• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ

|

ನವದೆಹಲಿ, ಸೆಪ್ಟೆಂಬರ್ 1: ಭಾರತ ಸರ್ಕಾರವು ಬುಧವಾರವಷ್ಟೇ ಚೀನಾದ 118 ಆ್ಯಪ್‌ಗಳಲ್ಲಿ ನಿಷೇಧಿಸಿದೆ. ಇದರಲ್ಲಿ ಖ್ಯಾತ ಗೇಮಿಂಗ್ ಆ್ಯಪ್ ಪಬ್ಜಿ ಕೂಡ ಒಂದಾಗಿದೆ. ಹೀಗೆ ಸರ್ಕಾರವು ಪಿ.ಯು.ಬಿ.ಜಿ ಯನ್ನು ನಿಷೇಧಿಸಿದ ಬೆನ್ನಲ್ಲೇ, ಟೆನ್ಸೆಂಟ್ ಮಾರುಕಟ್ಟೆ ಮೌಲ್ಯದಲ್ಲಿ ಬರೋಬ್ಬರಿ 14 ಬಿಲಿಯನ್ ಡಾಲರ್ ನಷ್ಟವಾಗಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಗುರುವಾರ ಷೇರುಪೇಟೆಯಲ್ಲಿ ಟೆನ್ಸೆಂಟ್ ಷೇರುಗಳು ಸತತ ಎರಡು ವಹಿವಾಟಿನಲ್ಲಿ ಏರಿಕೆ ಬಳಿಕ ಶೇಕಡಾ 2ರಷ್ಟು ಕುಸಿತ ಕಂಡಿವೆ. ಅಂದರೆ ಟೆನ್ಸೆಂಟ್ ಕಂಪನಿಯ ಒಟ್ಟಾರೆ ಮಾರುಕಟ್ಟೆಯಲ್ಲಿ ಮೌಲ್ಯದಲ್ಲಿ 14 ಬಿಲಿಯನ್ ಡಾಲರ್ ಕರಗಿ ಹೋಗಿದೆ. ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ.

ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳು ನಿಷೇಧ

ಪಬ್ಜಿ ಗೇಮ್‌ ಅನ್ನು ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿಯು ರಚಿಸಿದರೂ, ಚೀನಾದ ಅತಿದೊಡ್ಡ ಗೇಮಿಂಗ್ ಕಂಪನಿಯಾದ ಟೆನ್ಸೆಂಟ್ ತನ್ನ ಮೊಬೈಲ್ ಆವೃತ್ತಿಯನ್ನು ತಂದಿತು. ವಿಶೇಷ ಅಂದರೆ ಪಬ್ಜಿ ಗೇಮ್‌ಗೆ ಭಾರತವು ಬಹುದೊಡ್ಡ ಮಾರುಕಟ್ಟೆಯಾಗಿದೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯವಾದ ಸ್ಮಾರ್ಟ್‌ಫೋನ್ ಮೊಬೈಲ್ ಗೇಮ್‌ಗಳಲ್ಲಿ ಪಬ್‌ಜಿ ಒಂದು. ಭಾರತದಲ್ಲಿ ಮಾತ್ರ, ಅಪ್ಲಿಕೇಶನ್ 175 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.

ಬುಧವಾರವಷ್ಟೇ ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳನ್ನು ಕೇಂದ್ರ ಐಟಿ ಸಚಿವಾಲಯವು ನಿಷೇಧಿಸಿದೆ. ಇದಕ್ಕೂ ಮುನ್ನ ಜೂನ್ 29 ರಂದು, ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆಗೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹೇಳುವ 59 ಜನಪ್ರಿಯ ಚೀನೀ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿತ್ತು.

English summary
After after the Indian government banned PUBG, Tencent lost $14 billion in market value and its shares fell 2% on Thursday, snapping two straight sessions of gain
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X