ಫೆ.7ರಂದು ದೇಶದ ವಿವಿಧೆಡೆ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ನವದೆಹಲಿ, ಫೆಬ್ರವರಿ 7: ಏಳು ದಿನಗಳ ವಿರಾಮದ ಬಳಿಕ ಕಳೆದ ಗುರುವಾರದಂದು ಏರಿಕೆ ಕಂಡಿದ್ದ ಇಂಧನ ದರ ನಂತರ ಸ್ಥಿರತೆ ಕಾಣುತ್ತಿದೆ. ಭಾನುವಾರ(ಫೆ.7) ದಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.
ಬಜೆಟ್ 2021: ಸೆಸ್ ಹೆಚ್ಚಾದರೂ ಪೆಟ್ರೋಲ್, ಡೀಸೆಲ್, ಮದ್ಯದ ದರದಲ್ಲಿ ಬದಲಾವಣೆ ಇಲ್ಲ'
ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ದೇಶದಲ್ಲಿ ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಮುಂದಿದೆ..

ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ ಹುಸಿ
ಇಂಧನ ದರ ಸುಮಾರು 5 ರು ನಷ್ಟು ಇಳಿಕೆ ಸಾಧ್ಯತೆ ಬಗ್ಗೆ ಮಾಹಿತಿ ಇತ್ತು. ಮೇ 2020ರಿಂದ ಇಲ್ಲಿ ತನಕ ಪೆಟ್ರೋಲ್ ಬೆಲೆ 14. 28 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11.83 ರು ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ. ಆದರೆ, ಈಗ ಸುಂಕ ಇಳಿಸುವಂತೆ ವಾಹನ ಸವಾರರು, ವಿಪಕ್ಷಗಳಿಂದ ಸತತವಾಗಿ ಆಗ್ರಹಿಸುತ್ತಿದ್ದು ಇಂಧನ ಇಲಾಖೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ, ಬಜೆಟ್ ನಲ್ಲಿ ಹೆಚ್ಚಿನೆ ಸೆಸ್ ಹಾಕಲಾಗಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ ಹಾಕಲಾಗಿದ್ದು, ಪೆಟ್ರೋಲ್ ಬೆಲೆ 2 ರು ಹಾಗೂ ಡೀಸೆಲ್ 4 ರು ಹೆಚ್ಚಳವಾಗುವ ವರದಿ ಬಂದಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಸೆಸ್ ನಿಂದಾಗಿ ಇಂಧನ ಬೆಲೆ ಏರಿಕೆಯಾಗುವುದಿಲ್ಲ ಎಂದರು.

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 07: 89.85
ಫೆಬ್ರವರಿ 06: 89.85 (7 ಪೈಸೆ ಇಳಿಕೆ)
ಫೆಬ್ರವರಿ 05: 89.92 (38 ಪೈಸೆ ಏರಿಕೆ)
ಫೆಬ್ರವರಿ 04: 89.54 (33 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 07: 81.76
ಫೆಬ್ರವರಿ 06: 81.76 (6 ಪೈಸೆ ಇಳಿಕೆ)
ಫೆಬ್ರವರಿ 05: 81.82 (38 ಪೈಸೆ ಏರಿಕೆ)
ಫೆಬ್ರವರಿ 04: 81.44 (34 ಪೈಸೆ ಏರಿಕೆ)

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 07: 86.95
ಫೆಬ್ರವರಿ 06: 86.95
ಫೆಬ್ರವರಿ 05: 86.95 (30 ಪೈಸೆ ಏರಿಕೆ)
ಫೆಬ್ರವರಿ 04: 86.65 (35 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 07: 77.13
ಫೆಬ್ರವರಿ 06: 77.13
ಫೆಬ್ರವರಿ 05: 77.13 (30 ಪೈಸೆ ಏರಿಕೆ)
ಫೆಬ್ರವರಿ 04: 76.83 (35 ಪೈಸೆ ಏರಿಕೆ)

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 07: 93.49
ಫೆಬ್ರವರಿ 06: 93.49
ಫೆಬ್ರವರಿ 05: 93.49 (29 ಪೈಸೆ ಏರಿಕೆ)
ಫೆಬ್ರವರಿ 04: 93.20 (34 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 07: 83.99
ಫೆಬ್ರವರಿ 06: 83.99
ಫೆಬ್ರವರಿ 05: 83.99 (32 ಪೈಸೆ ಏರಿಕೆ)
ಫೆಬ್ರವರಿ 04: 83.67 (37 ಪೈಸೆ ಏರಿಕೆ)

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 07: 89.40 (1 ಪೈಸೆ ಏರಿಕೆ)
ಫೆಬ್ರವರಿ 06: 89.39
ಫೆಬ್ರವರಿ 05: 89.39 (26 ಪೈಸೆ ಏರಿಕೆ)
ಫೆಬ್ರವರಿ 04: 89.13 (22 ಪೈಸೆ ಏರಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 07: 82.34 (1 ಪೈಸೆ ಏರಿಕೆ)
ಫೆಬ್ರವರಿ 06: 82.33
ಫೆಬ್ರವರಿ 05: 82.33 (29 ಪೈಸೆ ಏರಿಕೆ)
ಫೆಬ್ರವರಿ 04: 82.04 (24 ಪೈಸೆ ಏರಿಕೆ)