ಸಿಹಿಸುದ್ದಿ: ಭಾರತೀಯ ತರಕಾರಿ ಮಾರುಕಟ್ಟೆಯಲ್ಲಿ ಈ ತರಕಾರಿ ಬೆಲೆ ಇಳಿಕೆ

ನವದೆಹಲಿ, ಆಗಸ್ಟ್ 01: ಗಣೇಶ ಚತುರ್ಥಿ ಆಸುಪಾಸಿನಲ್ಲಿ ಸಾಮಾನ್ಯವಾಗಿ ಬೆಲೆ ಏರಿಕೆಯು ಜನಸಾಮಾನ್ಯರ ಜೇಬು ಸುಡುತ್ತಿತ್ತು. ಆದರೆ ಈ ಬಾರಿ ತರಕಾರಿ ಮಾರುಕಟ್ಟೆಯಲ್ಲಿನ ಚಿತ್ರಣ ಕೊಂಚ ಬದಲಾವಣೆ ಆಗಿದೆ.

ದೇಶದ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಆಲೂಗಡ್ಡೆ ಬೆಲೆಯಲ್ಲಿ ಶೇ.30ರಷ್ಟು ಇಳಿಕೆಯಾಗಿದ್ದರೆ, ಟೊಮೆಟೊ ಬೆಲೆಯಲ್ಲಿ ಶೇ.20ರಷ್ಟು ಕುಸಿತ ಕಂಡು ಬಂದಿದೆ.

ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಆಲೂಗಡ್ಡೆಯನ್ನು ಈ ಬಾರಿ ಬೆಳೆಯಲಾಗಿತ್ತು, ಆದರೆ ರೈತರ ನಿರೀಕ್ಷೆ ಹುಸಿಯಾಗಿದೆ. ವ್ಯಾಪಾರಿಗಳು ಹೆಚ್ಚಿನ ದಾಸ್ತಾನು ಬಿಡುಗಡೆ ಮಾಡುವುದಕ್ಕೆ ಹೇಳಿದರು. ಇದರ ಪರಿಣಾಮವಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಪ್ರವೇಶಿಸಿದ್ದು, ಬೆಲೆ ಇಳಿಕೆಗೆ ಕಾರಣವಾಯಿತು. ಅದೇ ರೀತಿ ಟೊಮೆಟೊ ವಿಷಯದಲ್ಲಿ ಈ ವರ್ಷ ಉತ್ತಮ ಉತ್ಪಾದನೆ ಆಗಿರುವುದರಿಂದ ಬೆಲೆ ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ.

ಆಂಧ್ರ ಪ್ರದೇಶ ರೈತರಿಂದ ಇದೆಂಥಾ ಬೇಡಿಕೆ?

ಆಂಧ್ರ ಪ್ರದೇಶ ರೈತರಿಂದ ಇದೆಂಥಾ ಬೇಡಿಕೆ?

ಆಂಧ್ರ ಪ್ರದೇಶದ ರೈತರು ತಮ್ಮಿಂದ ಟೊಮೆಟೊ ಉತ್ಪನ್ನವನ್ನು ಖರೀದಿಸುವಂತೆ ರಾಜ್ಯದ ವ್ಯಾಪಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆ ಮೂಲಕ ಸ್ವಲ್ಪ ಮಟ್ಟಿಗೆ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ರಾಜ್ಯದ ವ್ಯಾಪಾರಿಗಳು ತಿಳಿಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಒಂದು ಕಿಲೋಗ್ರಾಂ ಆಲೂಗಡ್ಡೆ ಬೆಲೆ 20 ರೂಪಾಯಿ ಆಗಿದ್ದು, ಇದೀಗ ಅದು 14 ರಿಂದ 16 ರೂಪಾಯಿಗೆ ಇಳಿಕೆಯಾಗಿದೆ, ಎಂದು ಆಲೂಗೆಡ್ಡೆ ಮತ್ತು ಈರುಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ್ ಅರೋರಾ ಹೇಳಿದರು.

