ಮುದ್ರಣ ಆರಂಭವಾಗುತ್ತದೆ. ಆದರೆ ರಿಸರ್ವ್ ಬ್ಯಾಂಕ್ ಇಂಡಿಯಾದ ವಕ್ತಾರ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಕಡಿಮೆ ಮುಖ ಬೆಲೆಯ ನೋಟುಗಳನ್ನು ಪರಿಚಯಿಸಲು ಸರಕಾರ ಕೈಗೊಂಡಿರುವ ಕ್ರಮದ ಭಾಗವಾಗಿ 200 ರುಪಾಯಿ ನೋಟು ಚಾಲ್ತಿಗೆ ಬರಲಿದೆ.[ಹಳೇನೋಟು ಬದಲಿಸಲು ಅನಿವಾಸಿ ಭಾರತೀಯರಿಗೆ ಬಾಗಿಲು ತೆರೆದಿದೆ]

RBI clears proposal to introduce Rs 200 notes

ಕಳೆದ ವರ್ಷ ನವೆಂಬರ್ 8ರಂದು 500, 1000 ರುಪಾಯಿ ಹಳೇ ನೋಟನ್ನು ಚಲಾವಣೆಯಿಂದ ಹಿಂಪಡೆಯಲಾಯಿತು. ಆ ನಂತರ 2000 ಹಾಗೂ 500 ರುಪಾಯಿಯ ಹೊಸ ನೋಟು ಪರಿಚಯಿಸಲಾಯಿತು. ಈ ಹಿಂದೆ ಕೂಡ 2000 ರುಪಾಯಿ ನೋಟಿನ ಚಿತ್ರಗಳು ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಫೊಟೋ ಸೋರಿಕೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ತಿಳಿಸಿತ್ತು. ಆದರೆ ಯಾರಿಗಾದರೂ ಶಿಕ್ಷೆಯಾಯಿತೇ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+