ಬೆಲೆ ಕುಸಿತಕ್ಕೆ ಸ್ಥಿರ ಪೂರೈಕೆಯೇ ಕಾರಣ

ಬೆಲೆ ಕುಸಿತಕ್ಕೆ ಸ್ಥಿರ ಪೂರೈಕೆಯೇ ಕಾರಣ

ಸುಧಾರಿತ ಪೂರೈಕೆಯೇ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಇದರ ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ.25-30ರಷ್ಟು ಬೆಲೆ ಕುಸಿದಿದೆ ಎಂದು ಪಶ್ಚಿಮ ಬಂಗಾಳದ ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್‌ನ ಸದಸ್ಯ ಪತಿತ್ ಪಬನ್ ಹೇಳಿದ್ದಾರೆ. "ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಭಾವಿಸಿದ ವ್ಯಾಪಾರಿಗಳು ಸರಕನ್ನು ತಡೆ ಹಿಡಿದಿದ್ದಾರೆ," ಎಂದು ಹೇಳಿದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಆಲೂಗಡ್ಡೆ ಬೆಲೆ ಸ್ಥಿರವಾಗಿದೆ. ಆದ್ದರಿಂದ ಇಲ್ಲಿಂದ ಮುಂದೆ ಬೆಲೆ ಏರಿಕೆ ಆಗುವುದಿಲ್ಲ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಸರಕು ಬಿಡುಗಡೆ ಮಾಡುವುದಕ್ಕೆ ಶುರು ಮಾಡಿದ್ದಾರೆ ಎಂದು ಹೇಳಿದರು.

ಟೊಮೆಟೊ ದರ ಇಳಿಕೆ ಆಗಿದ್ದು ಏಕೆ?

ಟೊಮೆಟೊ ದರ ಇಳಿಕೆ ಆಗಿದ್ದು ಏಕೆ?

ಆಲೂಗೆಡ್ಡೆಯ ಎರಡನೇ ಅತಿದೊಡ್ಡ ಉತ್ಪಾದಕ ಎನಿಸಿರುವ ಪಶ್ಚಿಮ ಬಂಗಾಳದ ಕೋಲ್ಡ್ ಸ್ಟೋರೇಜ್‌ಗಳು ಋತುವಿನ ಆರಂಭದಲ್ಲಿ 60 ಲಕ್ಷ ಟನ್ ಆಲೂಗಡ್ಡೆಯನ್ನು ಲೋಡ್ ಮಾಡಿತ್ತು. ಈ ಸ್ಟಾಕ್‌ನ ಶೇ.40 ಮಾತ್ರ ಇಲ್ಲಿಯವರೆಗೆ ಆಫ್‌ಲೋಡ್ ಆಗಿದೆ. ದೇಶದಲ್ಲಿ ಆಲೂಗೆಡ್ಡೆ ಬೆಳೆ ಗಾತ್ರವು ಈ ವರ್ಷ 53.58 ದಶಲಕ್ಷ ಟನ್‌ಗಳಿಗೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 30 ಲಕ್ಷ ಟನ್ ಕಡಿಮೆಯಾಗಿದೆ. ಹದಿನೈದು ದಿನಗಳ ಹಿಂದೆ ಕೆಜಿಗೆ ₹ 20 ಇದ್ದ ಟೊಮೆಟೊ ಬೆಲೆ ₹ 15 ಕ್ಕೆ ಕುಸಿದಿದೆ ಎಂದು ಟೊಮೆಟೊ ವರ್ತಕರ ಸಂಘದ ಅಧ್ಯಕ್ಷ ಅಶೋಕ್ ಕೌಶಿಕ್ ಹೇಳಿದ್ದಾರೆ.

ಟೊಮೆಟೊ ಸುತ್ತಮುತ್ತಲಿನ ಒಂದು ನೋಟ

ಟೊಮೆಟೊ ಸುತ್ತಮುತ್ತಲಿನ ಒಂದು ನೋಟ

ರೈತರು ಟೊಮ್ಯಾಟೊ ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿಲ್ಲ. ಸಾಮಾನ್ಯವಾಗಿ ಕೆಚಪ್ ತಯಾರಿಕಾ ಉದ್ಯಮಕ್ಕೆ ದೇಸಿ ಟೊಮೆಟೊ ಬದಲಿಗೆ ಹೈಬ್ರಿಡ್ ಟೊಮೆಟೊ ಬೇಕಾಗುತ್ತದೆ. ಇದಲ್ಲದೆ ಬೃಹತ್ ಪೂರೈಕೆ ಮತ್ತು ಕಡಿಮೆ ಶೇಖರಣಾ ಸೌಲಭ್ಯಗಳಿಂದಾಗಿ ಟೊಮೆಟೊಗಳ ಒಳಗೆ ಕಪ್ಪು ಕಲೆಗಳು ಬೆಳೆಯುತ್ತಿವೆ. ಇದನ್ನು ಕೆಚಪ್ ಉದ್ಯಮದಿಂದ ತಿರಸ್ಕರಿಸಲಾಗುತ್ತಿದೆ. ಪ್ರಪಂಚದ ಒಟ್ಟು ಟೊಮೆಟೊ ಉತ್ಪಾದನೆಯಲ್ಲಿ ಭಾರತವು ಶೇ.10ರಷ್ಟು ಉತ್ಪಾದನೆ ಮಾಡುತ್ತದೆ. 2022ರ ಸಾಲಿನಲ್ಲಿ ಭಾರತವು 20 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಟೊಮೆಟೊವನ್ನು ಉತ್ಪಾದಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+